Asianet Suvarna News Asianet Suvarna News

ತನ್ನ ಶ್ರದ್ಧಾಂಜಲಿ ಪತ್ರ ತಾನೇ ಬರೆದ ಮಹೇಶ್: ಕಣ್ಣೀರು ತರಿಸಿದ ಪತ್ರ!

ಕಣ್ಣೀರು ತರಿಸಿದ ವ್ಯಕ್ತಿಯ ಸ್ವಯಂ ನಿಧನ ವಾರ್ತೆ ಪತ್ರ| ಎಜ್ಜಿ ಕೆ. ಉಮಾಮಹೇಶ್‌ ಬರೆದ ನಿಧನ ಪತ್ರ ಭಾರೀ ವೈರಲ್‌

Chennai man self-written obituaries go viral Read emotional posts pod
Author
Bangalore, First Published Oct 19, 2020, 4:42 PM IST

ಚೆನ್ನೈ(ಅ.19): ಸಾಮಾನ್ಯವಾಗಿ ಅಗಲಿದ ವ್ಯಕ್ತಿಯ ಫೋಟೋವನ್ನು ಕುಟುಂಬಸ್ಥರು ಅಥವಾ ಸ್ನೇಹಿತರು ಪತ್ರಿಕೆ ಮತ್ತು ಇನ್ನಿತರ ಭಿತ್ತಿಪತ್ರಗಳಲ್ಲಿ ಹಾಕಿಸಿ ಶ್ರದ್ಧಾಂಜಲಿ ಅಥವಾ ಗೌರವ ಸಲ್ಲಿಸಲಾಗುತ್ತದೆ. ಆದರೆ, ಇತ್ತೀಚೆಗಷ್ಟೇ ನಿಧನ ಹೊಂದಿದ ವ್ಯಕ್ತಿಯೊಬ್ಬರು ಸಾವಿಗೂ ಮುನ್ನ ತಾವೇ ಬರೆದಿಟ್ಟಿದ್ದ ತಮ್ಮ ನಿಧನ ವಾರ್ತೆಯ ಪತ್ರ ನೆಟ್ಟಿಗರನ್ನು ಕಣ್ಣೀರು ಮತ್ತು ಭಾವನಾತ್ಮಕತೆಯಲ್ಲಿ ತೇಲಿಸಿರುವುದು ಮಾತ್ರ ಸುಳ್ಳಲ್ಲ.

ತಮಿಳುನಾಡು ಮೂಲದ ಎಜ್ಜಿ ಕೆ. ಉಮಾಮಹೇಶ್‌(72) ಎಂಬುವರು ಅ. 10ರಂದು ವಿಧಿವಶರಾಗಿದ್ದು, ತಮ್ಮ ಇಹಲೋಕದ ಪಯಣ ಮುಗಿಸುವ ಮುನ್ನವೇ ತಮ್ಮ ನಿಧನ ವಾರ್ತೆಯನ್ನು ಖುದ್ದು ತಾವೇ ಬರೆದು, ತಾವು ಸತ್ತ ಬಳಿಕ ಏನೆಲ್ಲಾ ಮಾಡಬೇಕು ಎಂಬುದರ ವಿವರಣೆ ನೀಡಿದ್ದಾರೆ.

I regret to inform you that my vintage vehicle that was being restored, in spite of the best mechanics in India with...

Posted by Ejji K. Umamahesh on Thursday, 15 October 2020

Chennai man self-written obituaries go viral Read emotional posts pod

ಅದರಲ್ಲಿ ತಮ್ಮ ಜೀವನ ಅನುಭವವನ್ನು ಹಂಚಿಕೊಂಡಿರುವ ಅವರು, ನನ್ನ ಸಮಯ ಮುಗಿದಿದೆ. ನೀವೆಲ್ಲರೂ ನಿಮ್ಮ ಜೀವನವನ್ನು ಸರಿಯಾಗಿ ಮತ್ತು ಸಂತೋಷದಿಂದ ಕಳೆಯಿರಿ. ಅಲ್ಲದೆ, ತಮ್ಮ ದೇಹದಲ್ಲಿನ ಉಪಯುಕ್ತ ಭಾಗಗಳು ಮತ್ತು ಮೃತದೇಹ ದಾನ ಮಾಡುವಂತೆ ಕುಟುಂಬಸ್ಥರಿಗೆ ಕೋರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಮಾ ಮಹೇಶ್‌ ಅವರ ಶವವನ್ನು ಶರೀರ ರಚನಾಶಾಸ್ತ್ರ ಸಂಸ್ಥೆಗೆ ಸಂಶೋಧನೆಗಾಗಿ ದಾನ ಮಾಡಲಾಗಿದೆ ಎಂದಿದ್ದಾರೆ ಕುಟುಂಬಸ್ಥರು. ಈ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

Follow Us:
Download App:
  • android
  • ios