Asianet Suvarna News Asianet Suvarna News

ಮೋದಿ ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಏಳು ಪ್ರಶ್ನೆ

ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ ಸಂಭವಿಸಿದರೂ, ಅಂದಿನಿಂದ ಇಂದಿನವರೆಗೆ ರೈಲುಗಳಿಗೆ ಕವಚ ನಿರೋಧಕ ವ್ಯವಸ್ಥೆಯನ್ನು ಯಾಕೆ ಅಳವಡಿಸಿಲ್ಲ?

congress president mallikarjun kharge questioned modi  government mrq
Author
First Published Jun 18, 2024, 4:34 PM IST

ನವದೆಹಲಿ: ರಾಜ್ಯಸಭಾ ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ (Congress President Mallikarjun Kharge), ಪ್ರಧಾನಿ ಮೋದಿ ಸರ್ಕಾರಕ್ಕೆ ಏಳು ಪ್ರಶ್ನೆಗಳನ್ನು ಕೇಳಿದ್ದಾರೆ. ಹೊಣೆಗಾರಿಕೆಯಿಂದ ತಪ್ಪಿಸುಕೊಳ್ಳುವ ಉದ್ದೇಶದಿಂದ ಮೋದಿ ಸರ್ಕಾರ (Modi Government), ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ವಿಲೀನಗೊಳಿಸಿದೆ ಎಂದು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ (West Bengal's Darjeeling district) ರೈಲು ಅಪಘಾತದಲ್ಲಿ (Railway Accident) 10 ಜನರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲುಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಈ ದುರಂತ ಸಂಭವಿಸಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ. 

ಮೋದಿ ಸರ್ಕಾರಕ್ಕೆ ಏಳು ಪ್ರಶ್ನೆ

ಬಾಲಸೋರ್‌ನಲ್ಲಿ ಭೀಕರ ರೈಲು ದುರಂತ ಸಂಭವಿಸಿದರೂ, ಅಂದಿನಿಂದ ಇಂದಿನವರೆಗೆ ರೈಲುಗಳಿಗೆ ಕವಚ ನಿರೋಧಕ ವ್ಯವಸ್ಥೆಯನ್ನು ಯಾಕೆ ಅಳವಡಿಸಿಲ್ಲ? ಕಳೆದ ಒಂದು ದಶಕದಿಂದ ಭರ್ತಿಯಾಗದೆ ಉಳಿದಿರುವ ರೈಲ್ವೇಯಲ್ಲಿನ ಸುಮಾರು 3,00,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಯಾಕೆ?

ಎನ್‌ಸಿಆರ್‌ಬಿ ವರದಿ ಪ್ರಕಾರ, 2017 ಮತ್ತು 2021 ರ ನಡುವೆ ಸಂಭವಿಸಿದ ರೈಲು ಅಪಘಾತಗಳಲ್ಲಿ 1,00,000 ಜನರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಸಾವುಗಳಿಗೆ ಯಾರು ಹೊಣೆ? ಉದ್ಯೋಗಿಗಳ ಕೊರತೆಯಿಂದ ಲೋಕೋ ಪೈಲಟ್‌ಗಳ ಕೆಲಸದ ಅವಧಿ ಹೆಚ್ಚುತ್ತಿರುವ ಅಪಘಾತ ಸಂಭವಿಸುತ್ತಿವೆ ಎಂದು ರೈಲ್ವೆ ಇಲಾಖೆಯೇ ಒಪ್ಪಿಕೊಂಡಿದೆ. ಇಷ್ಟಾದರೂ ನೇಮಕಾತಿ ಯಾಕೆ ನಡೆಯುತ್ತಿಲ್ಲ? ರೈಲ್ವೆ ಸುರಕ್ಷತಾ ಆಯೋಗವನ್ನು ಏಕೆ ಬಲಪಡಿಸಿಲ್ಲ?

ರಾಷ್ಟ್ರೀಯ ರೈಲು ಸುರಕ್ಷಾ ಕೋಶದ ನಿಧಿಯನ್ನು ಶೇ.75ರಷ್ಟು ಕಡಿಗೊಳಿಸಿರೋದು ಯಾಕೆ? ಈ ಹಣವನ್ನು ತಪ್ಪಾಗಿ ಹಂಚಿಕೆ ಮಾಡಲಾಗಿದೆ ಎಂದು  ಖರ್ಗೆ ಆರೋಪಿಸಿದ್ದಾರೆ. ಈ ಹಣವನ್ನು ರೈಲ್ವೆ ಅಧಿಕಾರಿಗಳು ಅನಗತ್ಯ ವೆಚ್ಚಗಳು ಮತ್ತು ಸೌಕರ್ಯಗಳಿಗೆ ಏಕೆ ಬಳಸುತ್ತಿದ್ದಾರೆ?

ಪುನರ್ಜನ್ಮ ನೀಡಿದ್ದ ವಯನಾಡು ಕ್ಷೇತ್ರ ತ್ಯಜಿಸಿದ ಸಂಸದ ರಾಹುಲ್ ಗಾಂಧಿ!

2.7 ಕೋಟಿ ಪ್ರಯಾಣಿಕರಿಂದ ಟಿಕೆಟ್ ಕ್ಯಾನ್ಸಲ್

ಪ್ರಯಾಣದ ವೆಚ್ಚ ಹೆಚ್ಚಾಗುತ್ತಿದೆ ಎಂದು  ಸ್ಲೀಪರ್ ಕೋಚ್‌ಗಳನ್ನು ಕಡಿಮೆ ಮಾಡಿರುವ ಕಾರಣ ಪ್ರಯಾಣಿಕರ ಸಂಖ್ಯೆ ಇಳಿಮುವಾಗಿರೋದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿಷಾದ ವ್ಯಕ್ತಪಡಿಸಿದರು. ಹೆಚ್ಚು ಜನಸಂದಣಿ ಇರೋ ರೈಲುಗಳಲ್ಲಿ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಕಳೆದ ವರ್ಷ ಸೀಟ್‌ಗಳ ಕೊರತೆಯಿಂದ 2.7 ಕೋಟಿ ಪ್ರಯಾಣಿಕರು ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದೆಲ್ಲವೂ ಮೋದಿ ಸರ್ಕಾರ ಕೋಚ್ ಸಂಖ್ಯೆ ಕಡಿತಗೊಳಿಸುತ್ತಿರುವ ಪರಿಣಾಮವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರೈಲು ಅಪಘಾತಗಳು ಸಂಭವಿಸಿದಾಗ ರೈಲ್ವೆ ಸಚಿವರು ಮಾಧ್ಯಮಗಳ ಕ್ಯಾಮೆರಾ ಬಂದು ಏನು ಆಗಿಲ್ಲ ಎಂದು ಸಮರ್ಥಿಕೊಳ್ಳುತ್ತಾರೆ. ಇಂತಹ ದರುಂತಗಳು ಸಂಭವಿಸಿದಾಗ ಮೋದಿಜೀಯವರೇ, ನಿಮ್ಮನ್ನಾ ಅಥವಾ ರೈಲು ಸಚಿವರನನ್ನ ಹೊಣೆಗಾರರನ್ನಾಗಿ ಮಾಡಬೇಕು ಎಂದು ಖರ್ಗೆ ಕೇಳಿದ್ದಾರೆ.

ರಾಜಕೀಯ ಅಖಾಡಕ್ಕೆ ಪ್ರಿಯಾಂಕಾ, ಚುನಾವಣೇಲಿ ಸ್ಪರ್ಧಿಸುತ್ತಿರೋ ಗಾಂಧಿ ಕುಟುಂಬದ ಹತ್ತನೇ ಸದಸ್ಯೆ!

Latest Videos
Follow Us:
Download App:
  • android
  • ios