ಜಿ20 ಔತಣಕ್ಕೆ ಮಮತಾ ಬ್ಯಾನರ್ಜಿ ಹೋಗಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪ

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಆಯೋಜಿತವಾಗಿದ್ದ ಔತಣ ಕೂಟದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದನ್ನು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chaudhary) ಟೀಕಿಸಿದ್ದಾರೆ.

Congress has criticized Bengal CM Mamata Banerjees participation in the dinner party organized by president on the sidelines of the G20 summit akb

ಕೋಲ್ಕತಾ: ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಆಯೋಜಿತವಾಗಿದ್ದ ಔತಣ ಕೂಟದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದನ್ನು ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan Chaudhary) ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳ ಇಂಡಿಯಾ ಕೂಟದಲ್ಲಿ ಮತ್ತೊಂದು ಬಿರುಕು ಬಯಲಾದಂತಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಅಧೀರ್‌, ‘ಕೇಂದ್ರದ ತಾರತಮ್ಯ ಹಿನ್ನೆಲೆಯಲ್ಲಿ ಹಲವು ಬಿಜೆಪಿಯೇತರ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಔತಣಕ್ಕೆ ಗೈರಾಗಿದ್ದರು. ಹೀಗಿರುವಾಗ ಮಮತಾ ಅಲ್ಲಿಗೆ ತೆರಳುವ ಅವಶ್ಯಕತೆ ಏನಿತ್ತು? ಬೇರೆ ಎಲ್ಲರಿಗಿಂತಲೂ ಮೊದಲೇ ಮಮತಾ ದೆಹಲಿ ಸೇರಿಕೊಂಡಿದ್ದರು. ಔತಣದಲ್ಲಿ ಅಮಿತ್‌ ಶಾ ಪಕ್ಕವೇ ನಿಂತಿದ್ದರು. ಅವರ ಹೋಗದಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಇಂಥ ನಡೆ ಇಂಡಿಯಾ ಮೈತ್ರಿಕೂಟದ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದರು.

ಈ ನಡುವೆ ಅಧೀರ್‌ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ ಸಂಸದ ಸಂತನು ಸೇನ್‌ (santanu sen), ಮುಖ್ಯಮಂತ್ರಿ ಯಾವಾಗ, ಎಲ್ಲಿಗೆ ಹೋಗಬೇಕು ಎಂಬ ಕುರಿತು ಅಧೀರ್‌ ಪಾಠ ಮಾಡುವ ಅವಶ್ಯಕತೆ ಇಲ್ಲ. ಆಡಳಿತಾತ್ಮಕ ದೃಷ್ಟಿಕೋನದಲ್ಲಿ ಮುಖ್ಯಮಂತ್ರಿ ಕೆಲವೊಂದು ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತದ ಜಿ-20 ಅಧ್ಯಕ್ಷತೆಗೆ ವಿದೇಶಿ ಮಾಧ್ಯಮಗಳಿಂದಲೂ ಭಾರಿ ಮೆಚ್ಚುಗೆ : ಯಾವ ನಾಯಕರು ಏನಂದರು?

 ಜಿ20 ಔತಣದಲ್ಲಿ ಮೋದಿ-ನಿತೀಶ್‌-ದೀದಿ ಮುಖಾಮುಖಿ

ಜಿ20 ಶೃಂಗ ಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಆಯೋಜಿಸಿದ್ದ ಗಾಲಾ ಔತಣಕೂಟದಲ್ಲಿ ಹಲವು ದಿನಗಳಿಂದ ಪರಸ್ಪರ ಭೇಟಿಯಾಗದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nithish Kumar), ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಭೇಟಿಯಾದರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪರಿಚಯ ಮಾಡಿಕೊಟ್ಟರು. ಇವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೂಡ ರಾಷ್ಟ್ರಪತಿ ಅವರ ಔತಣಕೂಟದಲ್ಲಿ ಭಾಗಿಯಾಗಿದ್ದರು. ಈ ಮೂಲಕ ದೇಶದ ವಿಚಾರದಲ್ಲಿ ರಾಜಕೀಯ ದ್ವೇಷವನ್ನು ಬಿಟ್ಟು ಸಾಮರಸ್ಯವನ್ನು ಮೆರೆದರು.

ಜಿ20 ಆಯ್ತು ಇನ್ನು ದೇಶದ ಸಮಸ್ಯೆ ನೋಡಿ: ಸರ್ಕಾರಕ್ಕೆ ಖರ್ಗೆ

 ಇದೀಗ ಜಿ20 ಶೃಂಗ ಸಭೆ ಮುಕ್ತಾಯವಾಗಿದ್ದು, ಪ್ರಧಾನಿ ಮೋದಿ ಸರ್ಕಾರ ಇನ್ನು ಹಣದುಬ್ಬರ (Inflation), ನಿರುದ್ಯೋಗ ಮತ್ತು ಮಣಿಪುರ ಹಿಂಸಾಚಾರದಂತಹ ದೇಶೀಯ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಖರ್ಗೆ ಈಗ ಜಿ20 ಸಭೆ ಮುಗಿದಿದೆ. ಇನ್ನು ಮೋದಿ ದೇಶಿಯ ಸಮಸ್ಯೆಗಳತ್ತ ಗಮನಹರಿಸಬೇಕು. ದೇಶದಲ್ಲಿ ಆಗಸ್ಟ್‌ನಲ್ಲಿ ಸಾಮಾನ್ಯ ಊಟದ ದರ ಶೇ.24ರಷ್ಟು ಏರಿಕೆಯಾಗಿದೆ. ಇನ್ನು ನಿರುದ್ಯೋಗ ದರವು ಶೇ.8ರಷ್ಟಿದ್ದು ಯುವಕರ ಭವಿಷ್ಯ ಮಂಕಾಗಿದೆ ಎಂದು ಕಿಡಿಕಾರಿದ್ದಾರೆ.

ದಿಲ್ಲಿ ಘೋಷಣೆ ಹಿಂದೆ 200 ಗಂಟೆ ಸಭೆ 300 ಚರ್ಚೆ: ಜಿ20 ಯಶಸ್ಸಿನ ಹಿಂದಿರುವ ರಾಜತಾಂತ್ರಿಕರಿವರು

ಅಲ್ಲದೇ ‘ಜಮ್ಮು ಮತ್ತು ಕಾಶ್ಮೀರದಲ್ಲಿ 13,000 ಕೋಟಿ ರು. ಜಲಜೀವನ ಹಗರಣ ಬೆಳಕಿಗೆ ಬಂದಿದೆ. ಭ್ರಷ್ಟಾಚಾರವನ್ನು ಬಯಲಿಗೆಳೆದ ದಲಿತ ಐಎಎಸ್‌ ಅಧಿಕಾರಿಗೆ ಕಿರುಕುಳ ನೀಡಲಾಗಿದೆ. ಅಲ್ಲದೇ 2019ರ ಚುನಾವಣೆ ವೇಳೆ ಆರ್‌ಬಿಐ ಖಜಾನೆಯಿಂದ ಸರ್ಕಾರಕ್ಕೆ 3 ಲಕ್ಷ ಕೋಟಿ ರು. ಹಣ ವರ್ಗಾಯಿಸುವಂತೆ ಆರ್‌ಬಿಐನ ಮಾಜಿ ಡೆಪ್ಯೂಟಿ ಗವರ್ನರ್‌ ವಿರಳ್‌ ಆಚಾರ್ಯ (Viral Acharya)ಅವರಿಗೆ ಮೋದಿ ಸರ್ಕಾರ ಒತ್ತಡ ಹೇರಿದ್ದು ಇತ್ತೀಚೆಗೆ ತಿಳಿದಿದೆ. ಇನ್ನೊಂದೆಡೆ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಮರಳಿದ್ದರೆ, ಹಿಮಾಚಲ ಪ್ರದೇಶದ ಪ್ರಕೃತಿ ವಿಕೋಪವನ್ನು ದುರಹಂಕಾರಿ ಮೋದಿ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ ಎಂದು ಹರಿಹಾಯ್ದಿದ್ದಾರೆ.

Latest Videos
Follow Us:
Download App:
  • android
  • ios