ಗ್ರಾಮ ಪಂಚಾಯಿತಿ ಸದಸ್ಯನೊಬ್ಬ 15 ಲಕ್ಷ ರೂ. ವರೆಗೆ ಲಂಚ ಪಡೆಯುವುದು ಸಾಮಾನ್ಯ. ಅದನ್ನು ಭ್ರಷ್ಟಾಚಾರ ಎನ್ನಲಾಗದು ಎಂದು ಮಧ್ಯಪ್ರದೇಶ ಬಿಜೆಪಿ ಸಂಸದ ಜನಾರ್ದನ್‌ ಮಿಶ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಭೋಪಾಲ್‌: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ 15 ಲಕ್ಷ ರೂ. ವರೆಗೆ ಲಂಚ (Bribe) ಪಡೆಯುವುದು ಸಾಮಾನ್ಯ. ಅದನ್ನು ಭ್ರಷ್ಟಾಚಾರ (Corruption) ಎನ್ನಲಾಗದು ಎಂದು ಮಧ್ಯಪ್ರದೇಶ ಬಿಜೆಪಿ ಸಂಸದ ಜನಾರ್ದನ್‌ ಮಿಶ್ರಾ (Janardan Mishra) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸೋಮವಾರ ಮಧ್ಯಪ್ರದೇಶದ ರೇವಾದಲ್ಲಿ ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, 'ಜನರು ಗ್ರಾಮ ಪಂಚಾಯಿತಿ ಸದಸ್ಯ ಲಂಚ ಪಡೆಯುತ್ತಾನೆಂದು ದೂರು ನೀಡಲು ನನ್ನ ಬಳಿಗೆ ಬರುತ್ತಾರೆ. ಆದರೆ 15 ಲಕ್ಷದ ವರೆಗೆ ಲಂಚ ಪಡೆದರೆ ಅದು ಭ್ರಷ್ಟಾಚಾರ ಅಲ್ಲ. ಆತ ಚುನಾವಣೆಯಲ್ಲಿ ಗೆಲ್ಲಲು 7 ಲಕ್ಷ ರು. ಖರ್ಚು ಮಾಡಿರುತ್ತಾನೆ. ಗೆದ್ದ ನಂತರ ಮುಂದಿನ ಚುನಾವಣೆಗೆ ಇನ್ನೊಂದು 7 ಲಕ್ಷ ರುಪಾಯಿ ಅಗತ್ಯವಿರುತ್ತದೆ. ಹಣದುಬ್ಬರ ಕಾರಣದಿಂದ ಇನ್ನೊಂದು ಲಕ್ಷ ರೂ. ಹೆಚ್ಚಿರುತ್ತದೆ' ಎಂದು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ: ದೇಶದಾದ್ಯಂತ ಒಮಿಕ್ರೋನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಗುರುವಾರದಿಂದಲೇ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಜಾರಿಯ ಘೋಷಣೆ ಮಾಡಿದ್ದಾರೆ. ರಾತ್ರಿ ಕರ್ಫ್ಯೂ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರಾಜ್ಯದಾದ್ಯಂತ ಜಾರಿಯಲ್ಲಿರಲಿದೆ. ಮಧ್ಯಪ್ರದೇಶದಲ್ಲಿ ಇನ್ನುವರೆಗೆ ಒಮಿಕ್ರೋನ್‌ ಪ್ರಕರಣಗಳು ಪತ್ತೆಯಾಗಿಲ್ಲ.

ಆಗ ಮನೆಗೆ ಬಂದು ಉಂಡು ಹೋದ ರಾಜ್ಯಪಾಲರು... ಈಗ 14000 ಬಿಲ್‌ ಬರೆದ ಅಧಿಕಾರಿಗಳು

ಗೋವು ನಮ್ಮ ತಾಯಿಯಲ್ಲ, ಗೋಮಾಂಸ ಸೇವನೆ ತಪ್ಪಲ್ಲ: 'ಗೋವು ನಮ್ಮ ತಾಯಿಯಲ್ಲ, ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸಾವರ್ಕರ್‌ ಅವರೇ ತಮ್ಮ ಪುಸ್ತಕದಲ್ಲಿ ಹೇಳಿದ್ದರು' ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಹೇಳಿದ್ದಾರೆ.

ಶನಿವಾರ ಭೋಪಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ನ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, 'ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ. ಗೋವು ನಮ್ಮ ಮಾತೆಯಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೀರ್‌ ಸಾವರ್ಕರ್‌ ಅವರ ಪುಸ್ತಕದಲ್ಲಿ ಬರೆದಿದ್ದಾರೆ' ಎಂದರು.

ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

'ನಾವು ಹೋರಾಡುತ್ತಿರುವುದು ಆರೆಸ್ಸೆಸ್‌ನ ಸಿದ್ಧಾಂತದ ವಿರುದ್ಧ. ಇದನ್ನು ಬಿಜೆಪಿ ಪೋಷಿಸುತ್ತಿದೆ. 2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲು ಸಂವಿಧಾನವನ್ನು ಬದಲಾಯಿಸುತ್ತಾರೆ. ನಂತರ ಮೀಸಲಾತಿಯನ್ನು ಕೊನೆಗೊಳಿಸುತ್ತಾರೆ' ಎಂದೂ ಅವರು ಎಚ್ಚರಿಸಿದರು.