Asianet Suvarna News Asianet Suvarna News

Congress Marathon ಗೆದ್ದ ಯುವತಿಗೆ ಮುರಿದ ಸ್ಕೂಟರ್ ಬಹುಮಾನ,ಅಧಿಕಾರ ಇಲ್ಲದಿದ್ದರೂ ಭ್ರಷ್ಟಾಚಾರ ನಿರಂತರ ಎಂದ ಜನ!

  • ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ಮ್ಯಾರಾಥಾನ್ ಆಯೋಜನೆ
  • ಯುಪಿ ಚುನಾವಣೆ ದೃಷ್ಟಿಯಲ್ಲಿ ಮಹಿಳೆಯರಿಗಾಗಿ ಮ್ಯಾರಾಥಾನ್
  • ಕಾಂಗ್ರೆಸ್ ಪಕ್ಷ ಗೆದ್ದ ಯುವತಿಗೆ ಮುರಿದ ಸ್ಕೂಟರ್ ಬಹುಮಾನ
Congress present broken scooty for Raebareli Marathon winning girl people slams Corruption without power ckm
Author
Bengaluru, First Published Jan 4, 2022, 11:53 PM IST

ರಾಯಬರೇಲಿ(ಜ.04): ಉತ್ತರ ಪ್ರದೇಶ ಚುನಾವಣೆ(uttar Pradesh Election) ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್(Congress) ಮತದಾರರನ್ನು ಸೆಳೆಯಲು ಎಲ್ಲಾ ಕಸರತ್ತು ಮಾಡುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್  ರಾಯಬರೇಲಿಯಲ್ಲಿ ಮಹಿಳೆಯರಿಗಾಗಿ ಮ್ಯಾರಥಾನ್ ಸ್ಪರ್ಧೆ ಆಯೋಜಿಸಿತ್ತು. ಲಡ್ಕಿ ಹೂಂ, ಲಡ್ ಸಕ್ತಿ ಹೂಂ(ನಾನು ಮಹಿಳೆ, ಹೋರಾಡಬಲ್ಲೆ)ಧ್ಯೇಯವಾಕ್ಯದೊಂದಿಗೆ ಆಯೋಜಿಸಿದ ಮ್ಯಾರಾಥಾನ್(Girl marathon) ಆರಂಭದಿಂದಲೇ ಹಲವು ವಿಘ್ನ ಎದರಿಸಿತ್ತು. ಇದೀಗ ಮ್ಯಾರಥಾನ್ ಅಂತ್ಯಗೊಂಡ ಬಹುಮಾನ ವಿತರಿಸಿದರೂ ಕಾಂಗ್ರೆಸ್‌ಗೆ ಸಂಕಷ್ಟ ಮುಗಿದಿಲ್ಲ. ಗೆದ್ದ ಯುವತಿಗೆ ಕಾಂಗ್ರೆಸ್ ಮುರಿದ ಸ್ಕೂಟರ್ ನೀಡಿ ಇದೀಗ ಭಾರಿ ಮುಖಭಂಗಕ್ಕೆ ಒಳಗಾಗಿದೆ.

ಹಲವು ಹಿನ್ನಡೆಗಳೊಂದಿಗೆ ಆರಂಭಗೊಂಡ ಮ್ಯಾರಥಾನ್‌ನಲ್ಲಿ ಮಹಿಳೆಯರು, ಹುಡುಗುರಿಯರು, ಬಾಲಕಿಯರು ಪಾಲ್ಗೊಂಡಿದ್ದರು. ಈ ಮ್ಯಾರಾಥಾನ್ ಸ್ಪರ್ದೆಯಲ್ಲಿ ಬಿಎ ಪದವಿ ವಿದ್ಯಾರ್ಥಿನಿ ಮೊದಲ ಬಹುಮಾನ(Winner) ಗೆದ್ದಿದ್ದಾಳೆ. ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ಗೆದ್ದ ವಿದ್ಯಾರ್ಥಿನಿಗೆ ಸ್ಕೂಟರ್(Scooter) ವಿತರಿಸಿತ್ತು. ಈ ಸ್ಕೂಟರ್ ಮೇಲೆ ಕಾಂಗ್ರೆಸ್ ಚಿಹ್ನೆ, ಕಾಂಗ್ರೆಸ್ ನಾಯಕರ ಸ್ಟಿಕ್ಕರ್ ಅಂಟಿಸಲಾಗಿದೆ. ಸಂತಸದಿಂದ ಸ್ಕೂಟರ್ ಪಡೆದ ವಿದ್ಯಾರ್ಥಿನಿ(Student) ಇದೀಗ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ. ಕಾರಣ ಕಾಂಗ್ರೆಸ್ ಯುವತಿಗೆ ನೀಡಿದ್ದು ಮುರಿದ ಸ್ಕೂಟರ್.

DK Suresh Vs Ashwath Narayan: ಡಿಕೆ ಸುರೇಶ್ ವರ್ತನೆಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕಾಂಗ್ರೆಸ್ ಬಹುಮಾನವಾಗಿ ನೀಡಿದ ಸ್ಕೂಟರ್ ಮುರಿದಿದೆ. ಹಿಂಭಾಗದ ಸೇಫ್ಟಿ ಹ್ಯಾಂಡಲ್ ಮುರಿದಿದೆ. ಇನ್ನು ಸೀಟ್ ಒಪನ್ ಮಾಡಿದರೆ ಲಾಕ್ ಆಗುತ್ತಿಲ್ಲ. ಇತ್ತ ಹಿಂಬದಿ ಸವಾರರಿಗೆ ಕಾಲಿಡುವ ಫೂಟ್ ರೆಸ್ಟ್ ಇಲ್ಲ, ಸೈಡ್‌ನಲ್ಲಿರುವ ಸ್ಕ್ರೂಗಳು ಅಲುಗಾಡುತ್ತಿದೆ. ಸ್ಕೂಟರ್ ರೈಡ್ ಮಾಡಲು ಯೋಗ್ಯವಿಲ್ಲ, ಇತ್ತ ಸ್ಕೂಟರ್ ನಿಲ್ಲಿಸಿ ಲಾಕ್ ಮಾಡಲು ಆಗುತ್ತಿಲ್ಲ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಿದ್ಯಾರ್ಥಿನಿ ಅಳಲು ತೋಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

 

ವಿದ್ಯಾರ್ಥಿನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಭ್ರಷ್ಟಾಚಾರ, ಇಲ್ಲದಿದ್ದರೂ ಭ್ರಷ್ಟಾಚಾರ ಮಾಡುತ್ತಿದೆ. ಕನಿಷ್ಠ ಪಕ್ಷ ಒಂದು ಸ್ಕೂಟರ್ ಸರಿಯಾಗಿ ನೀಡಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಇನ್ನು ಯೋಜನೆಗಳನ್ನು, ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಕಾಂಗ್ರೆಸ್ ಸಾಧ್ಯವಾಗುತ್ತೋ? ಎಂದು ಪ್ರಶ್ನಿಸಿದ್ದಾರೆ. 

5 States Elections: ಯೋಗಿ ಆಡಳಿತಕ್ಕೆ ಬ್ರೇಕ್ ಹಾಕುವ ಶಕ್ತಿ ಯಾರಿಗಿದೆ.? ಸಮೀಕ್ಷೆ ಹೀಗೆ ಹೇಳಿದೆ

ಮತದಾರರನ್ನು ಸೆಳೆಯಲು ಕಾಂಗ್ರೆಸ್ ಆಯೋಜಿಸಿದ ಮಹಿಳೆಯರಿಗಾಗಿ ಮ್ಯಾರಥಾನ್ ಇದೀಗ ಮತ್ತಷ್ಟು ಸಂಕಷ್ಟವನ್ನೇ ತಂದಿದೆ. ಮ್ಯಾರಾಥಾನ್ ಆರಂಭದಲ್ಲೇ ನೂಕು ನುಗ್ಗಲು ಸಂಭವಿಸಿತ್ತು. ಅಸಮರ್ಪಕ ಆಯೋಜನೆಯಿಂದ ಮಕ್ಕಳು, ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರು ಸೇರಿದ ಮ್ಯಾರಾಥಾನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನೂಕು ನುಗ್ಗಲಿನಿಂದ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಹಲವರು ನೆಲಕ್ಕೆ ಬಿದ್ದಿದ್ದಾರೆ. 

 

ಅವಘಡದ ಬೆನ್ನಲ್ಲೇ ಕಾಂಗ್ರೆಸ್ ನೇರವಾಗಿ ಇದು ಬಿಜೆಪಿ ಕೈವಾಡ ಎಂದಿತ್ತು. ಜಿಲ್ಲಾಡಳಿತದ ಅಸಮಪರ್ಕ ನಿರ್ವಹಣೆ ಹಾಗೂ ಬಿಜೆಪಿ ಪಿತೂರಿಯಿಂದ ನೂಕು ನುಗ್ಗಲು ಸಂಭವಿಸಿದೆ. ಬಿಜೆಪಿ ನೂಕು ನುಗ್ಗಲು ಸೃಷ್ಟಿಸಿದೆ ಅನ್ನೋ ಅರ್ಥದಲ್ಲಿ ಕಾಂಗ್ರೆಸ್ ಆರೋಪ ಮಾಡಿತ್ತು. ಇದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡಿತ್ತು. ಬಾಲಕಿಯರು, ವಿದ್ಯಾರ್ಥಿನಿಯರನ್ನು ನಿಮ್ಮ ರಾಜಕಾರಣಕ್ಕೆ ಎಳೆದು ತರಬೇಡಿ. ಈ ನೀಚ ರಾಜಕೀಯಕ್ಕೆ ಯಾವುದೇ ಪಕ್ಷ ಇಳಿಯಬಾರದು ಎಂದು ಖಡಕ್ ತಿರುಗೇಟು ನೀಡಿತ್ತು. 

ಈಗಾಗಲೇ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರ ಕಡೆ ಜನರ ಒಲವು ಇಲ್ಲ. ಹೀಗಾಗಿ ಪ್ರಿಯಾಂಕಾ ಮಹಿಳೆ ಅಸ್ತ್ರ ಪ್ರಯೋಗಿಸಿದ್ದಾರೆ.  ಮತಗಳಿಸಲು ಉತ್ತರ ಪ್ರದೇಶದ ಪ್ರಮುಖ ಕ್ಷೇತ್ರಗಳಲ್ಲಿ ಮ್ಯಾರಾಥಾನ್ ಆಯೋಜಿಸಿ ಮಹಿಳೆಯರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಆದರೆ ನಿಮ್ಮ ಉದ್ದೇಶ ಈಡೇರಿಸಲುು ವಿದ್ಯಾರ್ಥಿನಿಯರನ್ನು ರಾಜಕೀಯಕ್ಕೆ ಎಳೆದುತರುವುದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.

Follow Us:
Download App:
  • android
  • ios