Asianet Suvarna News Asianet Suvarna News

ರಾಹುಲ್‌ ಭಾರತ್ ಜೋಡೋ ಯಾತ್ರೆಗೆ 71 ಕೋಟಿ ರು. ಖರ್ಚು: 22-23ರಲ್ಲಿ 452 ಕೋಟಿ ರು. ಆದಾಯ

ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71.8 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್‌ ತನ್ನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಕಟಿಸಿದೆ

congress spent 71 crore from Rahul Gandhis Bharat Jodo Yatra akb
Author
First Published Feb 4, 2024, 1:57 PM IST

ನವದೆಹಲಿ: ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್‌ ಜೋಡೋ ಯಾತ್ರೆಗೆ ಬರೋಬ್ಬರಿ 71.8 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್‌ ತನ್ನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಪ್ರಕಟಿಸಿದೆ. ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಇತ್ತೀಚಿನ ತನ್ನ ವಾರ್ಷಿಕ ವರದಿ ಪ್ರಕಾರ, 2022-23ನೇ ಸಾಲಿನಲ್ಲಿ ಕಾಂಗ್ರೆಸ್‌ನ ಒಟ್ಟು ಆದಾಯವು 452 ಕೋಟಿ ರು.ಗಳಷ್ಟಿದೆ. ಅಂದರೆ ಜೋಡೋ ಯಾತ್ರೆಯ ಒಟ್ಟು ವೆಚ್ಚವು ಕಾಂಗ್ರೆಸ್‌ ಬಳಿ ಇರುವ ಒಟ್ಟು ಮೊತ್ತದ ಶೇ.15.3% ರಷ್ಟಿದೆ.

ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ 2022ರ ಸಪ್ಟೆಂಬರ್‌ನಿಂದ 2023ರ ಜನವರಿವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 4,000 ಕಿ.ಮೀ ಪಾದಯಾತ್ರೆ ಮೂಲಕ ಜೋಡೋ ಯಾತ್ರೆ ಹಮ್ಮಿಕೊಂಡಿದ್ದರು.

ಭಾರತೀಯ ಪಡೆಗಳು ನಮ್ಮ ಹಡಗು ಏರಿದ್ದೇಕೆ?: ಮಾಲ್ಡೀವ್ಸ್‌ ಸರ್ಕಾರ ಕ್ಯಾತೆ

ಮಾಲೆ: ಪ್ರವಾಸೋದ್ಯಮ ಹಾಗೂ ಸೇನಾ ಹಿಂತೆಗೆತ ವಿಚಾರದಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿರುವ ಮಾಲ್ಡೀವ್ಸ್, ಈಗ ನೌಕಾಪಡೆ ವಿಷಯದಲ್ಲಿ ತಗಾದೆ ತೆಗೆದಿದೆ. ಇತ್ತೀಚೆಗೆ ತನ್ನ ಸಮುದ್ರ ಜಲಸೀಮೆಯಲ್ಲಿ ಭಾರತದ ನೌಕಾಪಡೆ ಸಿಬ್ಬಂದಿ ತನ್ನ 3 ಹಡಗುಗಳನ್ನು ಅಕ್ರಮವಾಗಿ ಹತ್ತಿದ್ದರು ಎಂದು ಆರೋಪಿಸಿರುವ ಮಾಲ್ಡೀವ್ಸ್‌, ಈ ಬಗ್ಗೆ ಭಾರತ ಸರ್ಕಾರದಿಂದ ಸ್ಪಷ್ಟನೆ ಬಯಸಿದೆ. ತನ್ನ 3 ಮೀನುಗಾರಿಕಾ ದೋಣಿಗಳನ್ನು ಯಾವುದೇ ಅನುಮತಿ ಇಲ್ಲದೆ ಭಾರತೀಯ ಪಡೆಗಳು ಹತ್ತಿದ್ದು ಅಕ್ರಮ ಎಂದು ಮಾಲ್ಡೀವ್ಸ್‌ ಸರ್ಕಾರ ಹೇಳಿದೆ. ಆದರೆ ಭಾರತ ಈ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗೂ ಮಮತಾ ಅ‘ನ್ಯಾಯ’: ಕಾಂಗ್ರೆಸ್‌ ಕಿಡಿ

ಭಾರತೀಯ ನೌಕಾಪಡೆಗೆ ‘ಸಂಧಾಯಕ್‌’ ಹಡಗಿನ ಬಲ

ವಿಶಾಖಪಟ್ಟಣ: ಹಿಂದೂ ಮಹಾಸಾಗರದಲ್ಲಿ ಹಲವು ವಿದೇಶಿ ಹಡಗುಗಳನ್ನು ರಕ್ಷಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ಭಾರತೀಯ ನೌಕಾಪಡೆಗೆ ಐಎನ್‌ಎಸ್‌ ಸಂಧಾಯಕ್‌ ಸೇರ್ಪಡೆಯಾಗಿದೆ. ಈ ಹಡಗು ಪ್ರಮುಖವಾಗಿ ಜಲ ಮಾರ್ಗಗಳಲ್ಲಿ ಸಮೀಕ್ಷೆ ನಡೆಸಿ ಸುರಕ್ಷಿತ ನೌಕಾ ನಕ್ಷೆಯನ್ನು ತಯಾರಿಸಲು ನೆರವಾಗುತ್ತದೆ. ಇದನ್ನು ಶೇ.80ರಷ್ಟು ಸ್ವದೇಶಿ ವಸ್ತುಗಳಿಂದ ತಯಾರಿಸಿದ್ದು, ಶೀಘ್ರದಲ್ಲೇ ಇದೇ ತೆರನಾದ 3 ಹಡಗುಗಳನ್ನು ಸಂಸ್ಥೆ ನೌಕಾಪಡೆಗೆ ಹಸ್ತಾಂತರಿಸಲಿದೆ. ಇದನ್ನು ಉದ್ಘಾಟಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಭಾರತೀಯ ನೌಕಾಪಡೆ ಬಲಿಷ್ಠಗೊಂಡಿದ್ದು, ಕಡಲ್ಗಳ್ಳರ ಕುರಿತು ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ಎಚ್ಚರಿಸಿದರು.

ತಾಜ್‌ಮಹಲ್‌ನಲ್ಲಿ ಉರುಸ್‌ಗೆ ತಡೆ ಕೋರಿ ಹಿಂದೂ ಮಹಾಸಭಾ ಅರ್ಜಿ

ಆಗ್ರಾ: ಯುನೆಸ್ಕೋ ಪಾರಂಪರಿಕ ತಾಣದಲ್ಲಿ ಫೆ.6 ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿರುವ ಉರುಸ್ ಉತ್ಸವಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಆಗ್ರಾ ಸ್ಥಳೀಯ ನ್ಯಾಯಾಲಯದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ. ತಾಜ್‌ ನಿರ್ಮಾತೃ ಶಹಜಹಾನ್‌ನ ಸಾವಿನ ಸ್ಮರಣಾರ್ಥ ಉರುಸ್‌ ಉತ್ಸವ ಆಚರಿಸಲಾಗುತ್ತದೆ. ಅದರೆ ಲಭ್ಯವಿರುವ ಮಾಹಿತಿಯಂತೆ ಮೊಘಲರು ಹಾಗೂ ಬ್ರಿಟಿಷರ ಕಾಲದಲ್ಲೂ ಅಧಿಕೃತವಾಗಿ ತಾಜ್‌ಮಹಲ್‌ ಒಳಗೆ ಉರುಸ್ ನಡೆಸಲು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಜ್‌ಮಹಲ್‌ನಲ್ಲಿ ನಡೆಯುವ ಉರುಸ್‌ ಉತ್ಸವಕ್ಕೆ ಶಾಶ್ವತ ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದ್ದು, ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದೆ.

ಅಸ್ಸಾಂನಲ್ಲಿ ರಾಹುಲ್ ಯಾತ್ರೆ ಮೇಲೆ ಉದ್ದೇಶಪೂರ್ವಕ ದಾಳಿ: ಕಾಂಗ್ರೆಸ್ ಆರೋಪ ಪ್ರತಿಭಟನೆಗೆ ಕರೆ

Follow Us:
Download App:
  • android
  • ios