Asianet Suvarna News Asianet Suvarna News

ನಿರ್ಮಾಣವಾಗುತ್ತಿದೆ ದೇಶದ ಅತೀ ಬೃಹತ್‌ ಬುದ್ಧ ಪ್ರತಿಮೆ

ಬೋಧ್‌ಗಯಾದಲ್ಲಿ ಪ್ರತಿಷ್ಠಾಪಿಸಲಾಗುವ ದೇಶದ ಅತೀ ಉದ್ದವಾದ  ಬುದ್ಧನ ಪ್ರತಿಮೆ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ವರ್ಷ ಪ್ರತಿಮೆ ಅನಾವರಣವಾಗಲಿದೆ. 

Clay Modeller In Bengal Making 100 Feet  Statue Of Lord buddha snr
Author
Bengaluru, First Published Jan 29, 2021, 9:10 AM IST

ಕೋಲ್ಕತಾ (ಜ.29) : ಬಿಹಾರದ ಬೋಧ್‌ಗಯಾದಲ್ಲಿ ಪ್ರತಿಷ್ಠಾಪಿಸಲಾಗುವ ದೇಶದ ಅತೀ ಉದ್ದವಾದ 100 ಅಡಿಯ ಬುದ್ಧನ ಪ್ರತಿಮೆ ನಿರ್ಮಿಸುವ ಕಾರ್ಯ ಪಶ್ಚಿಮ ಬಂಗಾಳದಲ್ಲಿ ಭರದಿಂದ ಸಾಗಿದೆ.

2022ರ ಬುದ್ಧ ಪೂರ್ಣಿಮೆಯಂದು ಬೋಧ್‌ಗಯಾದಲ್ಲಿ ಬುದ್ಧನ ಈ ಹೊಸ ಪ್ರತಿಮೆ ಪ್ರತಿಷ್ಠಾಪನೆಯಾಗಲಿದೆ. ಬುದ್ಧ ತಮ್ಮ ಬಲಗೈಯನ್ನು ತಲೆಗೆ ಕೊಟ್ಟು ಮಲಗಿರುವ ಭಂಗಿಯಲ್ಲಿರುವ 100 ಅಡಿಯ ಫೈಬರ್‌ಗ್ಲಾಸ್‌ ಬುದ್ಧನ ಈ ಪ್ರತಿಮೆಯು ದೇಶದ ಅತೀದೊಡ್ಡ ಬುದ್ಧನ ಆಕೃತಿಯಾಗಲಿದೆ ಎಂದು ಜೇಡಿಮಣ್ಣಿನ ಕಲಾವಿದ ಮಿಂಟು ಪಾಲ್‌ ತಿಳಿಸಿದ್ದಾರೆ.

ಬುದ್ಧ ತಮ್ಮ ಕೈ ಮೇಲೆ ತಲೆ ಒರಗಿಕೊಂಡಿರುವ ಆಕೃತಿಯನ್ನು ಬಾರಾನಗರದ ಘೋಶ್ಪುರದಲ್ಲಿ ನಿರ್ಮಿಸಲಾಗುತ್ತದೆ. ಆ ನಂತರ ಉಳಿದ ಭಾಗಗಳನ್ನು ಬಿಹಾರದ ಬೋಧ್‌ಗಯಾಕ್ಕೆ ಕೊಂಡೊಯ್ದು ಜೋಡಿಸಲಾಗುತ್ತದೆ ಎಂದು ಪಾಲ್‌ ತಿಳಿಸಿದ್ದಾರೆ.

ಶಾಂತಿ ಬಯಸಿ ಭಿಕ್ಕುವಾಗಿದ್ದೇನೆ: ಬೌದ್ಧ ಧರ್ಮ ಸ್ವೀಕರಿಸಿದ ಮುಸ್ಲಿಂ ವ್ಯಕ್ತಿ! ..

2015ರಲ್ಲಿ ದೇಶಪ್ರಿಯಾ ಉದ್ಯಾನವನದಲ್ಲಿ ನಿರ್ಮಾಣಗೊಂಡಿರುವ 80 ಅಡಿ ಎತ್ತರದ ದುರ್ಗಾ ಪ್ರತಿಮೆ ಸಹ ಪಾಲ್‌ ಅವರಿಂದ ಮೂಡಿಬಂದ ಕಲಾಕೃತಿಯಾಗಿದೆ.

Follow Us:
Download App:
  • android
  • ios