ನವದೆಹಲಿ(ಜ.03): DCGI ಇಂದು, ಭಾನುವಾರ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್‌ನ ಕೊರೋನಾ ವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ಮೂಲಕ ಕೊರೋನಾ ಲಸಿಕೆ ಸಂಬಂಧ ದೀರ್ಘ ಕಾಲದ ಕಾಯುವಿಕೆ ಕೊನೆಗೊಂಡಿದೆ. 

ಸದ್ಯ ದೇಶದಲ್ಲಿ ಕೊರೋನಾ ಲಸಿಕೆ ಬಳಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಪಿಎಂ ಮೋದಿ ದೇಶಕ್ಕೆ ಶುಭ ಕೋರುತ್ತಾ ಸೀರಂ ಇನ್ಸ್ಟಿಟ್ಯೂಟ್ ಹಾಗೂ ಭಾರತ್ ಬಯೋಟೆಕ್ ಲಸಿಕೆಗೆ DCGI ಅನುಮತಿ ಸಿಕ್ಕ ಬಳಿಕ ಭಾರತ ಕೊರೋನಾ ಮುಕ್ತ ರಾಷ್ಟ್ರವಾಗುವ ದಾರಿ ಸುಗಮವಾಗಿದೆ ಎಂದಿದ್ದಾರೆ.

"

ಇನ್ನು ತಮ್ಮ ಎರಡನೇ ಟ್ವೀಟ್‌ನಲ್ಲಿ ಅನುಮತಿ ಪಡೆದ ಎರಡೂ ಲಸಿಕೆಗಳು ಭಾರತದಲ್ಲೇ ನಿರ್ಮಾಣವಾಗಿವೆ ಎಂಬ ವಿಚಾರವಾಗಿ ನಾವು ಭಾರತೀಯರು ಹೆಮ್ಮೆ ಪಡಬೇಕು. ಇದು ಆತ್ಮನಿರ್ಭರ್ ಭಾರತದ ಕನಸು ಸಾಕಾರಗೊಳಿಸುವಲ್ಲಿ ನಮ್ಮ ವಿಜ್ಞಾನಿಗಳು ತೋರುತ್ತಿರುವ ಉತ್ಸಾಹವನ್ನು ಬಿಂಬಿಸುತ್ತದೆ ಎಂದಿದ್ದಾರೆ.

ಇನ್ನು ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಮೋದಿ 'ಕಠಿಣ ಪರಿಸ್ಥಿತಿಯಲ್ಲೂ ಉತ್ಕೃಷ್ಟ ಕಾರ್ಯ ನಿರ್ವಹಿಸಿದ ನಾವು ಡಾಕ್ಟರ್, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸರು, ಸ್ವಚ್ಛತಾ ಸಿಬ್ಬಂದಿಗಳಿಗೆ ಋಣಿಯಾಗಿದ್ದೇನೆಂದು ಮತ್ತೊಮ್ಮೆ ಹೇಳಲಿಚ್ಛಿಸುತ್ತೇನೆ' ಎಂದಿದ್ದಾರೆ.