ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಲಸಿಕೆಗೆ ಭಾರೀ ದರ ನಿಗದಿ| ಲಸಿಕೆ ದರ ಇಳಿಕೆ ಮಾಡಿ: ಭಾರತ್‌ ಬಯೋಟೆಕ್‌, ಸೀರಂಗೆ ಕೇಂದ್ರ ಸೂಚನೆ!

ನವದೆಹಲಿ(ಏ27): ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಲಸಿಕೆಗೆ ಭಾರೀ ದರ ನಿಗದಿ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳ ದರ ಇಳಿಸುವಂತೆ ತಯಾರಿಕಾ ಕಂಪನಿಗಳಾದ ಸೀರಂ ಇನ್‌ಸ್ಟಿಟ್ಯೂಟ್‌ ಮತ್ತು ಭಾರತ್‌ ಬಯೋಟೆಕ್‌ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಭಾರತ್‌ ಬಯೋಟೆಕ್‌ ತನ್ನ ಕೋವ್ಯಾಕ್ಸಿನ್‌ ಲಸಿಕೆಯ ಒಂದು ಡೋಸ್‌ನ ದರ ರಾಜ್ಯ ಸರ್ಕಾರಗಳಿಗೆ 600 ರು. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1200 ರು. ನಿಗದಿ ಮಾಡಿದೆ.

ಅದೇ ರೀತಿ ಸೀರಂ ಇನ್‌ಸ್ಟಿಟ್ಯೂಟ್‌ ಕೋವಿಶೀಲ್ಡ್‌ ಲಸಿಕೆಯ ಒಂದು ಡೋಸ್‌ನ ದರ ರಾಜ್ಯ ಸರ್ಕಾರಗಳಿಗೆ 400 ರು. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರು. ನಿಗದಿ ಮಾಡಿದೆ. ಆದರೆ, ಕೇಂದಕ್ಕೆ 150 ರು.ನಲ್ಲೇ ಲಸಿಕೆ ಪೂರೈಸುವುದಾಗಿ ಈ ಎರಡು ಕಂಪನಿಗಳು ಘೋಷಿಸಿವೆ.