Congress Gandhidoots : ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡ್ತಾರೆ "ಗಾಂಧಿದೂತರು"!

ಸಾಮಾಜಿಕ ಜಾಲ ತಾಣದಲ್ಲಿ ಪ್ರಖ್ಯಾತಿಗೆ ಕಾಂಗ್ರೆಸ್ ಪ್ರಯತ್ನ
ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡೋಕೆ ಇರ್ತಾರೆ ಗಾಂಧಿದೂತರು
10 ಸಾವಿರ ಗಾಂಧಿದೂತರನ್ನು ನೇಮಕ ಮಾಡಿಕೊಳ್ಳಲಿದೆ ಕಾಂಗ್ರೆಸ್

Congress is appointing 10000 social media warriors as Gandhidoots san

ನವದೆಹಲಿ (ಜ.5): ಚುನಾವಣೆಯ ಸಮಯ ಬಂತೆದರೆ ರಾಜಕೀಯ ಪಕ್ಷಗಳ ನಾಯಕರಿಗೆ ಎದುರಾಗುವ ದೊಡ್ಡ ಸಮಸ್ಯೆ ಸಾಮಾಜಿಕ ಮಾಧ್ಯಮಗಳು. ಅದರಲ್ಲೂ ಈ ಫೇಕ್ ನ್ಯೂಸ್ (Fake News) ಹಾಗೂ ಫ್ಯಾಕ್ಟ್ ಚೆಕ್ (Fact Check) ಮಾಡದೇ ಪ್ರಕಟ ಮಾಡುವ ಪೋಸ್ಟ್ ಗಳಿಂದ ನಾಯಕರು ಕೆಲವೇ ಕ್ಷಣದಲ್ಲಿ ಜನಸಾಮಾನ್ಯರಿಂದ ಟೀಕೆ ಎದುರಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು (Social Media) ಬಳಕೆ ಮಾಡುವ ವಿಚಾರದಲ್ಲಿ ಭಾರತೀಯ ಜನತಾ ಪಕ್ಷ  (BJP) ಎಷ್ಟು ಮುಂದಿದೆಯೋ ಕಾಂಗ್ರೆಸ್ (Congress) ಪಕ್ಷ ಅಷ್ಟೇ ಹಿಂದಿದೆ ಎನ್ನುವುದೂ ಅಷ್ಟೇ ಸತ್ಯ.

ಸೈಬರ್ ಜಗತ್ತಿನಲ್ಲಿ ತಮ್ಮ ಪಕ್ಷದ ವಿರುದ್ಧ ಪಕ್ಷದ ನಾಯಕರ ವಿರುದ್ಧ ಫೇಕ್ ನ್ಯೂಸ್ ಗಳನ್ನು ಕಂಡುಹಿಡಿಯುವ ಸಲುವಾಗಿ "ಗಾಂಧಿದೂತ"ರನ್ನು (Gandhidoots) ನೇಮಕ ಮಾಡಲು ಕಾಂಗ್ರೆಸ್ ಮುಂದಾಗಿದೆ. ಮುಂಬರುವ ಪಂಚ ರಾಜ್ಯಗಳ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾಗಳಲ್ಲಿ ಫೇಕ್ ನ್ಯೂಸ್ ಹಾಗೂ ಫ್ಯಾಕ್ಟ್ ಚೆಕ್ ಮಾಡುವ ಸಲುವಾಗಿಯೇ ಟೀಮ್ ಇರಲಿದ್ದು, ಇವರಿಗೆ "ಗಾಂಧಿದೂತರು" ಎಂದು ಹೆಸರಿಡಲಾಗಿದೆ.

ಕನಿಷ್ಠ 10 ಸಾವಿರ ಗಾಂಧಿದೂತರನ್ನು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಟೀಮ್ ಗೆ ಸೇರಿಸಿಕೊಳ್ಳುವ ಗುರಿಯಲ್ಲಿ ರಾಷ್ಟ್ರೀಯ ಪಕ್ಷವಿದೆ. ಇದು ಸೈಬರ್ ಜಗತ್ತಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದಾಳಿಯನ್ನು ಎದುರಿಸಲು ಕಾಂಗ್ರೆಸ್ ಗೆ ಸಹಾಯ ಮಾಡಲಿದೆ. ಅದರೊಂದಿಗೆ ಕಾಂಗ್ರೆಸ್ ಪಕ್ಷವು ರಾಜ್ಯಮಟ್ಟದಿಂದ (State Level) ಪ್ರತಿ ವಿಧಾನಸಭಾ (assembly)ಕ್ಷೇತ್ರದವರೆಗೆ ತಲುಪುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ರಚನೆಯನ್ನು ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

Mekedatu Politics: 'ಪಾದಯಾತ್ರೆಗೂ ಮುನ್ನವೇ ಬೊಮ್ಮಾಯಿ ಸರ್ಕಾರಕ್ಕೆ ನಡುಕ'
"ನಾವು ರಾಜ್ಯದಾದ್ಯಂತ ನಮ್ಮ ಸಾಮಾಜಿಕ ಮಾಧ್ಯಮದ ಸ್ವಯಂಸೇವಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನ ನೀಡಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗಾಂಧಿದೂತರನ್ನು ನೇಮಕಮಾಡಲಿದ್ದೇವೆ ಹಾಗೂ ಅವರಿಗೆ ಪಕ್ಷದ ಸಿದ್ಧಾಂತ ಹಾಗೂ ಮಹಾತ್ಮ ಗಾಂಧೀಜಿ ಅವರ ನಂಬಿಕೆಯ ಬಗ್ಗೆ ತರಬೇತಿ ನೀಡಲಾಗುತ್ತದೆ. ಈ ಸಂದೇಶವನ್ನು ವ್ಯಾಟ್ಸ್ ಆಪ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ತಲುಪುವಂತೆ ಮಾಡುತ್ತಾರೆ" ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷ ವಿಶಾಲ್ ಮುತ್ತೇಮ್ವಾರ್ (Vishal Muttemwar) ಹೇಳಿದ್ದಾರೆ. ಪಕ್ಷದ ಕುರಿತಾಗಿ ಒಂದು ಉತ್ತಮ ನಿರೂಪಣೆಯನ್ನು ನಾವು ಬಯಸುತ್ತೇವೆ. ಅದಕ್ಕಾಗಿ ನಮಗೆ ಬೆಂಬಲಿಗರ ಅಗತ್ಯವಿದೆ ಎಂದು ಹೇಳಿದ್ದಾರೆ.

UP Elections: ಚುನಾವಣೆ ಮೇಲೆ ಕೊರೋನಾ ಕರಿಛಾಯೆ, ಮೋದಿ ಹಾಗೂ ಕಾಂಗ್ರೆಸ್ ರ‍್ಯಾಲಿ ರದ್ದು!
ಪ್ರಸ್ತುತ, ಮಹಾರಾಷ್ಟ್ರದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ಸುಮಾರು 10 ಕೋರ್ ಟೀಮ್ ಸೇರಿದಂತೆ ಸುಮಾರು 425 ಬಲವನ್ನು ಹೊಂದಿದೆ. ಇದು ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ನಾಯಕರನ್ನು ಸಹ ಹೊಂದಿದೆ. ಆದಾಗ್ಯೂ, ಇದು ಸಾಮಾಜಿಕ ಮಾಧ್ಯಮದಲ್ಲಿ ಕೇಂದ್ರೀಕೃತ ಸಂದೇಶಕ್ಕಾಗಿ ಪ್ರತಿ ರಾಜ್ಯ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40 ರಿಂದ 50 ಸ್ವಯಂಸೇವಕರನ್ನು ನೇಮಿಸುವ ಮೂಲಕ ತನ್ನ ಸಾಮಾಜಿಕ ಮಾಧ್ಯಮ ಯೋಧರ ಸಂಖ್ಯೆಯಲ್ಲಿ ಹೆಚ್ಚಳವನ್ನು ಬಯಸಿದೆ. ಈ ಗಾಂಧಿದೂತರು ಪೋಸ್ಟ್ ಗಳು ಹಾಗೂ ಮೀಮ್ ಗಳನ್ನು ಮಾಡುವುದರೊಂದಿಗೆ ಯಾವ ವಿಷಯಕ್ಕೆ ಪ್ರಾಧಾನ್ಯತೆ ನೀಡಬೇಕು, ಫ್ಯಾಕ್ಟ್ ಚೆಕ್ ಹಾಗೂ ಫೇಕ್ ನ್ಯೂಸ್ ಗಳ ಪತ್ತೆಯನ್ನೂ ಮಾಡುತ್ತಾರೆ. ನಮ್ಮ ಪಕ್ಷದ ನಾಯಕರಾದ ಮಹಾತ್ಮ ಗಾಂಧಿ, ಜವಹರಲಾಲ್ ನೆಹರು ಹಾಗೂ ಸರ್ದಾರ್ ಪಟೇಲ್ ಅವರ ಕುರಿತಾಗಿ ಇರುವ ಫೇಕ್ ನ್ಯೂಸ್ ಗಳನ್ನು ಇವರು ಪತ್ತೆ ಮಾಡಿ ಪೋಸ್ಟ್ ಮಾಡುತ್ತಾರೆ ಎಂದು ವಿವರಿಸಿದ್ದಾರೆ.

Latest Videos
Follow Us:
Download App:
  • android
  • ios