Asianet Suvarna News Asianet Suvarna News

ಕಂಗನಾ ವಿರುದ್ಧ ಪೋಸ್ಟ್‌ಗೆ ಕೈಸುಟ್ಟುಕೊಂಡ ಕಾಂಗ್ರೆಸ್ ನಾಯಕಿ, ಅಭ್ಯರ್ಥಿ ಪಟ್ಟಿಯಿಂದ ಸುಪ್ರಿಯಾಗೆ ಕೊಕ್!

ನಟಿ ಕಂಗನಾ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಬಳಿಕ ಸಮರ್ಥನೆ ನೀಡಿದರೂ ಪ್ರಯೋಜನವಾಗಿಲ್ಲ. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರೀಯಾ ಶ್ರೀನಾಟೆ ಹೆಸರು ಕೈಬಿಡಲಾಗಿದೆ.
 

Congress Drops Supriya Srinate as a candidate from Maharajganj after controversial Post against kangana ranaut ckm
Author
First Published Mar 28, 2024, 5:33 PM IST

ನವದೆಹಲಿ(ಮಾ.28) ಬಾಲಿವುಡ್ ನಟಿ ಕಂಗನಾ ರಣಾವತ್ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಆದರೆ ಕಂಗನಾಗೆ ಟಿಕೆಟ್ ಘೋಷಣೆಯಗುತ್ತಿದ್ದಂತೆ ಕಾಂಗ್ರೆಸ್ ನಟಿ ವಿರುದ್ಧ ಮುಗಿಬಿದ್ದಿತ್ತು. ಈ ಪೈಕಿ ನಾಯಕಿ ಸುಪ್ರಿಯಾ ಶ್ರೀನಾಟೆ ವಿವಾದಾತ್ಮಕ ಪೋಸ್ಟ್ ಭಾರಿ ಕೋಲಾಹಲ ಎಬ್ಬಿಸಿತ್ತು. ಕಂಗನಾ ವಿರುದ್ದ ಕೀಳುಮಟ್ಟದ ಪೋಸ್ಟ್ ಹಾಕಿ ಬಳಿಕ ಸ್ಪಷ್ಟನೆ ನೀಡಿದ್ದರು. ಆದರೆ ಸುಪ್ರಿಯಾ ಶ್ರೀನಾಟೆ ಸ್ಪಷ್ಟನೆ ಪ್ರಯೋಜನವಾಗಿಲ್ಲ. ಇದೀಗ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರಿಯಾ ಶ್ರೀನಾಟೆ ಕೈಬಿಟ್ಟಿದೆ. ಕಾಂಗ್ರೆಸ್ ಪ್ರಕಟಗೊಳಿಸದ 8ನೇ ಪಟ್ಟಿಯಲ್ಲಿ ಸುಪ್ರಿಯಾ ಶ್ರೀನಾಟೆ ಕಳೆದ ಬಾರಿ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಕ್ಷೇತ್ರವನ್ನು ವಿರೇಂದ್ರ ಚೌಧರಿಗೆ ನೀಡಲಾಗಿದೆ.

ನಟಿ ಕಂಗನಾ ವಿರುದ್ಧ ಕೀಳುಮಟ್ಟದ ಪೋಸ್ಟ್ ಹಾಕಿದ್ದ ಸುಪ್ರಿಯಾ ಶ್ರೀನಾಟೆ ಬಳಿಕ ತನ್ನ ಸಾಮಾಜಿಕ ಜಾಲತಾಣ ತಂಡದ ಯಾರೋ ಒಬ್ಬರು ಈ ಪೋಸ್ಟ್ ಹಾಕಿದ್ದಾರೆ. ನನ್ನ ಗಮನಕ್ಕೆ ಬಂದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಲಾಗಿದೆ. ತಂಡದಲ್ಲಿ ಹಲವರು ಇರುವ ಕಾರಣ ಈ ಪೋಸ್ಟ್ ಯಾರು ಮಾಡಿದ್ದಾರೆ ಎಂದು ಪರಿಶೀಲಿಸುತ್ತಿದ್ದೇನೆ. ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರಿನಲ್ಲಿ ಕೆಲ ನಕಲಿ ಖಾತೆಗಳನ್ನು ತೆರೆದು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಕುರಿತು ದೂರು ನೀಡಲಾಗಿದೆ ಎಂದು ಸುಪ್ರಿಯಾ ಶ್ರೀನಾಟೆ ಹೇಳಿದ್ದರು.

 

ಪ್ರತಿ ಹೆಣ್ಣು ತನ್ನ ಘನತೆಗೆ ಅರ್ಹ, ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್‌ಗೆ ಕಂಗನಾ ತಿರುಗೇಟು!

ಆದರೆ ಸುಪ್ರಿಯಾ ಶ್ರೀನಾಟೆ ಸ್ಪಷ್ಟನೆಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ.ಇತ್ತ ಚುನಾವಣಾ ಆಯೋಗ ಕೂಡ ಸುಪ್ರಿಯಾ ಶ್ರೀನಾಟೆಗೆ ನೋಟಿಸ್ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ 8ನೇ ಪಟ್ಟಿ ಬಿಡುಗೆಡೆ ಮಾಡಿದೆ. 14 ಅಭ್ಯರ್ಥಿಗಳ ಈ ಪಟ್ಟಿಯಲ್ಲಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸುಪ್ರಿಯಾ ಶ್ರೀನಾಟೆ ಬದಲು ವಿರೇಂದ್ರ ಚೌಧರಿಯನ್ನು ಕಣಕ್ಕಿಳಿಸಲಾಗಿದೆ.

2019ರಲ್ಲಿ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಪ್ರಿಯಾ ಶ್ರೀನಾಟೆ ಸೋಲು ಕಂಡಿದ್ದರು. ಬಿಜೆಪಿಯ ಪಂಕಜ್ ಚೌಧರಿ ವಿರುದ್ದ ಸೋಲು ಕಂಡಿದ್ದರು. ಈ ಬಾರಿಯೂ ಮಹಾರಾಜ್‌ಗಂಜ್ ಕ್ಷೇತ್ರದಿಂದ ಸುಪ್ರಿಯಾ ಶ್ರೀನಾಟೆಗೆ ಟಿಕೆಟ್ ಬಹುತೇಕ ಪಕ್ಕಾ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಕಂಗನಾ ವಿರುದ್ದ ಪೋಸ್ಟ್ ಹಾಕಿ ಕೈಸುಟ್ಟುಕೊಂಡಿದ್ದಾರೆ.

ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಮೇಲೆ ಕಾನೂನು ಕ್ರಮಕ್ಕೆ ಕಂಗನಾ ಚಿಂತನೆ

ಕಾಂಗ್ರೆಸ್ ಇದುವರೆಗೆ ಒಟ್ಟು 208  ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲ ಕ್ಷೇತ್ರಗಳಲ್ಲಿ ಮಾತುಕತೆ, ಸೀಟು ಹಂಚಿಕೆ ಗೊಂದಲ ಉಳಿದಿರುವ ಕಾರಣ ಟಿಕೆಟ್ ಘೋಷಣೆಯಾಗಿಲ್ಲ. ಇಂಡಿಯಾ ಮೈತ್ರಿ ಒಕ್ಕೂಟದ ಹೋರಾಟ ಈ ಬಾರಿಯ ಲೋಕಸಭಾ ಚುನಾವಣೆಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Follow Us:
Download App:
  • android
  • ios