* ಜಾರಿ ನಿರ್ದೇಶನಾಲಯದಿಂದ ರಾಹುಲ್ ಗಾಂಧಿ ವಿಚಾರಣೆ* ಸತತ ಎರಡನೇ ದಿನವೂ ಕಾಂಗ್ರೆಸ್ ನಾಯಕನ ತನಿಖೆ* ರಾಹುಲ್ ಅಬ್ಬರಕ್ಕೆ ಬಿಜೆಪಿ ಬೆಚ್ಚಿ ಬಿದ್ದಿದೆ* ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ನವದೆಹಲಿ(ಜೂ.14): ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸತತ ಎರಡನೇ ದಿನವೂ ಇಂದು ವಿಚಾರಣೆ ನಡೆಸಲಿದೆ. ರಾಹುಲ್ ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ತಲುಪಲಿದ್ದಾರೆ. ಹೀಗಿರುವಾಗ, ಈ ವಿಷಯದಲ್ಲಿ ಈಗ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಷ್ಟಕ್ಕೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮೋದಿ ಸರ್ಕಾರ ಅಥವಾ ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವುದು ಏಕೆ?, ಇಡಿ ಮೂಲಕ ಸಾರ್ವಜನಿಕ ಸಮಸ್ಯೆ ಬಗ್ಗೆ ಎತ್ತಿರುವ ಧ್ವನಿಯನ್ನು ಹತ್ತಿಕ್ಕುವ ಪಿತೂರಿಯೇ? ರಾಹುಲ್ ಗಾಂಧಿ ಮೇಲೆ ಮಾತ್ರ ಯಾಕೆ ಇಷ್ಟೊಂದು ದಾಳಿ ಏಕೆ? ಈ ಪ್ರಶ್ನೆಗಳಿಗೆ ದೇಶಕ್ಕೆ ಉತ್ತರ ತಿಳಿಯಬೇಕಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಅಬಬ್ರದಿಂದ ಕೇಂದ್ರಕ್ಕೆ ನಡುಕ

ರಾಹುಲ್ ಗಾಂಧಿ ಅವರ ಗಟ್ಟಿ ಧ್ವನಿಗೆ ಕೇಂದ್ರ ಸರ್ಕಾರ ಹೆದರುತ್ತಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ರಾಹುಲ್ ಗಾಂಧಿಯನ್ನೇ ಯಾಕೆ ಬಿಜೆಪಿ ಯಾವಾಗಲೂ ಗುರಿಯಾಗಿಸುತ್ತದೆ? ರಾಹುಲ್ ಗಾಂಧಿ ರೈತರ, ಜನರ ಧ್ವನಿ ಎತ್ತಿದ್ದಾರೆ. ಭ್ರಷ್ಟ ನಾಯಕರು ಬಿಜೆಪಿ ಸೇರಿದ ತಕ್ಷಣ ಗಂಗೆಯಂತೆ ಪರಿಶುದ್ಧರಾಗುತ್ತಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ರಾಹುಲ್ ಗಾಂಧಿ ಮೋದಿ ಸರ್ಕಾರದ ಸುಳ್ಳನ್ನು ಬಯಲಿಗೆಳೆದರು

ಮೋದಿ ಸರ್ಕಾರ ಮತ್ತು ಬಿಜೆಪಿಯು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ಹೆದರಿತ್ತು, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಾಗ ಮತ್ತು ನಮ್ಮ ಸೈನಿಕರು ಹುತಾತ್ಮರಾದಾಗ ಪ್ರಧಾನಿ ಸರ್ವಪಕ್ಷ ಸಭೆಯಲ್ಲಿ ಯಾರೂ ಪ್ರವೇಶಿಸಿಲ್ಲ ಮತ್ತು ಯಾರೂ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು. ಆಗ ರಾಹುಲ್ ಜೀ ಈ ಸುಳ್ಳನ್ನು ಬಯಲಿಗೆಳೆದು ದೇಶಕ್ಕಾಗಿ ಧ್ವನಿ ಎತ್ತಿದ್ದರು ಎಂದು ಸುರ್ಜೇವಾಲಾ ಹೇಳಿದರು, 

ಹಣದುಬ್ಬರ ವಿಚಾರವೆತ್ತಿದ ರಾಹುಲ್‌ನಿಂದ ಮೋದಿ ಸರ್ಕಾರಕ್ಕೆ ತೊಂದರೆ

ಹಣದುಬ್ಬರದಿಂದ ಜನರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ರಾಹುಲ್ ಗಾಂಧಿ ಅವರು ನಿರಂತರವಾಗಿ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಹೀಗಿದ್ದರೂ ಸರ್ಕಾರದ ಬಳಿ ಉತ್ತರವಿಲ್ಲ, ಆದ್ದರಿಂದ ಸರ್ಕಾರಕ್ಕೆ ರಾಹುಲ್ ಗಾಂಧಿಯಿಂದ ತೊಂದರೆಯಾಗಿದೆ ಎಂದು ಸುರ್ಜೇವಾಲಾ ಹೇಳಿದರು.

ನಾವು ಗಾಂಧಿಯವರ ವಾರಸುದಾರರು: ಸುರ್ಜೇವಾಲಾ

ನಾವು ಗಾಂಧಿ ವಾರಸುದಾರರು, ಮತ್ತೊಮ್ಮೆ ನಡೆಯುತ್ತೇವೆ, ನಮ್ಮ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಸುರ್ಜೇವಾಲಾ ಹೇಳಿದ್ದಾರೆ.