ನವದೆಹಲಿ(ಜು.25): ಕೋವಿಡ್‌ ಸೋಂಕಿತರಿಗೆ ನೀಡಲು ಬಳಸಲಾಗುತ್ತಿರುವ ಫೆವಿಪಿರವಿರ್‌ ಮಾತ್ರೆಯನ್ನು ಭಾರತದಲ್ಲಿ ಉತ್ಪಾದಿಸಿ ಮಾರಾಟ ಮಾಡಲು ಇನ್ನೂ ಮೂರು ಕಂಪನಿಗಳಿಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಅನುಮೋದನೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಮಾತ್ರೆಗಳ ಪೂರೈಕೆಯಲ್ಲಿನ ವ್ಯತ್ಯಯ, ಕಾಳಸಂತೆ ಮಾರಾಟ ತಪ್ಪಲಿದೆ ಎನ್ನಲಾಗಿದೆ.

ಮನೆಯವರಿಂದಲೇ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು!

ಸಾಮಾನ್ಯದಿಂದ ಮಧ್ಯಮ ಸ್ವರೂಪದ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಫೆವಿಪಿರವಿರ್‌ ಮಾತ್ರೆಯನ್ನು ನೀಡಲು ಈಗಾಗಲೇ ಭಾರತ ಸರ್ಕಾರ ತನ್ನ ಅನುಮತಿ ನೀಡಿದೆ. ಅದರನ್ವಯ ಸಿಪ್ಲಾ ಕಂಪನಿಯು ಸಿಪ್ಲೆಂಜಾ ಹೆಸರಿನಲ್ಲಿ ಮಾತ್ರೆಯನ್ನು ಬಿಡುಗಡೆ ಮಾಡಲಿದೆ. ಆಗಸ್ಟ್‌ ಮೊದಲ ವಾರದಿಂದಲೇ ಲಭ್ಯವಾಗಲಿರುವ ಈ ಮಾತ್ರೆಗೆ 68 ರು. ದರ ನಿಗದಿಪಡಿಸಲಾಗಿದೆ.

ಇದೇ ವೇಳೆ ಜೆನ್‌ಬಕ್ಟ್ರ್‍ ಫಾರ್ಮಾಸ್ಯುಟಿಕಲ್ಸ್‌ ಕಂಪನಿ ಫೆವಿಪಿರವಿರ್‌ ಮಾತ್ರೆಯನ್ನು ‘ಫವಿವೆಂಟ್‌’ ಹೆಸರಿನಲ್ಲಿ ಬಿಡುಗಡೆ ಮಾಡಲು ಮತ್ತು ಬ್ರಿನ್‌ಟನ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಗೆ ‘ಫವಿಟನ್‌’ ಹೆಸರಿನಲ್ಲಿ ಮಾತ್ರೆ ಬಿಡುಗಡೆ ಮಾಡಲೂ ಡಿಸಿಜಿಐ ಅನುಮತಿ ನೀಡಿದೆ. ಫಲಿವೆಂಟ್‌ ಮಾತ್ರೆಗೆ 39 ರು. ದರ ನಿಗದಿಪಡಿಸಿದ್ದರೆ, ಫವಿಟನ್‌ ಮಾತ್ರೆಗೆ 59 ರು. ದರ ನಿಗದಿ ಪಡಿಸಲಾಗಿದೆ.

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ!

ಭಾರತದಲ್ಲಿ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು ಫೆವಿಪಿರವಿರ್‌ ಮಾತ್ರೆಯನ್ನು ‘ಫ್ಯಾಬಿಫä್ಲ’ ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರತಿ ಮಾತ್ರೆಗೆ 75 ರು. ದರ ನಿಗದಿಪಡಿಸಿದೆ.