Asianet Suvarna News Asianet Suvarna News

HALನ ಶೇ.15ರಷ್ಟು ಪಾಲು ಮಾರಾಟ ಮಾಡಲು ಮುಂದಾದ ಕೇಂದ್ರ!

ಸರ್ಕಾರದ ಅಧೀನದಲ್ಲಿದ್ದ ಹಲವು ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಇತ್ತೀಚೆಗೆ ವಿಮಾನ ನಿಲ್ದಾಣಗಳ ಖಾಸಗೀಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಕೊರೋನಾ ವೈರಸ್ ಕಾರಣ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರದ ಅಂಗ ಸಂಸ್ಥೆಗಳ ಷೇರು ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಇದೀಗ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿರುವ HAL ಕಂಪನಿ ಷೇರುಗಳ ಮಾರಾಟಕ್ಕೆ ಮುಂದಾಗಿದೆ. 

Central Government set to sell 15 percent stake of HAL to raise Fund
Author
Bengaluru, First Published Aug 28, 2020, 2:37 PM IST
  • Facebook
  • Twitter
  • Whatsapp

ಬೆಂಗಳೂರು(ಆ.28): ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ದೇಶದ ಹೆಮ್ಮೆಯ ಕಂಪನಿಯಾಗಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ನಿರಂತರ ಕೊಡುಗೆ ನೀಡಿದ ಹೆಗ್ಗಳಿಕೆಗೆ HAL ಪಾತ್ರವಾಗಿದೆ. ಇದೀಗ ಇದೇ HAL ಕಂಪನಿಯ ಶೇಕಡಾ 15 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೊರೋನಾ ವೈರಸ್ ಕಾರಣ ಸರ್ಕಾರದ ಅಧೀನದಲ್ಲಿರು ಹಲವು ಅಂಗ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದ ಹೊರಬರಲು ಕೇಂದ್ರ ಸರ್ಕಾರ ಷೇರುಗಳ ಮಾರಾಟಕ್ಕೆ ಮುಂದಾಗಿದೆ.

ಪರಮಾಣು ಯುದ್ಧ ಸನಿಹವೇ?: ಕೇಳಿದ ಪ್ರಶ್ನೆಗೆ ಇದು ಅಮಿತ್ ಶಾ ಉತ್ತರವೇ?_

HAL ಕಂಪನಿಯ ಶೇಕಡಾ 15 ರಷ್ಟು ಷೇರು ಮಾರಾಟ ಮಾಡೋ ಮೂಲಕ ಕೇಂದ್ರ ಸರ್ಕಾರ 5,000 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ ಶೇಕಡಾ 10 ರಷ್ಟು ಷೇರು ಮಾರಾಟ ಮಾಡಲಿದೆ. ಬಳಿಕ 2ನೇ ಹಂತದಲ್ಲಿ ಶೇಕಡಾ 5 ರಷ್ಟು ಷೇರು ಮಾರಾಟ ಮಾಡಲಿದೆ. 

ಮೊದಲ ಹಂತದಲ್ಲಿ ಸರ್ಕಾರದ ಒಡೆತನದಲ್ಲಿದ್ದ 33.4 ಮಿಲಿಯನ್ ಷೇರುಗಳು ಖಾಸಗಿ ಪಾಲಾಗಲಿದೆ. ಷೇರುಗಳ ಫ್ಲೋರ್ ಬೆಲೆಯನ್ನು 1,001 ರೂಪಾಯಿ ನಿಗಧಿ ಪಡಿಸಲಾಗಿದೆ. ಇದು ಬುಧವಾರದ ಷೇರು ವಹಿವಾಟು ಮುಕ್ತಾಯದ ಬೆಲೆಗಿಂತ ಶೇಕಡಾ 15 ರಷ್ಟು ಕಡಿಮೆಯಾಗಿದೆ.  

HAL ದೇಶದ ರಕ್ಷಣಾ ವಿಭಾಗಕ್ಕೆ ಗರಿಷ್ಠ ಕೊಡುಗೆ ನೀಡಿದ ಹೆಗ್ಗಳಿಕೆ ಹೊಂದಿದೆ. ಮಿಗ್-21, ಮಿಗ್ -27, ಜಾಗ್ವಾರ್ ಹಾಗೂ ಸು-30 MKL ಇದೇ HAL ಕಂಪನಿ ನಿರ್ಮಿತ ಯುದ್ಧ ವಿಮಾನಗಳಾಗಿವೆ. ಹೆಲಿಕಾಪ್ಟರ್, ಏರ್ ಕ್ರಾಫ್ಟ್, ಎಂಜಿನ್ ಸೇರಿದಂತೆ ಹಲವು ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿರುವ HAL ದೇಶದ ಹೆಮ್ಮೆಯ ಕಂಪನಿ ಅನ್ನೋ ಬಿರುದು ಪಡೆದುಕೊಂಡಿದೆ.

ನಮ್ಮ ರಾಜ್ಯದ GST ಖೋತಾ: RBIನಿಂದ ಬಡ್ಡಿಗೆ ಹಣ ಕೊಡಿಸ್ತೀವಿ ಎಂದ ಕೇಂದ್ರ.

"

Follow Us:
Download App:
  • android
  • ios