Asianet Suvarna News Asianet Suvarna News

ಕುಂಭಮೇಳದಿಂದ ಕೊರೋನಾ ಸೋಂಕು: ಕೇಂದ್ರ ಎಚ್ಚರಿಕೆ!

ಕುಂಭ​ಮೇ​ಳ​ದಿಂದ ಸೋಂಕು ಹೆಚ್ಚುವ ಸಾಧ್ಯತೆ: ಕೇಂದ್ರದ ಎಚ್ಚರಿಕೆ| ಸೋಂಕು ವ್ಯಾಪ​ಕ​ವಾ​ಗ​ದಂತೆ ಅಗತ್ಯ ಕ್ರಮ​ಗ​ಳನ್ನು ಕೈಗೊ​ಳ್ಳಿ| ಐಸಿ​ಎಂಆರ್‌ ಮಾರ್ಗ​ಸೂ​ಚಿ​ಯಂತೆ ಕೋವಿಡ್‌ ಪರೀಕ್ಷೆ ನಡೆ​ಸಿ| ಉತ್ತರಾಖಂಡ್‌ ಸರ್ಕಾ​ರಕ್ಕೆ ಕೇಂದ್ರ ಸರ್ಕಾರ ಎಚ್ಚ​ರಿ​ಕೆ

Centre warns of upsurge following Kumbh Mela at Haridwar pod
Author
Bangalore, First Published Mar 22, 2021, 7:33 AM IST

ನವ​ದೆ​ಹ​ಲಿ(ಮಾ.22): ದೇಶಾ​ದ್ಯಂತ ಮತ್ತೆ ಕೊರೋನಾ ಪ್ರಕ​ರ​ಣ​ಗಳ ಸಂಖ್ಯೆ ಗಣ​ನೀಯ ಪ್ರಮಾ​ಣ​ದಲ್ಲಿ ಏರಿ​ಕೆ​ಯಾ​ಗು​ತ್ತಿ​ರುವ ನಡು​ವೆಯೇ ಉತ್ತ​ರಾ​ಖಂಡ್‌ ಸರ್ಕಾರ ಕುಂಭ​ಮೇ​ಳಕ್ಕೆ ಸಿದ್ಧತೆ ಮಾಡಿ​ಕೊ​ಳ್ಳು​ತ್ತಿದೆ. ಈ ಹಿನ್ನೆ​ಲೆ​ಯಲ್ಲಿ ಕುಂಭ ಮೇಳ​ದಲ್ಲಿ ಕೊರೋನಾ ಸೋಂಕು ಹಬ್ಬು​ವಿ​ಕೆ ನಿಯಂತ್ರ​ಣಕ್ಕೆ ಕಠಿಣ ಕ್ರಮ ಕೈಗೊ​ಳ್ಳು​ವಂತೆ ಕೇಂದ್ರ ಸರ್ಕಾರ ಉತ್ತ​ರಾ​ಖಂಡ್‌ ಸರ್ಕಾ​ರಕ್ಕೆ ಎಚ್ಚ​ರಿಕೆ ರೂಪದ ಪತ್ರ​ ಬರೆ​ದಿದೆ. ಅಲ್ಲದೆ ಐಸಿ​ಎಂಆರ್‌ ಮಾರ್ಗ​ಸೂ​ಚಿ​ ಅನ್ವಯ ಸ್ಥಳೀ​ಯರು ಮತ್ತು ಇತರ ಪ್ರದೇ​ಶ​ಗ​ಳಿಂದ ಬರುವ ಭಕ್ತಾ​ದಿ​ಗಳ ಕೊರೋನಾ ಪರೀ​ಕ್ಷೆಯ ವ್ಯವ​ಸ್ಥೆ​ಯನ್ನು ಹೆಚ್ಚು​ಸು​ವಂತೆ ನಿರ್ದೇ​ಶಿ​ಸ​ಲಾ​ಗಿದೆ.

ಏ.1ರಿಂದ ಹರಿ​ದ್ವಾ​ರ​ದ​ಲ್ಲಿ ಆರಂಭ​ವಾ​ಗ​ಲಿ​ರುವ ಕುಂಭಮೇಳ​ದಲ್ಲಿ ದೇಶದ ವಿವಿಧ ಭಾಗ​ಗ​ಳಿಂದ ಭಕ್ತ ಸಾಗ​ರವೇ ಹರಿ​ದು​ಬ​ರ​ಲಿದೆ. ಈ ಹಿನ್ನೆಲೆ​ಯಲ್ಲಿ ರಾಜ್ಯದ ಕುಂಭ​ಮೇ​ಳ​ದಲ್ಲಿ ಜನ ಸಾಮಾ​ನ್ಯರ ಆರೋಗ್ಯ ದೃಷ್ಟಿಯಿಂದ ಕೈಗೊ​ಳ್ಳ​ಲಾದ ವಸ್ತು​ಸ್ಥಿತಿಯನ್ನು ಅರಿ​ಯಲು ಕೇಂದ್ರ ಸರ್ಕಾರ, ಉತ್ತ​ರಾ​ಖಂಡ್‌ಗೆ ಉನ್ನತ ಹಂತದ ತಂಡ​ವೊಂದನ್ನು ರವಾ​ನಿ​ಸಿತ್ತು. ಈ ತಂಡವು ಕುಂಭ​ಮೇ​ಳದ ಬಳಿಕ ಸ್ಥಳೀ​ಯ​ರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿ​ಸುವ ಸಾಧ್ಯ​ತೆ​ಯಿದೆ. ಅಲ್ಲದೆ ಈಗಾ​ಗಲೇ ರಾಜ್ಯ​ದಲ್ಲಿ ಪ್ರತೀ ದಿನವೂ 10-20 ಯಾತ್ರಾ​ರ್ಥಿ​ಗಳು ಮತ್ತು 10-20 ಸ್ಥಳೀ​ಯರು ಕೊರೋನಾ ವೈರ​ಸ್‌ಗೆ ತುತ್ತಾ​ಗು​ತ್ತಿ​ದ್ದಾರೆ ಎಂದು ತನ್ನ ವರ​ದಿ​ಯಲ್ಲಿ ಉಲ್ಲೇಖಿ​ಸಿದೆ.

ಈ ಹಿನ್ನೆ​ಲೆ​ಯಲ್ಲಿ ಕುಂಭಮೇಳದ ವೇಳೆ ಕೇವಲ 50 ಸಾವಿರ ಮಂದಿಗೆ ರಾರ‍ಯಪಿಡ್‌ ಆ್ಯಂಟಿ​ಜೆನ್‌ ಟೆಸ್ಟ್‌ ಮತ್ತು 5 ಸಾವಿರ ಮಂದಿಯ ಆರ್‌​ಟಿ​ಪಿ​ಸಿ​ಆರ್‌ ಪರೀಕ್ಷೆಯಿಂದ ಏನೂ ಪ್ರಯೋ​ಜ​ನ​ವಿಲ್ಲ. ಇದಕ್ಕೆ ಬದ​ಲಾಗಿ ಐಸಿ​ಎಂಆರ್‌ ಮಾರ್ಗ​ಸೂ​ಚಿ​ಯಂತೆ ಸ್ಥಳೀ​ಯರು ಮತ್ತು ಯಾತ್ರಾ​ರ್ಥಿ​ಗ​ಳಿಗೆ ಪರೀ​ಕ್ಷೆ​ಯನ್ನು ಹೆಚ್ಚಿ​ಸ​ಬೇಕು ಎಂದು ಉತ್ತ​ರಾ​ಖಂಡ್‌ ಸರ್ಕಾ​ರಕ್ಕೆ ಸೂಚಿ​ಸಿದೆ.

Follow Us:
Download App:
  • android
  • ios