ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಅವರು ಭೋನ್ಸ್ಲೆ ಮರಾಠ ಕುಲದಲ್ಲಿ 1630 ಫೆಬ್ರವರಿ 19 ರಂದು ಇಂದಿನ ಮಹಾರಾಷ್ಟ್ರದಲ್ಲಿ ಶಹಾಜಿ ಮತ್ತು ಜಿಜಾಬಾಯಿ ದಂಪತಿಗೆ ಜನಿಸಿದರು.

ಅವರ ತಂದೆ ಡೆಕ್ಕನ್ ಸುಲ್ತಾನರಿಗೆ ಸೇವೆ ಸಲ್ಲಿಸಿದ ಮರಾಠಾ ಜನರಲ್. ಶಿವಾಜಿಯನ್ನು ಮೊದಲಬಾರಿಗೆ ಔಪಚಾರಿಕವಾಗಿ 1674 ರ ಜೂನ್ 6 ರಂದು ರಾಯಗಡ್‌ನಲ್ಲಿ ಸಾಮ್ರಾಜ್ಯದ ಛತ್ರಪತಿ (ಚಕ್ರವರ್ತಿ) ಎಂದು, ಎರಡನೇ ಬಾರಿಗೆ 1674 ಸೆಪ್ಟೆಂಬರ್ 24 ರಂದು ಪಟ್ಟಾಭಿಷೇಕ ಮಾಡಲಾಯಿತು. 

ಶಿವಾಜಿ ಪಟ್ಟಾಭಿಷೇಕ:

ಇದು ಮರಾಠಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ಏಕೆಂದರೆ ಇದು ಭಾರತದಲ್ಲಿ ಹಿಂದಾವಿ ಸ್ವರಾಜ್ಯದ ಆರಂಭವನ್ನೂ ಸೂಚಿಸಿತು. ಈ ದಿನವೇ ಶಿವಾಜಿಗೆ ಇಂಗ್ಲಿಷ್‌ನಲ್ಲಿ ‘ಒಂದು ಯುಗದ ಸ್ಥಾಪಕ’ ಮತ್ತು ‘ಛತ್ರಪತಿ’ (ಪರಮಾಧಿಕಾರ ಸಾರ್ವಭೌಮ) ಎಂಬ ಅರ್ಥವನ್ನು ಹೊಂದಿರುವ ‘ಶಕಕಾರ್ತಾ’ ಎಂಬ ಬಿರುದನ್ನು ನೀಡಲಾಯಿತು. ಅವರು ತಮ್ಮ ಪಟ್ಟಾಭಿಷೇಕ ಸಮಾರಂಭದಲ್ಲಿ ಹೈಂದವ ಧಾರ್ಮೋದ್ಧಾರಕ (ಹಿಂದೂ ನಂಬಿಕೆಯ ರಕ್ಷಕ) ಎಂಬ ಬಿರುದನ್ನು ಪಡೆದರು.

ಜುಲೈ 16ರ ಒಳಗೆ 1 ಲಕ್ಷ ಗಿಡ ನೆಡಲಿದ್ದಾರೆ ಉತ್ತರಾಖಂಡ್ ಪೊಲೀಸರು...

ಪ್ರತಿ ವರ್ಷ ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ರಾಯಗಡ್ನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ, ಅಲ್ಲಿ ಜನರು ರಾಯ್ಗಡ್ ಕೋಟೆಯಲ್ಲಿ ಶಿವಾಜಿಗೆ ಪಟ್ಟಾಭಿಷೇಕ ಸಮಾರಂಭವನ್ನು ಆಯೋಜಿಸುತ್ತಾರೆ. ಶಿವಾಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. 

ಶಿವಾಜಿ ಕುರಿತು ನೀವರಿಯದ ವಿಚಾರಗಳು: 

 • ಹಲವಾರು ನಂಬಿಕೆಗಳು ಮತ್ತು ವೃತ್ತಾಂತಗಳ ಪ್ರಕಾರ, ಶಿವಾಜಿಗೆ ಶಿವನ ಹೆಸರನ್ನು ಇಡಲಾಯಿತು. ಆದರೂ ವಿದ್ವಾಂಸರು ಇದನ್ನು ಶಿವಾಯಿ ಎಂದು ಕರೆಯುತ್ತಾರೆ.
 • ಶಿವಾಜಿಯನ್ನು ಔಚಾರಿಕವಾಗಿ 1674 ರಲ್ಲಿ ರಾಯಗಡದಲ್ಲಿ ತನ್ನ ಕ್ಷೇತ್ರದ ಚಕ್ರವರ್ತಿ ಎಂದು ಪಟ್ಟಾಭಿಷೇಕ ಮಾಡಲಾಯಿತು.
 • ಅವರು ನುರಿತ ಕಮಾಂಡರ್ ಮತ್ತು ಧೀರ ಯೋಧರಾಗಿದ್ದರು. ಅವರು ಗೆರಿಲ್ಲಾ ಶೈಲಿಯ ಯುದ್ಧದಲ್ಲಿ ಅತ್ಯಂತ ನುರಿತವರಾಗಿದ್ದರು ಮತ್ತು ರಹಸ್ಯವಾದ ಯುದ್ಧ ಕಾರ್ಯಾಚರಣೆಗಳನ್ನು ಯೋಜಿಸಿದ್ದರು.
 • ಅವರ ರಹಸ್ಯ ಯುದ್ಧದ ಕಲೆಗಾಗಿ ಅವರನ್ನು ಹೆಚ್ಚಾಗಿ ‘ಪರ್ವತ ಇಲಿ’ ಎಂದು ಕರೆಯಲಾಗುತ್ತಿತ್ತು.
 • ಆದಾಗ್ಯೂ, ಅವರು ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಧಾರ್ಮಿಕ ಗ್ರಂಥಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರೂ, ಅವರು ಯಾವುದೇ ಔಪಚಾರಿಕ ಶಾಲಾ ಶಿಕ್ಷಣವನ್ನು ಹೊಂದಿರಲಿಲ್ಲ.
 • ಹಿಂದೂ ರಾಜಕೀಯ ಮತ್ತು ನ್ಯಾಯಾಲಯದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವಲ್ಲಿಯೂ ಅವರು ಹೆಸರುವಾಸಿಯಾಗಿದ್ದಾರೆ. ವ್ಯಾಪಕವಾಗಿ ಬಳಸಲಾಗುವ ಪರ್ಷಿಯನ್ ಭಾಷೆಯ ಬದಲು ಆಡಳಿತ ಪ್ರಕ್ರಿಯೆಗಳಲ್ಲಿ ಮರಾಠಿ ಮತ್ತು ಸಂಸ್ಕೃತ ಭಾಷೆಯ ಬಳಕೆಯನ್ನು ಅವರು ಉತ್ತೇಜಿಸಿದರು.
 • ಅವರು ಎಂಟು ಮಂತ್ರಿಗಳ ಪರಿಷತ್ತು ಅಥವಾ ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಶಿವಾಜಿಗೆ ಸಲಹೆ ನೀಡುವ ಆಡಳಿತ ಮತ್ತು ಸಲಹಾ ಮಂಡಳಿಯನ್ನು ರಚಿಸಿದರು.
 • ತನ್ನದೇ ಆದ ನೌಕಾಪಡೆ ನಿರ್ಮಿಸಿದ ಮಧ್ಯಕಾಲೀನ ಭಾರತದ ಮೊದಲ ಸ್ಥಳೀಯ ಆಡಳಿತಗಾರ ಮತ್ತು 1665 ರಲ್ಲಿ ತನ್ನ ಮೊದಲ ಪೂರ್ಣ ಪ್ರಮಾಣದ ನೌಕಾ ದಂಡಯಾತ್ರೆಯನ್ನು ಮುನ್ನಡೆಸಿದ.
 • ಅವರು ಜಾತ್ಯತೀತ ರಾಜರಾಗಿದ್ದರು ಮತ್ತು ಅವರ ಸೈನ್ಯ ಮತ್ತು ಕಚೇರಿಯಲ್ಲಿ ಅನೇಕ ಮುಸ್ಲಿಮರನ್ನು ಹೊಂದಿದ್ದರು. ಇಬ್ರಾಹಿಂ ಖಾನ್ ಮತ್ತು ದೌಲತ್ ಖಾನ್ ಅವರು ನೌಕಾಪಡೆಯ ಪ್ರಮುಖರು ಮತ್ತು ಸಿದ್ದಿ ಇಬ್ರಾಹಿಂ ಫಿರಂಗಿದಳದ ಮುಖ್ಯಸ್ಥರಾಗಿದ್ದರು.
 • ಅವರು ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದರು. ಮಹಿಳೆಯರ ಅಪಮಾನವನ್ನು ನಿಷೇಧಿಸುವ ನಿಯಮಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರ ಮೇಲಿನ ಯಾವುದೇ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು.
 • ಶಿವಾಜಿ 1680 ರಲ್ಲಿ ಜ್ವರ ಮತ್ತು ಭೇದಿ ರೋಗದಿಂದ ಬಳಲುತ್ತಿದ್ದರು ಮತ್ತು ಏಪ್ರಿಲ್ 3 ರಂದು ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾದರು.