ನವದೆಹಲಿ(ಜ.01): ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎದುರಿಸುವ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದೆ.

ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ಹೊಸ ವರ್ಷವು ನಮಗೆಲ್ಲಾ ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದೆ. ಅಲ್ಲದೇ ಮೋದಿ ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಪಕ್ಷದ ಪ್ರಮುಖ ನಿರ್ಣಯ  ಎಂದು ಕಾಂಗ್ರೆಸ್ ತಿಳಿಸಿದೆ.

ನೋಟ್ ಬ್ಯಾನ್‌ಗಿಂತಲೂ ಎನ್‌ಆರ್‌ಸಿ, ಎನ್‌ಪಿಆರ್ ಘೋರ: ರಾಹುಲ್ ಗಾಂಧಿ!

2020ರಲ್ಲಿ ದೇಶದ ರಾಜಕೀಯ ಪುನರುತ್ಥಾನವನ್ನು ಕಾಣಲಿದೆ. ಸಂವಿಧಾನ ಪರ ಮತ್ತು ಭಾರತ ಪರ ಶಕ್ತಿಗಳು ಒಗ್ಗೂಡಿ ಮೋದಿ ಸರ್ಕಾರದ ಭಾರತೀಯ ವಿರೋಧಿ ರಾಜಕೀಯವನ್ನು ಮಣಿಸಲಿದೆ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಇದೇ ರೀತಿ ಕಾಂಗ್ರೆಸ್‌ನ ಪ್ರತ್ಯೇಕ ನಾಯಕರು ಕೂಡ ಹೊಸ ವರ್ಷದ ಶುಭಾಶಯ ಕೋರಿದ್ದು, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ರಾಜಕೀಯೇತರ ಶುಭ ಹಾರೈಕೆ ಗಮನ ಸೆಳೆದಿದೆ.