Asianet Suvarna News Asianet Suvarna News

ಎಸ್‌ಪಿ, ಡಿಐಜಿಗಳಿಗೆ ಕೇಂದ್ರ ಸೇವೆ ಕಡ್ಡಾಯ: ಕೇಂದ್ರ ರಾಜ್ಯದ ಮಧ್ಯೆ ಸಂಘರ್ಷ ಸಾಧ್ಯತೆ

  • ಕೇಂದ್ರ ಕೇಳಿದಾಗ ಅಧಿಕಾರಿಗಳು ಕೇಂದ್ರೀಯ ಸೇವೆಗೆ ಬರಲೇಬೇಕು
  • ಬರದೇ ಇದ್ದರೆ ಮುಂದೆಂದೂ ಕೇಂದ್ರೀಯ ಸೇವೆಗೆ ಅವಕಾಶ ನೀಡಲ್ಲ
  • ಕೇಂದ್ರ ಗೃಹ ಸಚಿವಾಲಯದಿಂದ ಪ್ರಧಾನಿ ಕಚೇರಿಗೆ ಪ್ರಸ್ತಾಪ
  • ಪ್ರಸ್ತಾಪಕ್ಕೆ ಪ್ರಧಾನಿ ಕಚೇರಿ ಅಸ್ತು ಎಂದರೆ ಕೇಂದ್ರ ರಾಜ್ಯ ಸಂಘರ್ಷ ಸಾಧ್ಯತೆ
Central deployment is mandatory for SP DIG akb
Author
Delhi, First Published Apr 18, 2022, 3:30 AM IST

ನವದೆಹಲಿ: ಎಸ್‌ಪಿ ಹಾಗೂ ಐಜಿಪಿ ದರ್ಜೆಯ ಅಧಿಕಾರಿಗಳನ್ನು ಕೇಂದ್ರ ಸರ್ಕಾರವು ಕೇಳಿದಾಗ ಕಡ್ಡಾಯವಾಗಿ ರಾಜ್ಯ ಸರ್ಕಾರಗಳು ಕೇಂದ್ರೀಯ ನಿಯೋಜನೆಗೆ ಕಳಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯವು ಪ್ರಧಾನಿ ಕಚೇರಿಗೆ ಸಲ್ಲಿಸಿದೆ. ಒಂದು ವೇಳೆ, ಅಧಿಕಾರಿಗಳು ನಿಯೋಜನೆಗೆ ಒಪ್ಪದೇ ಇದ್ದಲ್ಲಿ, ಅವರು ತಮ್ಮ ಉಳಿದ ವೃತ್ತಿಜೀವನದಲ್ಲಿ ಎಂದಿಗೂ ಕೇಂದ್ರೀಯ ಹುದ್ದೆಗಳನ್ನು ಪಡೆಯುವುದಿಲ್ಲ ಎಂಬ ಮಹತ್ವದ ಅಂಶ ಈ ಪ್ರಸ್ತಾಪದಲ್ಲಿದೆ.

ಪ್ರಧಾನಿ ಸಚಿವಾಲಯವು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆತಟ್ಟಿ ನಿಂತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರ್ಕಾರ ಹಾಗೂ ಎಂ.ಕೆ. ಸ್ಟಾಲಿನ್‌ ನೇತೃತ್ವದ ತಮಿಳುನಾಡು ಸರ್ಕಾರಗಳು ಯಾವತ್ತೂ ಇಂಥ ಪ್ರಸ್ತಾಪ ಒಪ್ಪುವುದಿಲ್ಲ. ಈಗಾಗಲೇ ಕೇಂದ್ರೀಯ ನಿಯೋಜನೆಗೆ ತಮ್ಮ ಕೇಡರ್‌ ಅಧಿಕಾರಿಗಳನ್ನು ಬಿಟ್ಟುಕೊಡಲು ಅನೇಕ ಬಾರಿ ಈ ಸರ್ಕಾರಗಳು ನಿರಾಕರಿಸಿದ್ದುಂಟು. ಹೀಗಾಗಿ ಗೃಹ ಸಚಿವಾಲಯದ ಪ್ರಸ್ತಾಪ ಹೊಸ ವಿವಾದಕ್ಕೆ ನಾಂದಿ ಹಾಡುವ ಸಂಭವವಿದೆ.

ಕೇಂದ್ರದ ಈ ನಡೆ ಏಕೆ?:

ಕೇಂದ್ರ ಗೃಹ ಸಚಿವಾಲಯದ (ಸಿಬಿಐ/ಗುಪ್ತಚರ ದಳ.. ಇತ್ಯಾದಿ) ಹಲವಾರು ಹುದ್ದೆಗಳಲ್ಲಿ ಕಾರ‍್ಯನಿರ್ವಹಿಸಲು ಡಿಐಜಿ ಹಾಗೂ ಎಸ್‌ಪಿ ಮಟ್ಟದ ಅಧಿಕಾರಿಗಳು ಬೇಕಾಗುತ್ತಾರೆ. ಆದರೆ ಶೇ.50ರಷ್ಟುಈ ದರ್ಜೆಯ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಗೃಹ ಸಚಿವಾಲಯವು ಕಡ್ಡಾಯ ಕೇಂದ್ರೀಯ ನಿಯೋಜನೆಯ ಪ್ರಸ್ತಾಪವನ್ನು ಇರಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸೇವೆಗೆ ನಿಯೋಜಿತರಾಗಿದ್ದ ಆಲಾಪನ್‌ ನಿವೃತ್ತಿ, ಮಮತಾ ಸಲಹೆಗಾರರಾಗಿ ನೇಮಕ!

ಸ್ವಾಗತ-ವಿರೋಧ:

ಕೇಂದ್ರ ಸರ್ಕಾರದ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಡಿಐಜಿ ರಾರ‍ಯಂಕ್‌ನ ಅಧಿಕಾರಿಯೊಬ್ಬರು ಸ್ವಾಗತಿಸಿದ್ದಾರೆ. ಕೇಂದ್ರೀಯ ಅರೆಸೇನಾ ಪಡೆಗಳಲ್ಲಿ ಸಾಕಷ್ಟುಹುದ್ದೆಗಳು ಖಾಳಿ ಇದ್ದು, ಈ ಹೊಸ ಪ್ರಸ್ತಾಪವು ಹುದ್ದೆಗಳ ಭರ್ತಿಗೆ ನೆರವಾಗಲಿದೆ ಎಂದಿದ್ದಾರೆ. ಆದರೆ, ರಾಜ್ಯದ ಐಜಿ ರಾರ‍ಯಂಕ್‌ ಅಧಿಕಾರಿಯೊಬ್ಬರು ಇದನ್ನು ವಿರೋಧಿಸಿದ್ದಾರೆ. 'ಕೇಂದ್ರೀಯ ನಿಯೋಜನೆಗೆ ರಾಜ್ಯಗಳು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬೇಕು. ಅನೇಕ ರಾಜ್ಯಗಳು ಎನ್‌ಒಸಿ ನೀಡಲು ಒಪ್ಪಲ್ಲ. ಆದರೆ ಕೇಂದ್ರದ ಹೊಸ ಪ್ರಸ್ತಾಪದಿಂದ ಕೇಂದ್ರ-ರಾಜ್ಯಗಳ ನಡುವೆ ಸಂಘರ್ಷ ಏರ್ಪಟ್ಟು, ಇದರ ನಡುವೆ ಅಧಿಕಾರಿಗಳು ಬಲಿಪಶುವಾಗುತ್ತಾರೆ’ ಎಂದಿದ್ದಾರೆ.

IAS Officer Salary: UPSC ಪರೀಕ್ಷೆ ಬರೆದು IAS ಅಧಿಕಾರಿಯಾಗುವವರಿಗೆ ವೇತನವೆಷ್ಟು?

ಕಳೆದ ವರ್ಷ ಕೂಡ ಇಂಥದ್ದೇ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಇರಿಸಿತ್ತು. ಐಎಎಸ್‌(IAS), ಐಪಿಎಸ್‌ (IPS), ಐಆರ್‌ಎಸ್‌(IRS), ಐಎಫ್‌ಎಸ್‌(IFS) ಹೀಗೆ ಯಾವುದೇ ಅಧಿಕಾರಿಗಳು ಇರಲಿ. ಕೇಂದ್ರ ಸರ್ಕಾರ ಕೇಳಿದಾಗ ಕಡ್ಡಾಯವಾಗಿ ಅವರನ್ನು ಕೇಂದ್ರದ ಸೇವೆಗೆ ಬಿಟ್ಟುಕೊಡಬೇಕು ಎಂದು ಪ್ರಸ್ತಾಪದಲ್ಲಿತ್ತು. ಆದರೆ ಆ ಪ್ರಸ್ತಾಪಕ್ಕೆ ಬಿಜೆಪಿ ಆಡಳಿತದ ಮಧ್ಯಪ್ರದೇಶವೇ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Maಕೂಡ ಕಿಡಿಕಾರಿದ್ದರು.

Follow Us:
Download App:
  • android
  • ios