ನವದೆಹಲಿ[ಫೆ.28]: ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಸಂಬಂಧ ಭುಗಿಲೆದ್ದಿರುವ ಹಿಂಸಾಚಾರ ನಡುವೆ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯೊಂದನ್ನು ನೀಡುತ್ತಾ 'ದೇಶದಲ್ಲಿ ಏನೇ ತಪ್ಪಾದರೂ, ಬ್ರಿಟಿಷರನ್ನು ದೂಷಿಸುವುದು ಸರಿಯಲ್ಲ. ನಾವು ಗುಲಾಮರಂತೆ ಇದ್ದಾಗ ಏನೋ ನಡೆಯುತ್ತಿತ್ತು. ಆದರೆ ಈಗ ಅದು ಸಾಧ್ಯವಿಲ್ಲ' ಎಂದಿದ್ದಾರೆ.

ನಾಗ್ಪುರದಲ್ಲಿ ನಡೆಯುತ್ತಿರುವ ನವವರ್ಷ 2020 ಕಾರ್ಯಕ್ರಮದಲ್ಲಿ ಸಾಮಾಜಿಕ ಶಿಸ್ತಿನ ಕುರಿತು ಮಾತನಾಡಿದ RSS ನಾಯಕ ಭಾಗವತ್ 'ನಾವೀಗ ಸ್ವತಂತ್ರರು. ಇಂದು ನಮ್ಮ ದೇಶದಲ್ಲಿ ನಮ್ಮದೇ ಆಡಳಿತವಿದೆ. ಸ್ವಾತಂತ್ರ್ಯ ಕಾಪಾಡಿಕೊಂಡು, ಸರಿಯಾಗಿ ಮುನ್ನಡೆಸಲು ಸಾಮಾಜಿಕ ಹಾಗೂ ನಾಗರಿಕ ಶಿಸ್ತು ಅತ್ಯಗತ್ಯ' ಎಂದಿದ್ದಾರೆ.

ಅಲ್ಲದೇ 'ನಮ್ಮ ದೇಶದಲ್ಲಿ ಏನೇ ನಡೆದರೂ ಅದಕ್ಕೆ ನಾವೇ ಜವಾಬ್ದಾರರು. ಹೀಗಾಗಿ ನಾವೇನೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಅನೇಕ ಬಾರಿ ಯೋಚಿಸಬೇಕಾಗುತ್ತದೆ. ಗುಲಾಮರಾಗಿದ್ದಾಗ ಏನೋ ನಡೆಯುತ್ತಿತ್ತು. ಆದರೀಗ ಅದು ಸಾಧ್ಯವಿಲ್ಲ. ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಾಗಿದೆ' ಎಂದಿದ್ದಾರೆ

ಭಾಷಣದ ನಡುವೆ ಮೋಹನ್ ಭಾಗವತ್ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಭಗಿನಿ ನಿವೇದಿತಾ ಕುರಿತಾಗಿಯೂ ಉಲ್ಲೇಖಿಸಿದ್ದರೆಂಬುವುದು ಗಮನಾರ್ಹ