ನವದೆಹಲಿ(ಮೇ 23)  ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ನಡೆ ಸದಾ ಚರ್ಚೆಯಲ್ಲೆ ಇದೆ. ವಲಸೆ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ರಸ್ತೆಯಲ್ಲಿ ಕುಳಿತು ಸಂವಾದ ಮಾಡಿದ್ದು ಟೀಕೆಗೆ ಗುರಿಯಾಗಿತ್ತು. 

ವಲಸೆ ಕಾರ್ಮಿಕರು ಕಷ್ಟಪಟ್ಟು ಊರಿಗೆ ತೆರಳುತ್ತಿರುವ ದೃಶ್ಯಗಳೂ ತುಂಬಿವೆ. ಅವರ ಕಷ್ಟಗಳನ್ನು ಒಂದೊಂದಾಗಿ ಹೇಳಲಾಗಿದೆ. ರೈಲಿನ ಅಡಿ ಸಿಕ್ಕಿ ಸಾವನ್ನಪ್ಪಿದ್ದನ್ನು ಚಿತ್ರಿಸಲಾಗಿದೆ.

ನವದೆಹಲಿಯ ಸುಖದೇವ್ ವಿಹಾರದ ಬಳಿ ರಾಹುಲ್ ಗಾಂಧಿ ವಲಸೆ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದರು. ಇದನ್ನು ಬಿಜೆಪಿ ದೊಡ್ಡ ನಾಟಕ ಎಂದು ಟೀಕೆ ಮಾಡಿತ್ತು.  ನೂರಾರು ಕಿಲೋಮೀಟರ್ ನಡೆಯುವ ಅನಿವಾರ್ಯ, ಆಹಾರ  ಇಲ್ಲದೇ ಪರಿತಪಿಸುವ ಪರಿಸ್ಥಿತಿ, ಪೊಲೀಸರಿಂದ ಆಗುತ್ತಿರುವ ದೌರ್ಜನ್ಯ  ಎಲ್ಲವನ್ನು ಚಿತ್ರಿಸಲಾಗಿದೆ. 

ಪ್ರಿಯಾಂಕಾ ವಾದ್ರಾ ಬಸ್ ಪ್ರಹಸನ, ತೆರೆ ಬೀಳುವ ಲಕ್ಷಣ ಇಲ್ಲ

ವಲಸೆ ಕಾರ್ಮಿಕರ ನೆರವಿಗೆ ಕಾಂಗ್ರೆಸ್ ಒಂದು ಸಾವಿರ ಬಸ್ ಬಿಡುತ್ತದೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಬೇಕು ಎಂದು ಪ್ರಿಯಾಂಕಾ ವಾದ್ರಾ ಕೇಳಿಕೊಂಡಿದ್ದರು. ಈ ಬಸ್‌ ಗಳಲ್ಲಿ ಅರ್ಧಕ್ಕೆ ಅರ್ಧ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ, ಇನ್ನರ್ಧ ತ್ರಿಚಕ್ರ ವಾಹನಗಳು ಸೇರಿವೆ ಎಂಬ ವಿಚಾರ ಸಹ ವಿವಾದಕ್ಕೆ ಕಾರಣವಾಗಿತ್ತು.