ನವದೆಹಲಿ(ಜ.01): ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್)ರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್ ಬಿಪಿನ್ ರಾವತ್, ಹೊಸ ಹುದ್ದೆ ಹಾಗೂ ಸಮವಸ್ತ್ರದ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಸಿಡಿಎಸ್ ನೇಮಕದಿಂದಾಗಿ ಸೇನೆಯ ಮೂರು ಪಡೆಗಳಲ್ಲಿ ಸಮನ್ವಯ ಸಾಧಿಸುವುದು ಇನ್ನು ಸುಲಭ ಎಂದಿರುವ ಬಿಪಿನ್ ರಾವತ್, ಮೂರೂ ಪಡೆಗಳ ಬೇಕು-ಬೇಡಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಿಡಿಎಸ್ ಸಹಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯದಿಂದ ದೂರ ಇರ್ತಿವಿ: ಸಿಡಿಎಸ್ ಬಿಪಿನ್ ರಾವತ್!

ಇದೇ ವೇಳೆ ಹೊಸ ಸಮವಸ್ತ್ರದ ಕುರಿತು ಮತನಾಡಿರುವ ಬಿಪಿನ್ ರಾವತ್, '41 ವರ್ಷಗಳ ಕಾಲ ಬಳಿಸಿದ್ದ ಗೋರ್ಖಾ ರೆಜಿಮೆಂಟ್‌ನ ಹ್ಯಾಟ್ ಇಲ್ಲದಿರುವುದರಿಂದ ನನ್ನ ತಲೆ ಹಗುರವಾಗಿದೆ..' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹೊಸ ಮೆಡಲ್‌ಗಳು, ಹೊಸ ಟೋಪಿ ಹಾಗೂ ಹೊಸ ಸಮವಸ್ತ್ರದಿಂದ ನಾನು ಹಗುರವಾಗಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಬಿಪಿನ್ ರಾವತ್ ಮಾರ್ಮಿಕವಾಗಿ ಉತ್ತರಿಸಿದರು.

ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕಾರ!

ನಿನ್ನೆ(ಡಿ.31)ಯಷ್ಟೇ ಭಾರತೀಯ ಭೂಸೇನೆಯ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗಿದ್ದ ಜನರಲ್ ಬಿಪಿನ್ ರಾವತ್, ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.