Asianet Suvarna News Asianet Suvarna News

ಕುಡಿದು ವಿಮಾನ ಹತ್ತಿದ್ದರೇ Bhagwant Mann..? ನಾಗರಿಕ ವಿಮಾನಯಾನ ಸಚಿವಾಲಯದಿಂದ ತನಿಖೆ

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಜರ್ಮನಿಯ ಫ್ರಾಂಕ್‌ಪರ್ಟ್‌ ವಿಮಾನ ನಿಲ್ದಾಣದಲ್ಲಿ ಕುಡಿದು ತೂರಾಡುತ್ತಿದ್ದರು. ಈ ಕಾರಣದಿಂದ ದೆಹಲಿಗೆ ಬರುತ್ತಿದ್ದ ವಿಮಾನ ತಡವಾಯಿತು ಎಂದು ವರದಿಗಳು ಹೇಳುತ್ತಿವೆ. 

civil aviation ministry to probe if punjab cm bhagwant mann got drunk and boarded flight ash
Author
First Published Sep 20, 2022, 3:33 PM IST

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಜರ್ಮನಿ ವಿಮಾನದಲ್ಲಿ (Flight) ಕುಡಿದು ತೂರಾಡುತ್ತಿದ್ದು, ಅವರಿಗೆ ನಡೆಯಲೂ ಸಾಧ್ಯವಾಗುತ್ತಿರಲಿಲ್ಲ, ಇದರಿಂದ ವಿಮಾನ ತಡವಾಯಿತು (Delayed). ಈ ಹಿನ್ನೆಲೆ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಹಾಗೂ ಬೇರೆ ವಿಮಾನದಲ್ಲಿ ಪಂಜಾಬ್‌ ಸಿಎಂ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ, ಜರ್ಮನಿಯ ಫ್ರಾಂಕ್‌ಫರ್ಟ್‌ ವಿಮಾನ ನಿಲ್ದಾಣದಲ್ಲಿ (Frankfurt Airport) ದೆಹಲಿಗೆ ಬರುತ್ತಿದ್ದ ವಿಮಾನದಿಂದ, ಪಂಜಾಬ್‌ ಸಿಎಂ ಕುಡಿದಿದ್ದರು (Drunk) ಎಂಬ ಕಾರಣಕ್ಕೆ ಅವರನ್ನು ಕೆಳಗಿಳಿಸಲಾಯಿತೇ ಎಂಬ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ (Civil Aviation Minister) ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾಹಿತಿ ನೀಡಿದ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ‘’ಇದು ಅಂತಾರಾಷ್ಟ್ರೀಯ ನೆಲವಾಗಿತ್ತು. ಈ ಹಿನ್ನೆಲೆ ನಾವು ಸತ್ಯವನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಮಾಹಿತಿಯನ್ನು ಒದಗಿಸುವುದು ಲುಫ್ಥಾನ್ಸಕ್ಕೆ (Lufthansa) ಬಿಟ್ಟದ್ದು. ನನಗೆ ಕಳುಹಿಸಿದ ವಿನಂತಿಯ ಆಧಾರದ ಮೇಲೆ ನಾನು ಖಂಡಿತವಾಗಿಯೂ ಅದನ್ನು ಪರಿಶೀಲಿಸುತ್ತೇನೆ’’ ಎಂದು ಹೇಳಿದ್ದಾರೆ. 

ಭಾನುವಾರ, ಭಗವಂತ್ ಮಾನ್ ಫ್ರಾಂಕ್‌ಫರ್ಟ್‌ನಿಂದ ಮಧ್ಯಾಹ್ನ 1.40 ರ ವಿಮಾನವನ್ನು ಹತ್ತಬೇಕಿತ್ತು ಆದರೆ, ಆ ವಿಮಾನ ತಡವಾಗಿ ಕೊನೆಗೆ ಸಂಜೆ 4.30ಕ್ಕೆ ಹಾರಿತು. ಆದರೂ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್ ಸೋಮವಾರ ಮುಂಜಾನೆ ಬೇರೆ ವಿಮಾನವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ‘ಭಗವಂತ್‌ ಮಾನ್‌ರನ್ನು ಅವರ ಪತ್ನಿ ಹಾಗೂ ಸಹಾಯಕರು ಹಿಡಿದುಕೊಂಡರೂ ಅವರಿಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ’ ಎಂದು ವಿಮಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಎನ್ನಲಾದ ಕೆಲವರು ಟ್ವೀಟ್‌ ಮಾಡಿದ್ದರು.

ಇದನ್ನು ಓದಿ: ಜರ್ಮನಿಯಲ್ಲಿ ವಿಮಾನದಲ್ಲಿ ಕುಡಿದು ತೂರಾಡಿದರೇ ಪಂಜಾಬ್‌ ಸಿಎಂ Bhagwant Mann..?

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಂದ ಫ್ರಾಂಕ್‌ಫರ್ಟ್‌ - ದೆಹಲಿ ವಿಮಾನ ತಡವಾಗಿದೆ ಎಂಬ ವರದಿ ಬಂದ ಬಳಿಕ ರಾಜಕೀಯ ಆರೋಪ - ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಅಲ್ಲದೆ, ಅವರಿಗೆ ನಡೆಯಲು ಸಾಧ್ಯವಾಗದಷ್ಟು ಕುಡಿದಿದ್ದರು ಎಂಬ ಕಾರಣಕ್ಕೆ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದೂ ವರದಿಗಳು ಹೇಳುತ್ತಿವೆ. ಆದರೆ, "ಒಳಬರುವ ವಿಮಾನ ವಿಳಂಬವಾಗಿ ಮತ್ತು ವಿಮಾನ ಬದಲಾವಣೆಯ ಕಾರಣ" ಯೋಜಿಸಿದ್ದಕ್ಕಿಂತ ತಡವಾಗಿ ಹೊರಟಿತು ಎಂದು ನಂತರ ಲುಫ್ಥಾನ್ಸ ಸ್ಪಷ್ಟನೆ ನೀಡಿತ್ತು. 
ಇನ್ನು, ಭಗವಂತ್‌ ಮಾನ್ ಕುಡಿದಿದ್ದರು ಮತ್ತು ಅವರ ಕಾರಣದಿಂದಾಗಿ ವಿಮಾನವು 4 ಗಂಟೆಗಳ ಕಾಲ ವಿಳಂಬವಾಯಿತು ಎಂದು ಹೇಳುವ ವರದಿಗಳನ್ನು ಪಂಜಾಬ್‌ನ ಶಿರೋಮಣಿ ಅಕಾಲಿ ದಳ ಹಾಗೂ ಪಂಜಾಬ್‌ ಕಾಂಗ್ರೆಸ್‌ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

ಭಗವಂತ್‌ ಮಾನ್ ಕುಡಿದಿದ್ದರು ಮತ್ತು "ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ನಡೆಯಲು ಸಹ ಸಾಧ್ಯವಾಗದೆ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಸಹ ಪ್ರಯಾಣಿಕರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳುತ್ತವೆ. ಮತ್ತು ಇದರಿಂದ 4 ಗಂಟೆಗಳ ವಿಮಾನ ವಿಳಂಬಕ್ಕೆ ಕಾರಣವಾಯಿತು. ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು. ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದೆ" ಎಂದು ಅಕಾಲಿ ದಳದ ನಾಯಕ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದರು. 

ಇದನ್ನೂ ಓದಿ: ಜಲಾಶಯದ 'ಪವಿತ್ರ ನೀರು' ಕುಡಿದ ಬಳಿಕ ಅಸ್ವಸ್ಥರಾದ ಪಂಜಾಬ್‌ ಸಿಎಂ..!

ಆದರೆ, ಎಎಪಿ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್‌ ಈ ಆರೋಪಗಳನ್ನು ಆಧಾರ ರಹಿತ ಹಾಗೂ ಬೋಗಸ್‌ ಎಂದು ತಳ್ಳಿಹಾಕಿದ್ದಾರೆ. ಅಲ್ಲದೆ, ಪಂಜಾಬ್‌ ಸಿಎಂ ಮಾನಹಾನಿ ಮಾಡಲು ವಿಪಕ್ಷಗಳು ಆರೋಪ ಮಾಡುತ್ತಿವೆ ಹಾಗೂ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

Follow Us:
Download App:
  • android
  • ios