ಕಾಂಗ್ರೆಸ್‌ನಿಂದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್‌ಗೆ ನೀಡದ ಸತ್ಕಾರ ಗಾಂಧಿ ಕುಟುಂಬಕ್ಕೆ..!

ಗಾಂಧಿ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC)ಯಲ್ಲಿ ಅಜೀವ ಸ್ಥಾನ ನೀಡುವ ಕುರಿತು ಘೋಷಣೆ ಮಾಡಲು ಪಕ್ಷ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.

Congress Party will declare Gandhi family likely to be lifetime member of CWC may announcement in Raipur conference akb

ನವದೆಹಲಿ: ಗಾಂಧೀ ಕುಟುಂಬ ಹೊರತುಪಡಿಸಿದ ಕಾಂಗ್ರೆಸ್‌ ಊಹಿಸಲು ಸಾಧ್ಯವಿಲ್ಲ ಎಂಬ ವಾದಗಳ ನಡುವೆಯೇ, ಗಾಂಧಿ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC)ಯಲ್ಲಿ ಅಜೀವ ಸ್ಥಾನ ನೀಡುವ ಕುರಿತು ಘೋಷಣೆ ಮಾಡಲು ಪಕ್ಷ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ. ಇದೇ ಫೆ.24-26ರವರೆಗೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ (Raipur) ಎಐಸಿಸಿ ಮಹಾಧಿವೇಶನ ಇದೆ. ಅಲ್ಲಿ, ಪಕ್ಷಕ್ಕೆ ಗಾಂಧೀ ಕುಟುಂಬ ಸಲ್ಲಿಸಿರುವ ಅಮೂಲ್ಯ ಕೊಡುಗೆ ಹಿನ್ನೆಲೆಯಲ್ಲಿ ಅವರಿಗೆ ಸಿಡಬ್ಲ್ಯುಸಿಯಲ್ಲಿ ಆಜೀವ ಸದಸ್ಯತ್ವದ ನೀಡುವ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಮ್ಮೆ ಕಾಂಗ್ರೆಸ್‌ನ ಅಧ್ಯಕ್ಷರಾದವರು (Congress president) ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಆಜೀವ ಸದಸ್ಯತ್ವ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಈ ಗಾಂಧೀ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರದ ಮಾಜಿ ಪ್ರಧಾನಿ ಮತ್ತು ಎಐಸಿಸಿ ಅಧ್ಯಕ್ಷ ಪಿ.ವಿ.ನರಸಿಂಹರಾವ್‌ (PV Narasimha Rao) ಅವರಿಗೆ ಈ ರೀತಿಯ ಆಜೀವ ಸ್ಥಾನಮಾನ ನೀಡಿರಲಿಲ್ಲ. ಹೀಗಾಗಿ ಗಾಂಧೀ ಕುಟುಂಬದಲ್ಲಿ ಯಾರಾರ‍ಯರಿಗೆ ಈ ಸ್ಥಾನಮಾನ ನೀಡಲಾಗುತ್ತದೆ ಎಂಬುದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Kalburgi: ಕಾಂಗ್ರೆಸ್ ಸದಸ್ಯತ್ವ ಅಭಿಯಾನ ವೇಳೆ ಕಾರ್ಯಕರ್ತರಿಂದ ಗಲಾಟೆ

ಕಳೆದ ವರ್ಷ ನಡೆದ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸದಸ್ಯರು ಭಾಗಿಯಾಗಿರಲಿಲ್ಲ. ಹೀಗಾಗಿ ಪಕ್ಷದಿಂದ ಕುಟುಂಬ ದೂರವಾಗುತ್ತಿರಬುದು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು. ಆದರೆ ಇದೀಗ ಗಾಂಧಿ ಕುಟುಂಬದ ಸದಸ್ಯರಿಗೆ ಪಕ್ಷದ ಕಾಯಕಾರಿ ಸಮಿತಿಯಲ್ಲಿ ಆಜೀವ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆ.

ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಗಿಫ್ಟ್, ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್

Latest Videos
Follow Us:
Download App:
  • android
  • ios