Asianet Suvarna News Asianet Suvarna News

'ಗಾಂಧಿ-ಗೋಡ್ಸೆ ನಡುವೆ ಆಯ್ಕೆ ಸಾಧ್ಯವಿಲ್ಲ..' ಮಾಜಿ ನ್ಯಾಯಮೂರ್ತಿ, ಬಿಜೆಪಿ ಅಭ್ಯರ್ಥಿ ಅಭಿಜಿತ್‌ ಗಂಗೋಪಾಧ್ಯಾಯ

ಒಬ್ಬ ಮಾಜಿ ನ್ಯಾಯಮೂರ್ತಿಯಾಗಿ ಗಾಂಧಿ ಹಾಗೂ ಗೋಡ್ಸ್‌ ನಡುವೆ ಆಯ್ಕೆ ಸಾಧ್ಯವಿಲ್ಲ ಎಂದ ಕೋಲ್ಕತ್ತಾ ಹೈಕೋರ್ಟ್‌ ಮಾಜಿ ನ್ಯಾಯಾಧೀಶ ಹಾಗೂ ಬಿಜೆಪಿ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಅಭಿಜಿತ್‌ ಗಂಗೋಪಾಧ್ಯಾಯ ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

Congress angry on Abhijit Gangopadhyays Godse remark asks Withdraw his candidature san
Author
First Published Mar 26, 2024, 9:51 AM IST

ನವದೆಹಲಿ (ಮಾ.26): ಮಹಾತ್ಮ ಗಾಂಧಿ ಹಾಗೂ ನಾಥುರಾಮ್‌ ಗೋಡ್ಸ್ ನಡುವೆ ಯಾರೋ ಒಬ್ಬರನ್ನು ನಾನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದಿದ್ದ ಕೋಲ್ಕತ್ತ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಅಭಿಜಿತ್‌ ಗಂಗೋಪಾಧ್ಯಾಯ ಅವರ ಹೇಳಿಕೆಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು. ಅವರಿಗೆ ನೀಡಿರುವ ಟಿಕೆಟ್‌ಅನ್ನು ಬಿಜೆಪಿ ವಾಪಾಸ್‌ ಪಡೆದುಕೊಳ್ಳಬೇಕು ಎಂದು ಆಗ್ರಹ ಮಾಡಿದೆ. ಬಂಗಾಳಿ ಚಾನೆಲ್‌ನಲ್ಲಿ ಮಾತನಾಡುತ್ತಿದ್ದ ಅಭಿಜಿತ್‌ ಗಂಗೋಪಾಧ್ಯಾಯ ಮಾತನಾಡುವ ವೇಳೆ,  (ಮಹಾತ್ಮ) ಗಾಂಧಿ ಮತ್ತು (ನಾತುರಾಮ್) ಗೋಡ್ಸೆಯ ನಡುವೆ ಆಯ್ಕೆ ಮಾಡಲು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಗೋಡ್ಸೆಯ ಕ್ರಮಗಳ ಹಿಂದಿನ ತಾರ್ಕಿಕತೆಯನ್ನು ಪರಿಶೀಲಿಸಲು ನಾನು ಒತ್ತಾಯ ಮಾಡುತ್ತೇನೆ ಎಂದಿದ್ದಾರೆ. 'ನಾನು ವಕೀಲ ವೃತ್ತಿಯಿಂದ ಬಂದವನು. ನಾನು ಪ್ರತಿ ಕಥೆಯ ಇನ್ನೊಂದು ಮಗ್ಗುಲನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ನಾನು ಅವರ (ನಾಥೂರಾಂ ಗೋಡ್ಸೆ) ಬರಹಗಳನ್ನು ಓದಬೇಕು ಮತ್ತು ಮಹಾತ್ಮ ಗಾಂಧಿಯನ್ನು ಕೊಲ್ಲಲು ಅವರಿಗೆ ಪ್ರಚೋದನೆ ಸಿಕ್ಕಿದ್ದೇಗೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು' ಎಂದಿದ್ದರು.

ಅಲ್ಲಿಯವರೆಗೆ ನಾನು ಗಾಂಧಿ ಮತ್ತು ಗೋಡ್ಸೆ ನಡುವೆ ಯಾರೊಬ್ಬರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಇನ್ನು ಅಭಿಜಿತ್‌ ಗಂಗೋಪಾಧ್ಯಾಯ ಅವರ ಮಾತಿನ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಸೋಮವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದು, ಇದು ಅತ್ಯಂತ ಹೇಯ ಮಾತು ಎಂದು ಹೇಳಬಯಸುತ್ತೇನೆ.  ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಲ್ಲಿ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ವ್ಯಕ್ತಿಯೊಬ್ಬರು, ಈಗ ಗಾಂಧಿ ಹಾಗೂ ಗೋಡ್ಸೆ ನಡುವೆ ಯಾರೋ ಒಬ್ಬರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ' ಎಂದು ಹೇಳಿದ್ದಾರೆ.

ಅವರ ಮಾತನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಮಹಾತ್ಮರ ಪರಂಪರೆಯನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನವನ್ನು ಮಾಡದಿರುವವರು ಇವರ ಉಮೇದುವಾರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು" ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಜಡ್ಜ್‌ ಹುದ್ದೆ ತೊರೆದು ಬಿಜೆಪಿ ಸೇರಿದ ಕೋಲ್ಕತ್ತಾ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ!

ಫಾದರ್‌ ಆಫ್‌ ಡ ಡೊನೇಷನ್‌ ಈಗ ಫಾದರ್ ಆಫ್‌ ದ ನೇಷನ್‌ಅನ್ನು ರಕ್ಷಣೆ ಮಾಡುತ್ತಾರೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೋಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಭಿಜಿತ್‌ ಗಂಗೋಪಾಧ್ಯಾಯ ಅವರಿಗೆ ಬಿಜೆಪಿ ಲೋಕಸಭೆ ಚುನಾವಣೆ ಟಿಕೆಟ್‌ ನೀಡಿದೆ. ಭಾನುವಾರ ಪಶ್ಚಿಮ ಬಂಗಾಳದ 19 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗದ್ದು, ಇದರಲ್ಲಿ ಅಭಿಜಿತ್‌ ಗಂಗೋಪಾಧ್ಯಾಯ ಅವರ ಹೆಸರೂ ಕೂಡ ಇದೆ. ಗಂಗೋಪಾಧ್ಯಾಯ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಖಂಡಿಸಿದ್ದು, "ಐತಿಹಾಸಿಕ ಘಟನೆಗಳ ಎಲ್ಲಾ ಅಂಶಗಳನ್ನು ಪರಿಶೀಲಿಸುವ ಅಗತ್ಯವನ್ನು" ಒತ್ತಿ ಹೇಳಿದರು.

ಕೋರ್ಟ್‌ ಜೊತೆ ಆಟ ಆಡ್ತೀದ್ದೀರಾ? ಸಿಬಿಐಗೆ ಕೇಸ್‌ ಹಸ್ತಾಂತರ ಮಾಡದ ಸಿಐಡಿಗೆ 5 ಲಕ್ಷ ದಂಡ!

Follow Us:
Download App:
  • android
  • ios