ವಿದ್ಯಾರ್ಥಿಗಳು ನಿದ್ದೆಗೆ ಜಾರದಿರಲು ಕಾಲೇಜಿನಿಂದ ಭರ್ಜರಿ ಆಫರ್, ಏನಿದು ಹೊಸ ಪ್ರಯೋಗ?
ಅಧ್ಯಯನದ ವೇಳೆ ವಿದ್ಯಾರ್ಥಿಗಳು ನಿದ್ದೆಗೆ ಜಾರಬಾರದು ಎಂದು ಕಾಲೇಜು ಹೊಸ ಪ್ಲಾನ್ ಜಾರಿ ಮಾಡಿದೆ. ಹಲವು ಸುತ್ತಿನ ಮಾತುಕತೆ ಹಾಗೂ ಚರ್ಚೆ ಬಳಿಕ ಈ ಆಫರ್ ನೀಡಲಾಗಿದೆ.
ಮುಂಬೈ(ಡಿ.12) ವಿದ್ಯಾರ್ಥಿಗಳು ಎದುರಿಸುವ ಬಹುದೊಡ್ಡ ಸಮಸ್ಸೆ ಎಂದರೆ ಅಧ್ಯಯನಕ್ಕೆ ಕುಳಿತಾಗ , ಪಾಠ ಕೇಳುವಾಗ ನಿದ್ದೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಮಾಣದ ನಿದ್ದೆಯಾಗಿದ್ದರೂ ಪಾಠ ಕೇಳವಾಗ, ಅಧ್ಯಯನ ಮಾಡುವಾಗ ನಿದ್ದೆ ಬರುವುದು ಸಹಜ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಹಾರಾಷ್ಟ್ರದ ಲಾತೂರ್‌ನ ದಯಾನಂದ್ ಕಾಲೇಜ್ ಆಫ್ ಆರ್ಟ್ಸ್ ಹೊಸ ಪ್ರಯೋಗ ಮಾಡಿದೆ. 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಪರೀಕ್ಷೆಗಾಗಿ ಓದಲು ಕುಳಿತಾಗ ವಿದ್ಯಾರ್ಥಿಗಳು ನಿದ್ದಿಗೆ ಜಾರುತ್ತಿರುವ ಪ್ರಕರಣ ಹೆಚ್ಚಾದ ಕಾರಣ ಹೊಸ ಪ್ಲಾನ್ ಜಾರಿಗೊಳಿಸಲಾಗಿದೆ.
ಸರ್ಕಾರಿ ಅನುದಾನಿತ ದಯಾಂದ್ ಕಾಲೇಜಿನ 12ನೇ ತರಗತಿ ವಿದ್ಯಾರ್ಥಿಗಳು ಓದಲು ಕುಳಿತಾಗ ನಿದ್ದೆಗೆ ಜಾರುತ್ತಿರುವ ಘಟನೆಗಳು ಹೆಚ್ಚಾಗಿತ್ತು. ಹೀಗಾಗಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ತಜ್ಞರ ತಂಡ ಇದನ್ನು ತಪ್ಪಿಸಲು ಭಾರಿ ಚರ್ಚೆ ನಡೆಸಿತ್ತು. ಬಳಿಕ ವಿದ್ಯಾರ್ಥಿಗಳ ನಿದ್ದೆ ಓಡಿಸಲು ಇದೀಗ ಉಚಿತ ಕಾಫಿ ಹಾಗೂ ಟೀ ನೀಡುತ್ತಿದೆ. ವಿದ್ಯಾರ್ಥಿಗಳು ಓದಲು ಕುಳಿತಾಗ ನಿದ್ದೆ ಬರದಂತೆ ರೀಫ್ರೆಶ್ ಆಗಲು ಈ ಹೊಸ ಪ್ಲಾನ್ ಜಾರಿಗೊಳಿಸಿದ್ದಾರೆ.
ಹೆಚ್ಚಿನ ಸಮಯ ಓದಲು ಕುಳಿತಾಗ ವಿದ್ಯಾರ್ಧಿಗಳಿಗೆ ನಿದ್ದೆ ಆವರಿಸುತ್ತದೆ. ಇದರಿಂದ ಅದೆಷ್ಟೇ ಒತ್ತಾಯಪೂರ್ವಕವಾಗಿ ಓದಿದರೂ ನೆನಪಿನಲ್ಲಿ ಉಳಿದುಕೊಳ್ಳುವುದಿಲ್ಲ. ಹೀಗಾಗಿ ಓದಿನ ನಡುವೆ ವಿದ್ಯಾರ್ಥಿಗಳಿಗೆ ರೀಫ್ರೆಶ್‌ಮೆಂಟ್ ಬ್ರೇಕ್ ನೀಡಲಾಗುತ್ತದೆ. ಈ ವೇಳೆ ಉಚಿತ ಕಾಫಿ ಅಥವಾ ಟೀ ನೀಡಲಾಗುತ್ತಿದೆ ಎಂದು ಕಾಲೇಜು ಆಡಳಿತ ಮಂಡಿ ಹೇಳಿದೆ. ಹೊಸ ಪ್ರಯೋಗ ಆರಂಭಿಸಿ ಒಂದು ವಾರ ಆಗಿದೆ. ಉತ್ತಮ ಫಲಿತಾಂಶ ವ್ಯಕ್ತವಾಗುತ್ತಿದೆ. ಉಚಿತ ಕಾಫಿ ಟೀ ಕಾಲೇಜಿಗೆ ಆರ್ಥಿಕ ಹೊರೆ ನೀಡುತ್ತಿದೆ. ಆದರೆ ವಿದ್ಯಾರ್ಥಿಗಳ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ. ಶಿವಾಜಿ ಗಾಯಕ್ವಾಡ್ ಹೇಳಿದ್ದಾರೆ.
ಕೇಂದ್ರ ಸರ್ಕಾರಿ ಯೋಜನೆಯಡಿ 1-7ನೇ ತರಗತಿ ಮಕ್ಕಳಿಗೆ ಉಚಿತ ಬ್ಯಾಗ್
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಪ್ರಮುಖ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ. ಈ ವೇಳೆ ನಿದ್ದೆಯಿಂದ ತಮ್ಮ ಭವಿಷ್ಯ ಹಾಳಾಗಬಾರದು. ಹೀಗಾಗಿ ಓದಿನ ನಡುವೆ ಬ್ರೇಕ್, ಉಚಿತ ಟಿ ಕಾಫಿ ವ್ಯವಸ್ಥೆ ಮಾಡಲಾಗಿದೆ. ರೀಡಿಂಗ್ ರೂಂನಲ್ಲಿ ನಿದ್ದೆ ಬರದಂತೆ ನಾವು ಮಾಡಿರುವ ಸಣ್ಣ ಬದಲಾವಣೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಸಕ್ರಿಯವಾಗಿ ಓದಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಡಾ. ಶಿವಾಜಿ ಗಾಯಕ್ವಾಡ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಇದರಿಂದ ಖುಷಿಯಾಗಿದ್ದಾರೆ. ಗಮನ ಕೇಂದ್ರೀಕರಿಸಲು ಅಧ್ಯಯನ ಮಾಡಲು ನೆರವಾಗುತ್ತಿದೆ ಎಂದು ಹೇಳಿದ್ದಾರೆ. ಹೊಸ ಪ್ರಯೋಗ ಯಶಸ್ವಿಯಾಗಿರುವ ಕಾರಣ ಕಾಲೇಜು ಆಡಳಿತ ಮಂಡಳಿ ಕೂಡ ಖುಷಿಯಾಗಿದೆ. ಇದೀಗ ಇತರ ಕೆಲ ಕಾಲೇಜಗಳು ಈ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಿದೆ.