ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಆನಂದ್ ರಾಜ್ ಆನಂದ್ ಪ್ರಧಾನಿ ನರೇಂದ್ರ ಮೋದಿಗೆ ಹಾಡಿನ ಉಡುಗೊರೆ ನೀಡಿದ್ದಾರೆ. ಮೋದಿ ಕಿ ಗ್ಯಾರೆಂಟಿ ಹೈ ಅನ್ನೋ ಹಾಡಿನ ಮೂಲಕ ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ. ಈ ಹಾಡು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 

ನವದೆಹಲಿ(ಡಿ.28) ಪ್ರಧಾನಿ ನರೇಂದ್ರ ಮೋದಿ ವಿಶ್ವವೇ ಮೆಚ್ಚಿದ ನಾಯಕ. ಹೀಗಾಗಿಯೇ ಜಾಗತಿಕ ನಾಯಕರ ರ‍್ಯಾಂಕಿಂಗ್‌ನಲ್ಲಿ ಮೋದಿಗೆ ಅಗ್ರಸ್ಥಾನ. ಇದೀಗ ಪ್ರಧಾನಿ ಮೋದಿಯ ಗ್ಯಾರೆಂಟಿ ಹೇಳಿಕೆಯನ್ನೇ ಮೂಲವಾಗಿಟ್ಟುಕೊಂಡು ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಆನಂದ್ ರಾಜ್ ಆನಂದ್ ಮೋದಿ ಕಿ ಗ್ಯಾರೆಂಟಿ ಹೈ ಅನ್ನೋ ಹಾಡು ನಿರ್ದೇಶಿಸಿದ್ದಾರೆ. ಈ ಹಾಡನ್ನು ಪ್ರಧಾನಿ ಮೋದಿಗೆ ಅರ್ಪಿಸಿದ್ದಾರೆ. ಮೋದಿ ಕಿ ಗ್ಯಾರೆಂಟಿ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಗೆ ಈ ಹಾಡನ್ನು ಅರ್ಪಿಸಲು ನಿಜಕ್ಕೂ ಹೆಮ್ಮೆಯಾಗುತ್ತಿದೆ. ಮೋದಿ ಕಿ ಗ್ಯಾರೆಂಟಿ ಹೈ ಹಾಡು ಪ್ರತಿ ನಿಮಿಷವನ್ನು ಈ ದೇಶಕ್ಕೆ ಮುಡಿಪಾಗಿಟ್ಟು, ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಕರ್ಮ ಯೋಗಿ ಪ್ರಧಾನಿ ಮೋದಿಗೆ ಅರ್ಪಣೆ ಎಂದು ಸಂಗೀತ ನಿರ್ದೇಶಕ ಆನಂದ್ ರಾಜ್ ಆನಂದ್ ಹೇಳಿದ್ದಾರೆ.

YouTubeನಲ್ಲಿ ದಾಖಲೆ ಬರೆದ ಪ್ರಧಾನಿ ಮೋದಿ, 2 ಕೋಟಿ ಸಬ್ಸ್ಕ್ರೈಬರ್ ಪಡೆದ ವಿಶ್ವದ ಮೊದಲ ನಾಯಕ!

ಗ್ಲೋಬಲ್ ಮ್ಯೂಸಿಕ್ ಜಂಕ್ಷನ್ ಸಹಯೋಗದೊಂದಿಗೆ ಈ ವಿಶೇಷ ಹಾಡನ್ನು ನಿರ್ದೇಶಿಸಲಾಗಿದೆ. ವಿಶೇಷ ಅಂದರೆ ಮೋದಿ ಕಿ ಗ್ಯಾರೆಂಟಿ ಹೈ ಹಾಡಿನ ಸಾಹಿತ್ಯ, ಸಂಗೀತ, ಗಾಯಕ ಎಲ್ಲವೂ ಆನಂದ್ ರಾಜ್ ಆನಂದ್. ನಮ್ಮ ಬಳಿ ಮುಂದಿನ 25 ವರ್ಷಗಳ ಗುರಿ, ಸಾಗಬೇಕಾದ ಮಾರ್ಗದ ಕುರಿತ ರೂಪುರೇಶೆ ಸಿದ್ದವಿದೆ. ನಾವು ಭಾರತವನ್ನು ವಿಕಸಿತ ಭಾರತವನ್ನಾಗಿ ಮಾಡುತ್ತೇವೆ. ಇದು ಮೋದಿಯ ಗ್ಯಾರೆಂಟಿ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದು ಮೋದಿ ಕಾ ಗ್ಯಾರೆಂಟಿ ಎಂದೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

View post on Instagram

ಇದೇ ಮೂಲವಾಗಿಟ್ಟುಕೊಂಡು ಆನಂದ್ ರಾಜ್ ಆನಂದ್, ವಿಶ್ವಪಟದಲ್ಲಿ ಭಾರತಕ್ಕೆ ಸಿಕ್ಕಿರುವ ಸ್ಥಾನಮಾನ, ರಕ್ಷಣಾ ವ್ಯವಸ್ಥೆ, ಯುದ್ಧ ವಿಮಾನ, ಶಸ್ತ್ರಾಸ್ತ್ರ ಉತ್ಪಾದನೆ, ಚಂದ್ರನ ಮೇಲೆ ಭಾರತ, ಮನ್ ಕಿ ಬಾತ್, ದೇಶದ ಯುವಶಕ್ತಿಗೆ ನೀಡಿದ ಪ್ರಾತಿನಿಧ್ಯ, ದೇಶ ಭಕ್ತಿ, ದೇಶದ ಮೂಲಭೂತ ಸೌಕರ್ಯದಲ್ಲಾಗಿರುವ ಬದಲಾವಣೆ, ನಾರಿ ಶಕ್ತಿ, ರೈತರಿಗೆ ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆ, ರೋಜಗಾರ್ ಮೇಳ, ಸ್ವಉದ್ಯೋಗ, ಮುದ್ರಾ ಸೇರಿದಂತೆ ಇತರ ಸಾಲ ಯೋಜನೆ, ಶುದ್ದ ಕುಡಿಯುವ ನೀರಿ, ಪ್ರತಿ ಮನಗೆ ಗ್ಯಾಸ್ ಸಂಪರ್ಕ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹಲವು ಜನಪ್ರಿಯ ಯೋಜನೆಗಳ ಕುರಿತ ಈ ಹಾಡು ಎಲ್ಲೆಡೆ ಗುನುಗಲು ಆರಂಭಿಸಿದೆ.

ಮುಂದಿನ ಪ್ರಧಾನಿ ಯಾರಾಗಬೇಕು? ಕರ್ನಾಟಕದಲ್ಲಿ ಮೋದಿಗೆ ಶೇ.65ರಷ್ಟು ಮತ!