ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಕಡ್ಡಾಯವಾಗಿದೆ. ಕಡಿಮೆ ಬೆಲೆ ಎಂದು ಯಾವುದೋ ಹೆಲ್ಮೆಟ್ ಇನ್ನು ಬಳಸುವಂತಿಲ್ಲ.

ನವದೆಹಲಿ (ಜು.05) ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿದೆ. ಸವಾರರು ಹಾಗೂ ಹಿಂಬದಿ ಸವಾರರು ಇಬ್ಬರೂ ಹೆಲ್ಮೆಟ್ ಕಡ್ಡಾಯವಾಗಿದೆ. ಇದೀಗ ದ್ವಿಚಕ್ರ ವಾಹನ ಸವಾರರಿಗೆ ಮತ್ತೊಂದು ನಿಯಮ ಜಾರಿಗೊಳಿಸಲಾಗಿದೆ. ದ್ವಿಚಕ್ರ ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ದೇಶದಲ್ಲಿ ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್‌ ಕಡ್ಡಾಯವಾಗಿದೆ. ಇತ್ತ ಕೇಂದ್ರ ಸರ್ಕಾರ ಈ ರೀತಿ ಪರವಾನಗೆ ಇಲ್ಲದೆ, ಯಾವುದೇ ಪ್ರಮಾಣೀಕೃತವಲ್ಲದ ಹೆಲ್ಮೆಟ್ ಕಂಪನಿಗಳ ಮೇಲೆ ವಿತರಕರ ಮೇಲೆ ದಾಳಿ ಮಾಡಿದೆ.

ಕಳಪೆ ಹೆಲ್ಮೆಟ್‌ಗೆ ಕೇಂದ್ರದ ನಿಷೇಧ

ರಸ್ತೆ ಬದಿಗಳಲ್ಲಿ ಮಾರಾಟವಾಗು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಗೆ ಬ್ರೇಕ್ ಹಾಕಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದಿದೆ. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಬಿಐಎಸ್ ಪ್ರಮಾಣೀಕೃತ ಐಎಸ್ಐ ಅಧಿಕೃತ ಮುದ್ರೆಯ ಹೆಲ್ಮೆಟ್ ಮಾತ್ರ ಬಳಕೆ ಮಾಡಬೇಕು ಎಂದು ನಿಯಮ ಜಾರಿಗೆ ತಂದಿದೆ. ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಆಧ್ಯತೆ ನೀಡಲಾಗಿದೆ. ಹೀಗಾಗಿ ನಕಲಿ ಹೆಲ್ಮೆಟ್, ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ ಮಾಡಿದರೂ ನಿಯಮ ಉಲ್ಲಂಘನೆಯಾಗಲಿದೆ, ಜೊತೆಗೆ ವಾಹನ ಸವಾರರು ಧರಿಸಿ ಪ್ರಯಾಣಿಸಿದರೂ ನಿಯಮ ಉಲ್ಲಂಘನೆಯಾಗಲಿದೆ.

ಭಾರತದಲ್ಲಿ 176 ಬ್ರ್ಯಾಂಡ್ ಹೆಲ್ಮೆಟ್‌ಗೆ ಮಾನ್ಯತೆ

ಭಾರತದಲ್ಲಿ ಹಲವು ಬ್ರ್ಯಾಂಡ್ ಹೆಲ್ಮೆಟ್ ಲಭ್ಯವಿದೆ. ಅತೀ ಕಡಿಮೆ ಬೆಲೆಯ ಹೆಲ್ಮೆಟ್ ಕೂಡ ಲಭ್ಯವಿದೆ. ಆದರೆ ಭಾರತೀಯ ಮಾನದಂಡ ಬ್ಯೂರೋ ಪ್ರಕಾರ ಕೇವಲ 176 ಹೆಲ್ಮೆಟ್‌ಗೆ ಮಾತ್ರ ಮಾನ್ಯತೆ ಇದೆ. ಇದು ಬಿಐಎಸ್ ಪ್ರಮಾಣೀಕರಿಸಿದ ಐಎಸ್ಐ ಮುದ್ರೆಯುಳ್ಳು ಹೆಲ್ಮೆಟ್ ಆಗಿದೆ. ಇದನ್ನು ಹೊರತುಪಡಿಸಿ ಪೊಲೀಸರು ದಂಡ ಹಾಕುತ್ತಾರೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಧರಿಸಿದರೆ ಅಪಾಯ ಮಾತ್ರವಲ್ಲ ದಂಡವೂ ಬೀಳಲಿದೆ.

2500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್ ವಶಕ್ಕೆ

ದೆಹಲಿಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. 30ಕ್ಕೂ ಹೆಚ್ಚು ಹೆಲ್ಮೆಟ್ ತಯಾರಕ ಘಟಕಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಯಾವುದೇ ಮಾನ್ಯತೆ ಇಲ್ಲದೆ ಪರವಾನೆಗೆ ಇಲ್ಲದೆ ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಸುತ್ತಿರುವ ಈ ಘಟಕದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಇದರಲ್ಲಿ ಪರವಾನೆಗೆ ಅವಧಿ ಮುಗಿದಿ, ನವೀಕರಣ ಮಾಡದ ಘಟಕಗಳು ಪತ್ತೆಯಾಗಿದೆ. ಈ ಘಟಕಗಳಿಂದ 2,500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್ ವಶಪಡಿಸಿಕೊಳ್ಳಲಾಗಿದೆ.

2024-25ನೇ ಆರ್ಥಿಕ ವರ್ಷದಲ್ಲಿ BIS ದೆಹಲಿಯಲ್ಲಿ 30ಕ್ಕೂ ಹೆಚ್ಚು ಹೆಲ್ಮೆಟ್‌ ತಯಾರಕ ಘಟಕಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಪರವಾನಗಿ ರದ್ದಾದ ಹಾಗೂ ಅವಧಿ ಮುಗಿದ 9 ತಯಾರಕರು ಕಂಡುಬಂದಿದ್ದು, ಇವರಿಂದ 2,500ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡಿದೆ. ಇನ್ನು ದೆಹಲಿಯಲ್ಲಿ 17 ಅಂಗಡಿಗಳು, ರಸ್ತೆ ಬದಿ ವ್ಯಾಪಾಸ್ಥರ ಮೇಲೂ ದಾಳಿ ನಡೆಸಿದ್ದು 500ಕ್ಕೂ ಹೆಚ್ಚು ಕಳಪೆ ಹೆಲ್ಮೆಟ್ ವಶಪಡಿಸಿಕೊಳ್ಳಳಾಗಿದೆ.