Asianet Suvarna News Asianet Suvarna News

ದಿಲ್ಲಿ Central Vista Avenue ಇನ್ನು ಎರಡು ವಾರಗಳಲ್ಲಿ ಪೂರ್ಣ

  • ದಿಲ್ಲಿ ಸೆಂಟ್ರಲ್‌ ವಿಸ್ತಾ ಅವೆನ್ಯೂ  ಜುಲೈ 18ಕ್ಕೆ ಪೂರ್ಣ
  • ದಿಲ್ಲಿ ಹೃದಯ ಭಾಗದಲ್ಲಿ ಮಹತ್ವಾಕಾಂಕ್ಷಿ ಯೋಜನೆ
  • ಇಂಡಿಯಾ ಗೇಟ್‌ - ವಿಜಯ ಪಥ ಅಂತಿಮ ಹಂತಕ್ಕೆ
Central Vista Avenue  project completed by July 18 gow
Author
Bengaluru, First Published Jul 9, 2022, 7:27 AM IST

ನವದೆಹಲಿ (ಜು.9): 13,500 ಕೋಟಿ ರು. ಮೌಲ್ಯದ ಸೆಂಟ್ರಲ್‌ ವಿಸ್ತಾ ಯೋಜನೆಯ  ಭಾಗವಾದ ಇಂಡಿಯಾ ಗೇಟ್‌ನಿಂದ ವಿಜಯ್‌ ಚೌಕದವರೆಗೆ ನಿರ್ಮಾಣವಾಗುತ್ತಿರುವ ಸೆಂಟ್ರಲ್‌ ವಿಸ್ತಾ ಅವೆನ್ಯೂ ಜೂ.18ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ಸಚಿವ ಹರ್ದೀಪ್‌ ಸಿಂಗ್‌ ಪುರಿ (Union housing and urban affairs minister Hardeep Singh Puri) ಹೇಳಿದ್ದಾರೆ.

ಸೆಂಟ್ರಲ್‌ ವಿಸ್ತಾ ಅವೆನ್ಯೂ ಯೋಜನೆಯ (Central Vista Avenue  project ) ಪುನರ್‌ನಿರ್ಮಾಣ ಕಾರ್ಯ ಬಹುಪಾಲು ಪೂರ್ಣಗೊಂಡಿದೆ. ಎರಡು ಸುರಂಗಗಳಲ್ಲಿ ಮಾತ್ರ ಕೆಲವು ಸಣ್ಣ ಕೆಲಸಗಳು ಬಾಕಿ ಇವೆ. ಹಾಗಾಗಿ ಈ ಯೋಜನೆ ಜು.15ರಿಂದ 18ರೊಳಗೆ ಮುಕ್ತಾಯವಾಗಲಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ.

SHINZO ABE DEATH; ಪ್ರೀತಿಯ ಗೆಳೆಯನನ್ನು ಕಳೆದುಕೊಂಡಿದ್ದೇನೆ, ಮೋದಿ ಭಾವುಕ ಲೇಖನ

ಏನೇನಿರಲಿದೆ?: ಸುಮಾರು 608 ಕೋಟಿ ರು. ವೆಚ್ಚದಲ್ಲಿ ಅವೆನ್ಯೂ ಪುನರ್‌ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಇದು ಪೂರ್ಣಗೊಂಡರೆ ಸೆಂಟ್ರಲ್‌ ವಿಸ್ತಾ ಯೋಜನೆಯಡಿ ಸಾರ್ವಜನಿಕರಿಗೆ ತೆರೆದ ಮೊದಲ ಭಾಗ ಎನಿಸಿಕೊಳ್ಳಲಿದೆ. ಸುಮಾರು 3 ಕಿ.ಮೀ. ಉದ್ದದ ಈ ಯೋಜನೆ ಹಲವು ಕಾಲುವೆಗಳು, ಸುರಂಗ ಪಾದಚಾರಿ ಮಾರ್ಗಗಳು, ಅಗಲವಾದ ಪಾದಚಾರಿ ರಸ್ತೆಗಳು, ಉದ್ಯಾನವನಗಳು, ಪಾರ್ಕಿಂಗ್‌ ಸ್ಥಳಗಳು ನಿರ್ಮಾಣವಾಗಲಿವೆ.

British Education System ಬದಲಾವಣೆಗೆ ಮೋದಿ ಕರೆ

ಸೆಂಟ್ರಲ್‌ ವಿಸ್ತಾದ ಒಟ್ಟು ಯೋಜನೆಯಲ್ಲಿ ಹೊಸ ಸಂಸತ್‌ ಕಟ್ಟಡ, ಪ್ರಧಾನಿ, ಉಪಪ್ರಧಾನಿಗಳ ನಿವಾಸ ಕೂಡಾ ಸೇರಿದ್ದು, ಇವೆಲ್ಲಾ 2024ರ ಲೋಕಸಭಾ ಚುನಾವಣೆಗೆ ಮುನ್ನ ಪೂರ್ಣಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಯುಪಿಯ 6ನೇ Bundelkhand expressway ಜು.16ಕ್ಕೆ ಮೋದಿಯಿಂದ ಲೋಕಾರ್ಪಣೆ

ಕಳೆದ ವರ್ಷ ಫೆಬ್ರವರಿಯಲ್ಲಿ ₹ 608 ಕೋಟಿ ವೆಚ್ಚದ ಯೋಜನೆ ಪ್ರಾರಂಭವಾದಾಗ ವಿಜಯ್ ಚೌಕ್‌ನಿಂದ ಇಂಡಿಯಾ ಗೇಟ್‌ವರೆಗಿನ 3 ಕಿಮೀ ವಿಸ್ತರಣೆಗೆ ಪ್ರವೇಶವನ್ನು ಮುಚ್ಚಲಾಗಿತ್ತು. ಇದರಲ್ಲಿ ನಾಲ್ಕು ಪಾದಚಾರಿ ಅಂಡರ್‌ಪಾಸ್‌ಗಳ ನಿರ್ಮಾಣ, ಎಂಟು ಸೌಕರ್ಯ ಬ್ಲಾಕ್‌ಗಳು, ರಾಜಪಥದಲ್ಲಿ ರಿಲೇ ಕೆಲಸ ಮತ್ತು ಅದರ ಉದ್ದಕ್ಕೂ ಮತ್ತು ಹುಲ್ಲುಹಾಸುಗಳಲ್ಲಿ ಮಾರ್ಗಗಳನ್ನು ನಿರ್ಮಿಸುವುದು, ಕಾಲುವೆಗಳನ್ನು ಸುಧಾರಿಸುವುದು ಮತ್ತು ಅವುಗಳ ಮೇಲೆ 16 ಶಾಶ್ವತ ಸೇತುವೆಗಳನ್ನು ನಿರ್ಮಿಸುವುದು ಒಳಗೊಂಡಿರುತ್ತದೆ. ಇದು ವಿದ್ಯುತ್ ಮತ್ತು ಇತರ ಕೇಬಲ್‌ಗಳಿಗಾಗಿ ಭೂಗತ ಉಪಯುಕ್ತತೆಯ ನಾಳಗಳ ನಿರ್ಮಾಣವನ್ನು ಹೊರತುಪಡಿಸಿದೆ.

 

Follow Us:
Download App:
  • android
  • ios