Asianet Suvarna News Asianet Suvarna News

ಜರ್ಮನಿಯಲ್ಲಿ ವಿಮಾನದಲ್ಲಿ ಕುಡಿದು ತೂರಾಡಿದರೇ ಪಂಜಾಬ್‌ ಸಿಎಂ Bhagwant Mann..?

ಜರ್ಮನಿಯಲ್ಲಿ ಕುಡಿದು ತೂರಾಡುತ್ತಿದ್ದ ಪಂಜಾಬ್‌ ಸಿಎಂರನ್ನು ವಿಮಾನದಿಂದ ಹೊರಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ. ಭಗವಂತ್‌ ಮಾನ್‌ಗೆ ನಿಲ್ಲಲೂ ಆಗುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಇದರಿಂದಲೇ ವಿಮಾನ 4 ತಾಸು ತಡವಾಯಿತು. ಆದರೂ, ಪಂಜಾಬ್‌ ಸಿಎಂ ಭಾರತಕ್ಕೆ ಬೇರೆ ವಿಮಾನದಲ್ಲಿ ಬಂದಿದ್ದಾರೆ. 

drunk bhagwant mann delayed flight say some parties wrong says aap ash
Author
First Published Sep 20, 2022, 8:56 AM IST

ನವದೆಹಲಿ: ಈ ಹಿಂದೆಯೂ ತಮ್ಮ ಮದ್ಯ ಸೇವನೆಯ ಚಟದ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದ ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್‌ ಮಾನ್‌ ಇದೀಗ ಜರ್ಮನಿಯಲ್ಲಿ ಅತಿಯಾಗಿ ಕುಡಿದು ತೂರಾಡುತ್ತಿದ್ದುದರಿಂದ ವಿಮಾನದಿಂದ (Flight) ಹೊರದಬ್ಬಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್‌ಗೆ ಬಂಡವಾಳ (Investment) ಆಕರ್ಷಿಸಲು ಮುಖ್ಯಮಂತ್ರಿ ಭಗವಂತ್‌ ಮಾನ್‌ 8 ದಿನಗಳ ಜರ್ಮನಿ ಪ್ರವಾಸಕ್ಕೆ ತೆರಳಿದ್ದರು. ಭಾನುವಾರ ಅವರು ಭಾರತಕ್ಕೆ ವಾಪಸಾಗಬೇಕಿತ್ತು. ಆದರೆ, ಫ್ರಾಂಕ್‌ಫರ್ಚ್‌ ವಿಮಾನ ನಿಲ್ದಾಣದಲ್ಲಿ (Frankfurt Airport) ಲುಫ್ತಾನ್ಸಾ ವಿಮಾನ (Lufthansa Flight) ಏರಿದ ಅವರು ನಿಲ್ಲಲೂ ಸಾಧ್ಯವಾಗದಷ್ಟು ತೂರಾಡುತ್ತಿದ್ದರು. ಹೀಗಾಗಿ ಅವರನ್ನು ವಿಮಾನದ ಸಿಬ್ಬಂದಿ ಕೆಳಗಿಳಿಸಿದರು. ಪರಿಣಾಮ ಆ ವಿಮಾನ ನಾಲ್ಕು ತಾಸು ತಡವಾಗಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಯಿತು. ನಂತರ ಬೇರೆ ವಿಮಾನದಲ್ಲಿ ಭಗವಂತ್ ಮಾನ್‌ ಮತ್ತು ಅಧಿಕಾರಿಗಳು ಸೋಮವಾರ ಬೆಳಗ್ಗೆ ಭಾರತಕ್ಕೆ ಬಂದರು ಎಂದು ಹೇಳಲಾಗಿದೆ.

ಭಾನುವಾರ, ಭಗವಂತ್ ಮಾನ್ ಫ್ರಾಂಕ್‌ಫರ್ಟ್‌ನಿಂದ ಮಧ್ಯಾಹ್ನ 1.40 ರ ವಿಮಾನವನ್ನು ಹತ್ತಬೇಕಿತ್ತು ಆದರೆ, ಆ ವಿಮಾನ ತಡವಾಗಿ ಕೊನೆಗೆ ಸಂಜೆ 4.30ಕ್ಕೆ ಹಾರಿತು. ಆದರೂ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್ ಸೋಮವಾರ ಮುಂಜಾನೆ ಬೇರೆ ವಿಮಾನವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ‘ಭಗವಂತ್‌ ಮಾನ್‌ರನ್ನು ಅವರ ಪತ್ನಿ ಹಾಗೂ ಸಹಾಯಕರು ಹಿಡಿದುಕೊಂಡರೂ ಅವರಿಗೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ’ ಎಂದು ವಿಮಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಎನ್ನಲಾದ ಕೆಲವರು ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ಕಸ ಎಸೆಯುತ್ತಿದ್ದ ಪಂಜಾಬ್‌ ಸಿಎಂ ನಿವಾಸಕ್ಕೆ 10 ಸಾವಿರ ದಂಡ..!

ಆದರೆ ಈ ಆರೋಪವನ್ನು ಭಗವಂತ್‌ ಮಾನ್‌ ಮತ್ತು ಆಮ್‌ ಆದ್ಮಿ ಪಕ್ಷ ನಿರಾಕರಿಸಿದೆ. ಭಗವಂತ್‌ ಮಾನ್‌ ಅವರಿಗೆ ಹುಷಾರಿರಲಿಲ್ಲ, ಹೀಗಾಗಿ ಪೂರ್ವನಿರ್ಧರಿತ ವಿಮಾನದಲ್ಲಿ ಬರಲು ಸಾಧ್ಯವಾಗಲಿಲ್ಲ ಎಂದು ಆಪ್‌ ಹೇಳಿದೆ.ವಿರೋಧ ಪಕ್ಷವು "ಅಪ್ರಚಾರವನ್ನು ಹರಡುತ್ತಿದೆ" ಎಂದು ಆರೋಪಿಸಿದೆ. ಅಲ್ಲದೆ, ಎಎಪಿ ಲುಫ್ಥಾನ್ಸದ ಹೇಳಿಕೆಯನ್ನು (Statement) ಹಂಚಿಕೊಂಡಿದೆ, ಅದು "ಒಳಬರುವ ವಿಮಾನ ವಿಳಂಬವಾಗಿ ಮತ್ತು ವಿಮಾನ ಬದಲಾವಣೆಯ ಕಾರಣ" ಯೋಜಿಸಿದ್ದಕ್ಕಿಂತ ತಡವಾಗಿ ಹೊರಟಿತು ಎಂದು ಹೇಳಿದೆ.
ಭಗವಂತ್‌ ಮಾನ್ ಕುಡಿದಿದ್ದರು ಮತ್ತು ಅವರ ಕಾರಣದಿಂದಾಗಿ ವಿಮಾನವು 4 ಗಂಟೆಗಳ ಕಾಲ ವಿಳಂಬವಾಯಿತು ಎಂದು ಹೇಳುವ ವರದಿಗಳನ್ನು ವಿರೋಧ ಪಕ್ಷಗಳ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 

"ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ನಡೆಯಲು ಸಹ ಸಾಧ್ಯವಾಗದೆ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಸಹ ಪ್ರಯಾಣಿಕರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳುತ್ತವೆ. ಮತ್ತು ಇದರಿಂದ 4 ಗಂಟೆಗಳ ವಿಮಾನ ವಿಳಂಬಕ್ಕೆ ಕಾರಣವಾಯಿತು. ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು. ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದೆ" ಎಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಲಾಶಯದ 'ಪವಿತ್ರ ನೀರು' ಕುಡಿದ ಬಳಿಕ ಅಸ್ವಸ್ಥರಾದ ಪಂಜಾಬ್‌ ಸಿಎಂ..!

ಭಗವಂತ್‌ ಮಾನ್‌ ಅವರು ಪಂಜಾಬ್‌ನ ಮಾನವನ್ನು ವಿದೇಶದಲ್ಲಿ ಹರಾಜು ಹಾಕಿದ್ದಾರೆ ಎಂದು ಶಿರೋಮಣಿ ಅಕಾಲಿ ದಳದ  (Shiromani Akali Dal) ಮುಖ್ಯಸ್ಥ ಹಾಗೂ ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್‌ ಸಿಂಗ್‌ ಬಾದಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನದಿಂದ ಕೆಳಗಿಳಿಸಲ್ಪಟ್ಟ ಕಾರಣ ಭಗವಂತ್‌ ಮಾನ್‌ ಆಮ್‌ ಆದ್ಮಿ ಪಕ್ಷದ ಮೊಟ್ಟ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರಾಗಿದ್ದರು. ಸೋಮವಾರ ಬೆಳಗ್ಗೆ ದೆಹಲಿಗೆ ಬಂದವರೇ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರ ಮನೆಗೆ ತೆರಳಿ ಈ ಘಟನೆಯ ಕುರಿತು ವಿವರ ನೀಡಿದ್ದಾರೆ ಎಂದೂ ಹೇಳಲಾಗಿದೆ. 

Follow Us:
Download App:
  • android
  • ios