Asianet Suvarna News Asianet Suvarna News

ಕೇವಲ 7 ತಾಸ​ಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ!

* 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ

* ಕೇವಲ 7 ತಾಸ​ಲ್ಲಿ 101 ಸಂತಾನಹರಣ ಶಸ್ತ್ರಚಿಕಿತ್ಸೆ: ತನಿಖೆಗೆ ಆದೇಶ

* ದಿನ​ಕ್ಕೆ ಗರಿಷ್ಠ 30 ಸರ್ಜರಿ ಮಾತ್ರ ನಡೆ​ಸ​ಬ​ಹು​ದು

* 101 ಸರ್ಜರಿ ಹೇಗೆ ಮಾಡಿದ ಎಂಬುದೇ ಅಚ್ಚ​ರಿ

Chhattisgarh govt orders probe after surgeon operates on 101 women in 7 hours at sterilisation camp pod
Author
Bangalore, First Published Sep 5, 2021, 12:30 PM IST

ರಾಯ್‌ಪುರ(ಸೆ.05): ಕೇವಲ 7 ಗಂಟೆಯಲ್ಲಿ 101 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದು ಹೇಳಿ​ಕೊ​ಳ್ಳು​ತ್ತಿ​ರು​ವ ವೈದ್ಯನ ವಿರುದ್ಧ ತನಿಖೆಗೆ ಛತ್ತೀಸ್‌ಗ​ಢ ಸರ್ಕಾರ ಆದೇಶಿಸಿದೆ.

ಸರ್ಕಾರದ ನಿಯಮದಂತೆ ಒಬ್ಬ ವೈದ್ಯ ದಿನವೊಂದಕ್ಕೆ ಗರಿ​ಷ್ಠ 30 ಸಂತಾ​ನ​ಹ​ರಣ ಸರ್ಜರಿ ಮಾಡಬಹುದು. ಆದರೆ, ಸುರ್ಜುಗಾ ಜಿಲ್ಲೆಯ ನರ್ಮ​ದಾ​ಪುರ ಎಂಬಲ್ಲಿ ಆ.27ರಂದು ಆಯೋಜಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಮಧ್ಯಾಹ್ನ 12ರಿಂದ ಸಂಜೆ 7ರವ​ರೆ​ಗೆ ವೈದ್ಯ ಡಾ

ಜಿಬ್ನಸ್‌ ಎಕ್ಕಾ ಎಂಬಾ​ತ 101 ಮಹಿಳೆಯರಿಗೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಿ​ದ್ದಾ​ನೆ ಎಂದು ಹೇಳ​ಲಾ​ಗಿತ್ತು. ಈ ಬಗ್ಗೆ ಸಾರ್ವ​ಜ​ನಿ​ಕ​ರಿಂದ ದೂರು​ಗಳು ಕೂಡ ಬಂದಿ​ದ್ದ​ವು.

ಈಗ ಈ ಬಗ್ಗೆ ಸರ್ಕಾರ ವೈದ್ಯ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಶೋಕಾಸ್‌ ನೋಟಿಸ್‌ ನೀಡಿದೆ.

ಆದರೆ ಇದಕ್ಕೆ ಸ್ಪಷ್ಟನೆ ನೀಡಿ​ರುವ ವೈದ್ಯ, ‘ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಾಯುತ್ತಿದ್ದರು ಅವರೆಲ್ಲರೂ ಬಸ್‌ ಸಂಪರ್ಕಗಳಿಲ್ಲದ ದೂರದ ಊರುಗಳಿಂದ ಬಂದಿದ್ದರು. ಹಾಗಾಗಿ ಎಲ್ಲರಿಗೂ ಸರ್ಜರಿ ಮಾಡಲಾಯಿತು’ ಎಂದಿ​ದ್ದಾ​ನೆ.

2014ರಲ್ಲಿ ಬಿಲಾ​ಸ್‌​ಪು​ರ​ದಲ್ಲಿ ಟ್ಯುಬೆ​ಕ್ಟ​ಮಿಗೆ ಒಳ​ಗಾದ 83 ಮಹಿ​ಳೆ​ಯ​ರು ಅಸ್ವ​ಸ್ಥ​ಗೊಂಡು 13 ಮಂದಿ ಸಾವ​ನ್ನ​ಪ್ಪಿ​ದ್ದ​ರು.

Follow Us:
Download App:
  • android
  • ios