ಚೆನ್ನೈ(ಏ.21): ಜೀವನದುದ್ದಕ್ಕೂ ಬಡರೋಗಿಗಳ ಪರವಾಗಿ ಸೇವೆ ಸಲ್ಲಿಸಿದ್ದ ವೈದ್ಯರೊಬ್ಬರು, ಕೊರೋನಾ ಸೋಂಕಿಗೆ ಬಲಿಯಾಗಿ ಕಲ್ಲು ತೂರಾಟದ ನಡುವೆಯೇ ಅಂತ್ಯಸಂಸ್ಕಾರಕ್ಕೆ ಒಳಗಾಗಬೇಕಾಗಿ ಬಂದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಯ ವೈದ್ಯ ಸೈಮನ್‌ (55), ಸೋಮವಾರ ಸೋಂಕಿಗೆ ಬಲಿಯಾಗಿದ್ದರು. ಈ ವೇಳೆ ಕುಟುಂಬ ಸದಸ್ಯರಾರೂ ಜೊತೆಯಲ್ಲಿ ಇರದ ಕಾರಣ, ಅವರ ಇಬ್ಬರು ಸಹದ್ಯೋಗಿ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳೇ ಶವವನ್ನು ಕೊಯಮತ್ತೂರಿನ ಅಣ್ಣಾನಗರ್‌ ವೆಲ್ಲಯಂಗಾಡ್‌ನಲ್ಲಿ ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ಯಲಾಗಿತ್ತು.

ಗರ್ಭಿಣಿ ಮಗಳನ್ನು ನೋಡಲು ಈಜಿ ಬಂದ ತಂದೆ ನೀರುಪಾಲು..!

ಈ ವೇಳೆ ಸುತ್ತಮುತ್ತಲ ಪ್ರದೇಶ 300ಕ್ಕೂ ಹೆಚ್ಚು ಮಂದಿ ಕೊರೋನಾ ಪೀಡಿತರ ಅಂತ್ಯಸಂಸ್ಕಾರ ಮಾಡಬಾರದು ಎಂದು ಘೋಷಣೆ ಕೂಗಿ ಆ್ಯಂಬುಲೆನ್ಸ್‌ ಮತ್ತು ವೈದ್ಯರ ಮೇಲೆ ಕಲ್ಲು ಎಸೆದು, ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ್ದಾರೆ. ಕೊನೆಗೆ ಪೊಲೀಸ್‌ ಬಂದೋಬಸ್‌್ತನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.