ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಭಾರತವು ತನ್ನದೇ ಆದ ನಿರೂಪಣೆಯನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ದಿಟ್ಟವಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ಚೀನಾ ಸರ್ಕಾರದಿಂದ ನಿರ್ವಹಿಸಲ್ಪಡುವ ಪತ್ರಿಕೆಯಲ್ಲಿನ ಲೇಖನದಲ್ಲಿ ಬಣ್ಣಿಸಲಾಗಿದೆ.
ನವದೆಹಲಿ (ಜನವರಿ 5, 2024): ಭಾರತದ ವಿರುದ್ಧ ಸದಾ ತೊಡೆ ತಟ್ಟುವ ಚೀನಾ, ಅಪರೂಪಕ್ಕೆಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಭಾರತ ಕಂಡ ಅಭಿವೃದ್ಧಿಯನ್ನು ಪ್ರಶಂಸಿಸಿದೆ. ಮೋದಿ ಅವರ ನೇತೃತ್ವದಲ್ಲಿ ಭಾರತವು ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಮತ್ತು ವಿದೇಶಾಂಗ ನೀತಿಗಳಲ್ಲಿ ಭಾರಿ ಪ್ರಗತಿಯನ್ನು ಸಾಧಿಸಿದೆ ಎಂದು ಚೀನಾ ಸರ್ಕಾರಿ ಮಾಧ್ಯಮವಾದ ‘ಗ್ಲೋಬಲ್ ಟೈಮ್ಸ್’ ಹೊಗಳಿದೆ.
‘ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಭಾರತವು ತನ್ನದೇ ಆದ ನಿರೂಪಣೆಯನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ದಿಟ್ಟವಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ’ ಎಂದು ಸರ್ಕಾರದಿಂದ ನಿರ್ವಹಿಸಲ್ಪಡುವ ಪತ್ರಿಕೆಯಲ್ಲಿನ ಲೇಖನದಲ್ಲಿ ಬಣ್ಣಿಸಲಾಗಿದೆ.
ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್, ಸಮುದ್ರ ಸೌಂದರ್ಯಕ್ಕೆ ಮಂತ್ರಮುಗ್ಧ
ಈ ಲೇಖನವನ್ನು ಫುಡಾನ್ ವಿಶ್ವವಿದ್ಯಾಲಯದ ನಿರ್ದೇಶಕ ಝಾಂಗ್ ಜಿಯಾಡಾಂಗ್ ಅವರು ಬರೆದಿದ್ದಾರೆ. ಲೇಖನದಲ್ಲಿ ಭಾರತದ ದೃಢವಾದ ಆರ್ಥಿಕ ಬೆಳವಣಿಗೆ, ನಗರ ಆಡಳಿತದಲ್ಲಿನ ಸುಧಾರಣೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೊಗಳಲಾಗಿದೆ. ಅಲ್ಲದೆ, ಚೀನಾ ಜತೆಗಿನ ಬದಲಾದ ಅಂತಾರಾಷ್ಟ್ರೀಯ ಬಾಂಧವ್ಯದ ಬಗ್ಗೆ ಒತ್ತಿ ಹೇಳಲಾಗಿದೆ.
‘ಇದಕ್ಕೆ ಉದಾಹರಣೆ ಎಂಬಂತೆ, ಈ ಮೊದಲು ಚೀನಾ ಮತ್ತು ಭಾರತದ ನಡುವಿನ ವ್ಯಾಪಾರ ಅಸಮತೋಲನದ ವಿಷಯ ಬಂದಾಗ ಈ ಅಸಮತೋಲನ ನಿಯಂತ್ರಿಸಲು ಚೀನಾ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಭಾರತದ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುತ್ತಿದ್ದರು. ಆದರೆ ಈಗ ಭಾರತದ ಅಧಿಕಾರಿಗಳು, ಭಾರತದ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅಲ್ಲದೇ ರಾಜಕೀಯವಾಗಿಯೂ ಸಹ ಪಾಶ್ಚಿಮಾತ್ಯತೆಯನ್ನು ಬಿಟ್ಟು ಭಾರತದ ರಾಜಕೀಯವನ್ನು ಮುನ್ನೆಲೆಗೆ ತಂದಿದ್ದಾರೆ’ ಎಂದು ಜಾಂಗ್ ಲೇಖನದಲ್ಲಿ ಹೇಳಿದ್ದಾರೆ.
‘ಭಾರತದ ಈ ಎಲ್ಲಾ ಬದಲಾವಣೆಗಳು ವಸಹಾತುಶಾಹಿ ನೆರಳಿಂದ ಆಚೆ ಬರಲು ಸಹಾಯ ಮಾಡಿವೆ. ಅಲ್ಲದೇ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ವಿಶ್ವದ ನಾಯಕನಾಗಲು ಸಹಾಯ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರಿಗಟ್ಟುವ ನಾಯಕರಲ್ಲ: ಶಾಸಕ ಜಿ.ಟಿ.ದೇವೇಗೌಡ
ವಿದೇಶಾಂಗ ನೀತಿಗೆ ಹೊಗಳಿಕೆ
ವಿಶೇಷವಾಗಿ ಈ ಲೇಖನದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಹೊಗಳಲಾಗಿದೆ. ಉಕ್ರೇನ್ ಯುದ್ಧದ ಸಮಯದಲ್ಲಿ ತಟಸ್ಥವಾಗಿ ಉಳಿದುಕೊಂಡರೂ ಸಹ ಅಮೆರಿಕ, ಜಪಾನ್ ಮತ್ತು ರಷ್ಯಾಗಳಂತ ಪ್ರಮುಖ ದೇಶಗಳೊಂದಿಗೆ ಬಾಂಧವ್ಯವನ್ನು ಉಳಿಸಿಕೊಂಡಿದೆ. ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತ ಬಹುಪಕ್ಷೀಯವಾಗಿ ವಿದೇಶಾಂಗ ಸಂಬಂಧವನ್ನು ವೃದ್ಧಿಗೊಳಿಸಿಕೊಂಡಿದೆ. ಹೀಗಾಗಿ ಪ್ರಸ್ತುತ ಭಾರತ ಬಲವಾದ ಮತ್ತು ಹೆಚ್ಚು ದೃಢವಾದ ದೇಶವಾಗಿ ಮಾರ್ಪಟ್ಟಿದೆ ಎಂಬುದನ್ನು ಇತರ ದೇಶಗಳು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್
