ವಿದೇಶಿ ಪ್ರಯಾಣಿಕರಿಗೆ ಕೋವಿಡ್‌ ನೆಗೆಟಿವ್‌ ಕಡ್ಡಾಯ| ಆಫ್ರಿಕಾ, ಬ್ರೆಜಿಲ್‌ ಸೇರಿ ಇನ್ನಿತರ ರೂಪಾಂತರಿ ವೈರಸ್‌ ತಡೆಗೆ ಈ ಕ್ರಮ

ನವದೆಹಲಿ(ಫೆ.18): ಆಫ್ರಿಕಾ ಮತ್ತು ಬ್ರೆಜಿಲ್‌ನ ರೂಪಾಂತರಿ ಕೊರೋನಾ ವೈರಸ್‌ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಅನ್ವಯಿಸುವ ನೂತನ ಮಾರ್ಗಸೂಚಿಗಳನ್ನು ಭಾರತ ಸರ್ಕಾರ ಪ್ರಕಟಿಸಿದೆ.

ಮಾರ್ಚ್‌ನಿಂದ 2ನೇ ಹಂತದ ಕೊರೋನಾ ಲಸಿಕೆ ವಿತರಣೆ; 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್!

ಬ್ರಿಟನ್‌, ಯೂರೋಪ್‌ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಬರುವವರಿಗೆ ಈ ನಿಯಮ ಅನ್ವಯಿಸಲಿವೆ. ಈ ದೇಶಗಳಿಂದ ಭಾರತಕ್ಕೆ ಬರುವವರು ತಮ್ಮ ಪ್ರಯಾಣಕ್ಕೂ ಮುನ್ನ ಏರ್‌ ಸುವಿಧ ಪೋರ್ಟಲ್‌ನಲ್ಲಿ ತಮಗೆ ಸೋಂಕಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ, 72 ಗಂಟೆ ಮುಂಚಿತವಾಗಿ ಮಾಡಿಸಿದ ಆರ್‌ಟಿಪಿಎಸ್‌ಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಇರುವ ದಾಖಲೆ, ಸಲ್ಲಿಸಬೇಕು.

ಜೊತೆಗೆ ಭಾರತಕ್ಕೆ ಬಂದ ಬಳಿಕವೂ ಕೊರೋನಾ ಪರೀಕ್ಷೆಗೆ ಮಾಡಿಸಿಕೊಳ್ಳಬೇಕು.