Bipin Rawat Karnataka Connection ಅವರಿಗಿತ್ತು ಕರ್ನಾಟಕದ ಕಾಶ್ಮೀರ ಕೊಡಗಿನ ನಂಟು..!
* ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ
* ಊಟಿ ಸಮೀಪದ ಕೂನೂರು ಎಂಬಲ್ಲಿ ಹೆಲಿಕಾಪ್ಟರ್ ಅವಘಡ
* ಬಿಪಿನ್ ರಾವತ್ ಪತ್ನಿ ಸೇರಿ ಒಂಬತ್ತಕ್ಕೂ ಹೆಚ್ಚು ಸಾವು
ಬೆಂಗಳೂರು(ಡಿ.08): ಭಾರತೀಯ ಸೇನಾಪಡೆಗಳ(CDS) ಮುಖ್ಯಸ್ಥ ಬಿಪಿನ್ ರಾವತ್ ( Bipin Rawat) ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ (Indian Air Force) ಹೆಲಿಕಾಪ್ಟರ್ Mi-17V5 ಚಾಪರ್ ತಮಿಳುನಾಡಿನ ಊಟಿಯಲ್ಲಿಂದು(ಡಿ.08) ಪತನಗೊಂಡಿದ್ದು, ಈಗಾಗಲೇ ಹಲವು ಸಾವು-ನೋವುಗಳು ಸಂಭವಿಸಿವೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಿಡಿಎಸ್ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕರ್ನಾಟಕದ ಕಾಶ್ಮೀರ ಎನಿಸಿಕೊಂಡಿರುವ ಕೊಡಗಿನ ಜತೆಗೂ ಒಳ್ಳೆಯ ನಂಟನ್ನು ಹೊಂದಿದ್ದರು.
ಭಾರತೀಯ ಮೂರು ಸೇನಾಪಡೆಯ ಮುಖ್ಯಸ್ಥ(ಸಿಡಿಎಸ್-Chief of Defence Staff)ರಾಗಿದ್ದಂತಹ ಜನರಲ್ ಬಿಪಿನ್ ರಾವತ್ ಅವರು ಕರ್ನಾಟಕ ಕಾಶ್ಮೀರ ಖ್ಯಾತಿಯ ಕೊಡಗು (Kodagu) ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜನರಲ್ ಬಿಪಿನ್ ರಾವತ್ ಅವರು ಮೂರು ಬಾರಿ ಕೊಡಗಿಗೆ ಭೇಟಿ ನೀಡಿದ್ದರು.
* 2016ರ ಆಗಸ್ಟ್ 6ರಂದು ಮಡಿಕೇರಿಯಲ್ಲಿ ನಡೆದಿದ್ದ ಮಾಜಿ ಸೈನಿಕರ ಸಮಾವೇಶದಲ್ಲಿ ಅಂದಿನ ಭೂಸೇನಾ ಮುಖ್ಯಸ್ಥರಾಗಿದ್ದ ದಲ್ಬೀರ್ ಸಿಂಗ್ ಅವರೊಂದಿಗೆ ಬಿಪಿನ್ ರಾವತ್ ಅವರು ಮೊದಲ ಬಾರಿಗೆ ಕೊಡಗಿಗೆ ಆಗಮಿಸಿದ್ದರು.
* ಇದಾದ ಬಳಿಕ 2017ರ ನವೆಂಬರ್ 4ರಂದು ಗೋಣಿಕೊಪ್ಪಕ್ಕೆ ಆಗಮಿಸಿ ಜನರಲ್ ತಿಮ್ಮಯ್ಯ ಹಾಗೂ ಕಾರ್ಯಪ್ಪ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ದರು.
* ಇನ್ನು ಇತ್ತೀಚೆಗಷ್ಟೇ ಅಂದರೆ 2021ರ ಫೆಬ್ರವರಿ 6ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ ವೇಳೆ ಕೂಡ ಬಿಪಿನ್ ರಾವತ್ ಕೊಡಗಿಗೆ ಆಗಮಿಸಿದ್ದರು.
"
IAF Mi-17V-5 Helicopter: ತಮಿಳುನಾಡಿನಲ್ಲಿ ಪತನಗೊಂಡ ರಷ್ಯಾ ನಿರ್ಮಿತ ಹೆಲಿಕಾಪ್ಟರ್‌ನ ಕಂಪ್ಲೀಟ್ ಡಿಟೇಲ್ಸ್!
ತಮಿಳುನಾಡಿನ (Tamil Nadu) ನೀಲಗಿರಿ ತಪ್ಪಲಿನ ಬಳಿ ಅಂದರೆ ಕೂನೂರು ಎಂಬಲ್ಲಿ ಈ ಅವಘಡ ಸಂಭವಿಸಿದ್ದು, ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಸೇರಿದಂತೆ ಈಗಾಗಲೇ ಹನ್ನೊಂದು ಮಂದಿ ಕೊನೆಯುಸಿರೆಳೆದಿದ್ದು, ಬಹುತೇಕ ಮಂದಿಯ ಪರಿಸ್ಥಿತಿ ಗಂಭೀರ ಎನಿಸಿದೆ ಎಂದು ವರದಿಯಾಗಿದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರನ್ನೊಳಗೊಂಡ ತಂಡ ನವದೆಹಲಿಯಿಂದ ಊಟಿಯತ್ತ ಪ್ರಯಾಣ ಬೆಳೆಸಿದ್ದರು. ಊಟಿ ಸ್ಟಾಫ್ ಕಾಲೇಜಿನಲ್ಲಿ ಸಿಡಿಎಸ್ ಬಿಪಿನ್ ರಾವತ್ ಉಪನ್ಯಾಸ ಕಾರ್ಯಕ್ರಮವಿತ್ತು ಆದರೆ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಲು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಎಂಐ-17 ಹೆಲಿಕಾಪ್ಟರ್ ಸ್ಪೋಟಗೊಂಡಿದೆ.
IAF Chopper Crash: ವಾಯುಸೇನೆಯ ವಿಶ್ವಾಸಾರ್ಹ MI-17 ಹೆಲಿಕಾಪ್ಟರ್, 26/11 ದಾಳಿಯಲ್ಲಿ ಮಹತ್ವದ ಪಾತ್ರ!
ಎಂಐ-17 ಹೆಲಿಕಾಪ್ಟರ್ (IAF Mi-17V5 helicopter) ಲ್ಯಾಂಡಿಂಗ್ ಆಗಲು ಕೇವಲ 5 ನಿಮಿಷಗಳಿದ್ದಾಗ ಇಂದು ಮಧ್ಯಾಹ್ನ 12.20ಕ್ಕೆ ಸ್ಪೋಟಗೊಂಡಿದೆ. ಹವಾಮಾನದ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನ ಇಂಜಿನ್ ನಿಷ್ಕ್ರಿಯಗೊಂಡು ಈ ದುರ್ಘಟನೆ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಈ ಸ್ಪೋಟ ಯಾವ ಪ್ರಮಾಣದಲ್ಲಿ ಸಂಭವಿಸಿದೆ ಎಂದರೆ, ಇಡೀ ಎಂಐ-17 ಹೆಲಿಕಾಪ್ಟರ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ವಿವಿಐಪಿಯವರು ಬಳಸುವ ಎಂಐ-17 ಹೆಲಿಕಾಪ್ಟರ್ ಇದು: ಭಾರತೀಯ ಮೂರು ಸೇನೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ಬಳಸುತ್ತಿದ್ದ ಎಂಐ 17 ಹೆಲಿಕಾಪ್ಟರ್, ದೇಶದ ಪ್ರಧಾನಿ, ರಕ್ಷಣಾ ಸಚಿವರಾದಂತಹ ವಿವಿಐಪಿಗಳು ಬಳಸುತ್ತಿದ್ದರು. ಈ ಹೆಲಿಕಾಪ್ಟರ್ ವಿಶೇಷವೆಂದರೆ, ಇದರಲ್ಲಿ ಎರಡು ಇಂಜಿನ್‌ಗಳಿದ್ದು, ಒಂದು ವೇಳೆ ಒಂದು ಇಂಜಿನ್ ದಿಢೀರ್ ಕೈಕೊಟ್ಟರೆ, ಮತ್ತೊಂದು ಇಂಜಿನ್ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಬಂದು ತಲುಪಬಹುದಾದ ವ್ಯವಸ್ಥೆಯಿದೆ. ಹೀಗಿದ್ದು, ಈ ಅವಘಡ ಸಂಭವಿಸಿದ್ದು ಹೇಗೆ ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ.