Asianet Suvarna News Asianet Suvarna News

ಭಾರತದಲ್ಲೂ ಲಸಿಕೆ ಬೆರಕೆ? ಕೋವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆಗೆ ಒಪ್ಪಿಗೆ?

* ಕೋವಿಶೀಲ್ಡ್‌, ಸ್ಪುಟ್ನಿಕ್‌ ಲಸಿಕೆ ಮಿಶ್ರಣಕ್ಕೆ ಶೀಘ್ರ ಅನುಮೋದನೆ ಸಾಧ್ಯತೆ

* ಭಾರತದಲ್ಲೂ ಲಸಿಕೆ ಮಿಶ್ರಣಕ್ಕೆ ಅನುಮತಿ?

Centre May allow mixing of Sputnik and covishield shots pod
Author
Bangalore, First Published Aug 4, 2021, 12:49 PM IST
  • Facebook
  • Twitter
  • Whatsapp

ನವದೆಹಲಿ(ಆ.04): ದೇಶದಲ್ಲಿ ಕೋವಿಡ್‌ ಲಸಿಕೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಎರಡು ಬೇರೆ ಬೇರೆ ಕಂಪನಿಗಳ ಲಸಿಕೆಗಳನ್ನು ನೀಡುವ ಯೋಜನೆ ಜಾರಿಗೆ, ಕೋವಿಡ್‌ ಕುರಿತ ತಾಂತ್ರಿಕ ಸಲಹಾ ಸಮಿತಿ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಈಗಾಗಲೇ ಹಲವಾರು ದೇಶಗಳಲ್ಲಿ ಈ ರೀತಿಯ ಯೋಜನೆಯ ಕುರಿತು ಅಧ್ಯಯನ ನಡೆಸಲಾಗಿದೆ. ಇಂಥ ಅಧ್ಯಯನದ ವೇಳೆ ಲಸಿಕೆ ಮಿಶ್ರಣದಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ, ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯಗಳು ಕೂಡಾ ಉತ್ಪಾದನೆಯಾಗಿರುವುದು ಕಂಡುಬಂದಿದೆ.

ಇದೇ ಸಂಶೋಧನೆಗಳ ಆಧಾರದಲ್ಲಿ ಭಾರತದಲ್ಲೂ ಕೋವಿಶೀಲ್ಡ್‌ ಮತ್ತು ಸ್ಪುಟ್ನಿಕ್‌ ಲಸಿಕೆಗಳನ್ನು ನೀಡುವ ಬಗ್ಗೆ ಶೀಘ್ರವೇ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಯೋಜನೆಗೆ ಅನುಮತಿ ಸಿಕ್ಕರೆ, ಮೊದಲ ಡೋಸ್‌ ಆಗಿ ಕೋವಿಶೀಲ್ಡ್‌ ಪಡೆದವರು, ಎರಡನೇ ಡೋಸ್‌ ಆಗಿ ಸ್ಪುಟ್ನಿಕ್‌ ಪಡೆದುಕೊಳ್ಳಬಹುದು.

Follow Us:
Download App:
  • android
  • ios