350 ವರ್ಷದ ಬಳಿಕ ಅಫ್ಜಲ್ ಖಾನ್ ಹತ್ಯೆಗೆ ಬಳಸಿದ ಛತ್ರಪತಿ ಶಿವಾಜಿ ವ್ಯಾಘ್ರ ನಖ ಮರಳಿ ಭಾರತಕ್ಕೆ!
ಛತ್ರಪತಿ ಶಿವಾಜಿ 350ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್ ನೀಡಲು ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ಮುಂದಾಗಿದೆ. ಬರೋಬ್ಬರಿ 350 ವರ್ಷಗಳ ಬಳಿಕ ಮೋಸಗಾರ, ದಾಳಿಕೋರ ಅಫ್ಜಲ್ ಖಾನ್ ಹತ್ಯೆಗೆ ಶಿವಾಜಿ ಮಹಾರಾಜ ಬಳಸಿದ್ದ ವ್ಯಾಘ್ರ ನಖ ಇದೀಗ ಮರಳಿ ಭಾರತಕ್ಕೆ ಬರುತ್ತಿದೆ.
ಮುಂಬೈ(ಅ.02) ಮೋಸಗಾರ, ದಾಳಿಕೋರ, ರಾಕ್ಷಿಸಿ ಮನೋಭಾವದ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಹತ್ಯೆಗೆ ಛತ್ರಪತಿ ಶಿವಾಜಿ ಮಹಾರಾಜ ಬಳಸಿದ್ದ ವ್ಯಾಘ್ರ ನಖ ಮರಳಿ ಭಾರತಕ್ಕೆ ತರಲಾಗುತ್ತಿದೆ. ಸಂದ್ಯ ಬ್ರಿಟನ್ ವಸ್ತುಸಂಗ್ರಹಾಲಯದಲ್ಲಿರುವ ಈ ವ್ಯಾಘ್ನ ನಖವನ್ನು ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ಪ್ರಯತ್ನ ಫಲವಾಗಿ ಇದೀಗ ಮರಳಿ ಶಿವಾಜಿ ಆಳಿದ ನೆಲಕ್ಕೆ ಮರಳುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕದ ಪ್ರಯುಕ್ತ ಈ ವ್ಯಾಘ್ರ ನಖ ಮರಳಿ ಭಾರತಕ್ಕೆ ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಕರ್ನಾಟಕದ ಬಿಜಾಪುರದ ಆದಿಲ್‌ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಮರಾಠಾ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರು 1659ರಲ್ಲಿ ಬಳಸಿದ ‘ವಾಘ್ ನಖ್’ (ಹುಲಿ ಪಂಜ) ಆಯುಧವನ್ನು ಬ್ರಿಟನ್‌ನಿಂದ ಮಹಾರಾಷ್ಟ್ರಕ್ಕೆ ನವೆಂಬರ್‌ನಲ್ಲಿ ಕರೆತರಲು ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂಟಿವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದು, ಆಯುಧವನ್ನು ವಾಪಸ್ ಮಹಾರಾಷ್ಟ್ರಕ್ಕೆ ಕರೆತರುವ ಕುರಿತು ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಈ ಅದ್ಭುತ ಕೋಟೆಯ ಬಗ್ಗೆ ನೀವು ತಿಳಿಯಲೇಬೇಕು!
ಬ್ರಿಟಿಷ್ ಆಳ್ಬಿಕೆಯ ಕಾಲದಲ್ಲಿ ವಾಘ್ ನಖ್ ಅನ್ನು ಬ್ರಿಟನ್‌ಗೆ ಕೊಂಡೊಯ್ಯಲಾಗಿತ್ತು. ಆದರೆ ಈಗ ಭಾರತ ಹಾಗೂ ಮಹಾರಾಷ್ಟ್ರ ಸರ್ಕಾರದ ಯತ್ನದ ಫಲವಾಗಿ ಮತ್ತೆ ಶಿವಾಜಿ ನಾಡಿಗೆ ವ್ಯಾಘ್ರ ನಖ ಮರಳುತ್ತಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದ ಹುಲಿ ಪಂಜದ ಆಯುಧವನ್ನು ಮರಳಿ ತರಲಾಗುತ್ತಿದೆ ಎಂಬುದು ವಿಶೇಷ. ಅಲ್ಲದೆ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನ ಎಂದು ಮುಂಗಂಟಿವಾರ್ ಹೇಳಿದ್ದಾರೆ.
‘1659ರಲ್ಲಿ ಅಫ್ಜಲ್ ಖಾನ್ ಶಿವಾಜಿ ಮಹಾರಾಜರ ಬೆನ್ನಿಗೆ (ಸಭೆಯ ಸಮಯದಲ್ಲಿ) ಇರಿದಾಗ, ಶಿವಾಜಿ ಮಹಾರಾಜ್ ಕ್ರೂರ, ರಾಕ್ಷಸಿ ಮನೋಭಾವದ ಅಫ್ಜಲ್ ಖಾನ್ ಅನ್ನು ಕೊಲ್ಲಲು ''ವಾಘ್ ನಖ್'' ಅನ್ನು ಬಳಸಿದ್ದರು’ ಎಂದು ಅವರು ತಿಳಿಸಿದ್ದಾರೆ. ವಾಘ್ ನಖ್ ಅನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಕಾಶಿಗೆ ಹೋದವರು ರಾಮೇಶ್ವರಂಗೆ ಹೋಗೋದು ಯಾಕೆ?; ಇಲ್ಲಿನ ಕಲಾಂ ಸ್ಮಾರಕ ಹೇಗಿದೆ ಗೊತ್ತಾ?