Asianet Suvarna News Asianet Suvarna News

ರಾಹುಲ್‌ ಗಾಂಧಿಗೆ ಎದುರಾಯ್ತು 'ಮದ್ವೆ ಯಾವಾಗ?' ಪ್ರಶ್ನೆ, ಕಾಂಗ್ರೆಸ್‌ ನಾಯಕ ಹೇಳಿದ್ದೇನು?

ರಾಹುಲ್‌ ಗಾಂಧಿ ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲೂ ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಇತ್ತೀಚೆಗೆ ರಾಹುಲ್‌ ಗಾಂಧಿಗೆ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರು ಉತ್ತರವನ್ನೂ ನೀಡಿದ್ದಾರೆ.
 

Congress Leader  Rahul Gandhi was asked about marriage plans during poll rally in  Rae Bareli san
Author
First Published May 13, 2024, 5:54 PM IST | Last Updated May 13, 2024, 5:54 PM IST

ನವದೆಹಲಿ (ಮೇ.13): ಈಗಾಗಲೇ ವಯನಾಡ್‌ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ರಾಹುಲ್‌ ಗಾಂಧಿ ಈಗ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದಲೂ ಸ್ಪರ್ಧೆಗೆ ಅಣಿಯಾಗಿದ್ದಾರೆ. ಇತ್ತೀಚೆಗೆ ಅವರು ಪ್ರಚಾರ ಕಾರ್ಯಕ್ರಮದ ವೇಳೆ ಭಾಗಿಯಾಗಿದ್ದಾಗ, ಮದುವೆ ಪ್ಲ್ಯಾನ್‌ ಬಗ್ಗೆ ಜನರೇ ಪ್ರಶ್ನೆ ಮಾಡಿದ್ದರು. ಮದ್ವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಿದ್ದಂತೆ, 'ಈಗ ಬೇಗ ಆಗಲೇಬೇಕಾಗಿದೆ..' ಎಂದು ರಾಹುಲ್‌ ಗಾಂಧಿ ತಮಾಷೆಯಾಗಿ ಹೇಳಿದ ಬೆನ್ನಲ್ಲಿಯೇ ಪ್ರಚಾರದ ವೇಳೆ ಇದ್ದ ಜನ ಕರತಾಡನ ಮಾಡಿದ್ದಾರೆ. 2024 ರ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ, ಸಮಾವೇಶದಲ್ಲಿ ಅವರ ಸಹೋದರಿ ಮತ್ತು ಸಹ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಯಲ್ಲಿ ಭಾಗಿಯಾಗಿದ್ದರು. ಈ ನಡುವೆ, 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಅವರನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಪಕ್ಷದ ನಿಷ್ಠಾವಂತ ಸದಸ್ಯ ಕೆಎಲ್ ಶರ್ಮಾ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ.

1981 ರಿಂದ 1991 ರಲ್ಲಿ ಅವರ ಮರಣದವರೆಗೂ ಸ್ಥಾನವನ್ನು ಹೊಂದಿದ್ದ ಅವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಾದಿಯಲ್ಲಿಯೇ ಸಾಗಿದ ಸರಾಹುಲ್‌ ಗಾಂಧಿ,  2004 ರಿಂದ 2019 ರವರೆಗೆ ರಾಹುಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಮೇಥಿಯು ಗಾಂಧಿ ಕುಟುಂಬಕ್ಕೆ ಮೊದಲಿನಿಂದಲೂ ಭದ್ರಕೋಟೆಯಾಗಿತ್ತು.

ಸೋನಿಯಾ ಗಾಂಧಿ ಅವರು 1999 ರಲ್ಲಿ ಅಮೇಥಿಯನ್ನು ಪ್ರತಿನಿಧಿಸಿದರು, 2004 ರಲ್ಲಿ ರಾಹುಲ್‌ಗೆ ಈ ಕ್ಷೇತ್ರವನ್ನು ಹಸ್ತಾಂತರಿಸಿದರು. ಅದೇ ರೀತಿ, ರಾಯ್ ಬರೇಲಿ ಕೂಡ ಗಾಂಧಿ ಕುಟುಂಬಕ್ಕೆ ಭದ್ರಕೋಟೆಯಾಗಿದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮೂರು ಬಾರಿ ಈ ಕ್ಷೇತ್ರದಲ್ಲಿ ಜಯ ಕಂಡಿದ್ದರೆ, ಅವರ ಪತಿ, ಕಾಂಗ್ರೆಸ್ ನಾಯಕ ಫಿರೋಜ್ ಗಾಂಧಿ ಅವರು 1952 ಮತತ್ತು 1957ರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ರಾಯ್ ಬರೇಲಿಯಲ್ಲಿ ಮರು ಆಯ್ಕೆ ಬಯಸುವುದರ ಜೊತೆಗೆ, ರಾಹುಲ್ ಗಾಂಧಿ ಕೇರಳದ ವಯನಾಡಿನಿಂದಲೂ ಸ್ಪರ್ಧೆ ಮಾಡಿದ್ದಾರೆ. ರಾಯ್ ಬರೇಲಿಯಲ್ಲಿ ಅವರು ಕಾಂಗ್ರೆಸ್ ಪಕ್ಷಾಂತರಿ ಮತ್ತು ಮೂರು ಬಾರಿ ಎಂಎಲ್ ಸಿ ಆಗಿರುವ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಎದುರಿಸಲಿದ್ದಾರೆ. ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮೇ 20 ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ 5,34,918 ಮತಗಳನ್ನು ಪಡೆದು ಗೆಲುವು ಕಂಡಿದ್ದರೆ, ದಿನೇಶ್ ಪ್ರತಾಪ್ ಸಿಂಗ್ ಅವರು 3,67,740 ಮತಗಳನ್ನು ಗಳಿಸುವ ಮೂಲಕ ದೊಡ್ಡ ಮಟ್ಟದ ಪ್ರತಿರೋಧ ನೀಡಿದ್ದರು.

ರಾಹುಲ್‌ ಗಾಂಧಿ ಜೊತೆ ಚರ್ಚೆಗೆ BJYM ಉಪಾಧ್ಯಕ್ಷ ಅಭಿನಾ ಪ್ರಕಾಶ್‌ರನ್ನ ನೇಮಿಸಿದ ಬಿಜೆಪಿ!

ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿಯವರ ಮೊದಲ ಪ್ರಮುಖ ಪ್ರಚಾರ ಕಾರ್ಯಕ್ರಮವಾಗಿದೆ. ಪ್ರಿಯಾಂಕಾ ಗಾಂಧಿ ಅವರು ರಾಯ್ ಬರೇಲಿ ಮತ್ತು ಅಮೇಠಿ ಎರಡರಲ್ಲೂ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ, ಈ ಪ್ರಮುಖ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ನಾಯಕರು ಹೋರಾಟ ಮಾಡುತ್ತಿದ್ದಾರೆ.

ರಾಹುಲ್‌ ಜೊತೆ ಚರ್ಚೆಗೆ ಒಪ್ಪಲು ಮೋದಿಗೆ ಇನ್ನೂ ಧೈರ್ಯ ಬಂದಿಲ್ಲ: ಜೈರಾಂ ರಮೇಶ್‌

Latest Videos
Follow Us:
Download App:
  • android
  • ios