ನವದೆಹಲಿ(ಡಿ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಜಾಮಾ ಮಸೀದಿ ಭಾರೀ ಹೈಡ್ರಾಮಾಗಳಿಗೆ ಸಾಕ್ಷಿಯಾಗಿದೆ.

ನಿರ್ಬಂಧದ ನಡುವೆಯೂ ಜಂಥರ್ ಮಂಥರ್'ನಿಂದ ಜಾಮಾ ಮಸೀದಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಅವರನ್ನು ಬಂಧಿಸಿದ್ದರು.

ಈ ಅಧಿಕಾರಿ ಹಾಡು ಕೇಳಿ ಧರಣಿ ಕೈಬಿಟ್ಟ ಪ್ರತಿಭಟನಾಕಾರರು: ಯಾವ ಹಾಡು?

ಆದರೆ ಚಂದ್ರಶೇಖರ್ ಆಜಾದ್ ಬಂಧನದಿಂದ ಪಾರಾಗಿದ್ದು, ಆಜಾದ್ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಪ್ರತಿಭಟನಾ ಮೆರವಣಿಗೆಯನ್ನು ತಡೆದಿದ್ದ ಪೊಲೀಸರು, ಚಂದ್ರಶೇಖರ್ ಆಜಾದ್ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವಲ್ಲಿ ಆಜಾದ್ ಯಶಸ್ವಿಯಾಗಿದ್ದಾರೆ.

"

ಜಾಮಾ ಮಸೀದಿ ಬಳಿ ಜಮಾಯಿಸಿದ ಸಹಸ್ರಾರು ಸಂಖ್ಯೆಯ ಪ್ರತಿಭಟನಾಕಾರರು, ಇನ್‌ಕ್ವಿಲಾಬ್, ಜಿಂದಾಬಾದ್, ಸಾರೆ ಜಹಾನ್ ಸೆ ಅಚ್ಚಾ ಮತ್ತಿತರ ಘೋಷಣೆಗಳನ್ನು ಕೂಗಿದರು. ಕೆಲ ಪ್ರತಿಭಟನಾಕಾರರು ಬಾಬಾ ಸಾಹೇಬ್ ಅಂಬೇಡ್ಕರ್, ಕಾನ್ಷಿರಾಮ್, ಮತ್ತು ಭಗತ್ ಸಿಂಗ್ ಭಿತ್ತಿಪತ್ರ ಹಿಡಿದಿದ್ದು ವಿಶೇಷವಾಗಿತ್ತು.

ಮಂಗಳೂರಿನಲ್ಲಿ ಆರದ ಪೌರತ್ವ ಕಾಯ್ದೆಯ ಕಿಚ್ಚು: ಶಾಲಾ-ಕಾಲೇಜುಗಳಿಗೆ ರಜೆ

ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ  ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಗಳು ಶರ್ಮಿಷ್ಠಾ ಮುಖರ್ಜಿ ಸೇರಿದಂತೆ 50 ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.