Breaking: 600 ರೂಪಾಯಿಗೆ ಸಿಲಿಂಡರ್‌, ಕೇಂದ್ರ ಕ್ಯಾಬಿನೆಟ್‌ ನಿರ್ಧಾರ!

ಕೇಂದ್ರ ಕ್ಯಾಬಿನೆಟ್‌ ಪ್ರಮುಖ ನಿರ್ಧಾರ ಮಾಡಿದ್ದು, ಎಲ್‌ಪಿಜಿ ಗ್ಯಾಸ್‌ಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 100 ರೂಪಾಯಿ ಏರಿಸಿದೆ. ಇದರಿಂದಾಗಿ ದೇಶದ ಬಡವರಿಗೆ 600 ರೂಪಾಯಿಗೆ ಅಡುಗೆ ಸಿಲಿಂಡರ್‌ ಸಿಗಲಿದೆ.

Central Cabinet Decisions Beneficiaries of Ujjwala scheme will now get gas cylinder for Rs 600 san

ನವದೆಹಲಿ (ಅ.4): ಕೇಂದ್ರ ಸರ್ಕಾರ ಬುಧವಾರದ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ದೇಶದ ಬಡವರಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ನೀಡಲಾಗುವ ಗ್ಯಾಸ್‌ ಸಬ್ಸಿಡಿಯನ್ನು 100 ರೂಪಾಯಿ ಏರಿಕೆ ಮಾಡಿದೆ. ಅದರಂತೆ ಇಲ್ಲಿಯವರೆಗೂ 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದ ಇವರು, ಇನ್ನು 300 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಉಜ್ವಲ ಯೋಜನೆಯ ಫಲಾನುಭವಿಗಳು 600 ರೂಪಾಯಿಗೆ ಸಿಲಿಂಡರ್‌ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 300 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಕುರಿತಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು. ತೆಲಂಗಾಣ ರಾಜ್ಯದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ರ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪ್ರಸ್ತುತ ಉಜ್ವಲ ಯೋಜನೆಯ ಅಡಿಯಲ್ಲಿ 14.2 ಕೆಜಿಯ ಗ್ಯಾಸ್‌ ಸಿಲಿಂಡರ್‌ ಪಡೆಯುವ ಬಡ ಮಹಿಳೆಯರು ಅದಕ್ಕಾಗಿ 703 ರೂಪಾಯಿ ಪಾವತಿ ಮಾಡುತ್ತಿದ್ದಾರೆ. ಇದರಲ್ಲಿ 200 ರೂಪಾಯಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಈಗ ಮತ್ತೆ 100 ರೂಪಾಯಿ ಕೇಂದ್ರ ಸಬ್ಸಿಡಿ ನೀಡಲಿರುವ ಕಾರಣ 603 ರೂಪಾಯಿಗೆ ಉಜ್ವಲ ಯೋಜನೆಯ ಸಿಲಿಂಡರ್‌ ಸಿಗಲಿದೆ. ಇನ್ನು ಮಾರುಕಟ್ಟೆಯಲ್ಲಿ ಗೃಹಬಳಕೆಯೆ ಸಿಲಿಂಡರ್ ಬೆಲೆ 903 ರೂಪಾಯಿಯೇ ಆಗಿದೆ.

ಕ್ಯಾಬಿನೆಟ್‌ ಮೀಟಿಂಗ್‌ನ ಇತರ ಮಹತ್ವದ ನಿರ್ಧಾರಗಳು:ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಗೆ ಕೇಂದ್ರ ನಿರ್ಧಾರ ಮಾಡಿದೆ. ಅರಿಶಿನದ ಅರಿವು ಮತ್ತು ಬಳಕೆಯನ್ನು ಹೆಚ್ಚಿಸಲು ಮತ್ತು ರಫ್ತು ಹೆಚ್ಚಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಅರಿಶಿನ ಮಂಡಳಿ ನೆರವಾಗಲಿದೆ. ಹೊಸ ಉತ್ಪನ್ನಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಮೌಲ್ಯವರ್ಧಿತ ಅರಿಶಿನ ಉತ್ಪನ್ನಗಳಿಗೆ ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಅಭಿವೃದ್ಧಿಪಡಿಸಲು ಮಂಡಳಿ. 2030 ರ ವೇಳೆಗೆ ಭಾರತದಿಂದ ಅರಿಶಿನ ರಫ್ತು US $ 1 ಬಿಲಿಯನ್‌ಗೆ ಏರುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಇದೇ ವೇಳೆ  ಅಂತರ್ ರಾಜ್ಯ ನದಿ ನೀರಿನ ವಿವಾದಗಳ ಕಾಯಿದೆ, 1956 ರ ಅಡಿಯಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-IIರ ಉಲ್ಲೇಖಿತ ನಿಯಮಗಳ ಅನುಸಾರ ತೆಲಂಗಾಣ ಹಾಗೂ ಆಂಧ್ರಪ್ರದೇಶದ ನಡುವೆ ಕೃಷ್ಣಾ ನದಿ ನೀರು ಹಂಚಿಕೆಯ ಪ್ರಾಧಿಕಾರವನ್ನು ನಿರ್ಮಿಸುವುದಾಗಿ ತಿಳಿಸಿದೆ. 

ಮೋದಿ ಸರ್ಕಾರದಿಂದ ಮತ್ತೊಂದು ಕೊಡುಗೆ, 75 ಲಕ್ಷ ಕುಟುಂಬಕ್ಕೆ ಸಿಗಲಿದೆ ಉಚಿತ LPG ಗ್ಯಾಸ್ !

 ಅದರೊಂದಿಗೆ ಕ್ಯಾಬಿನೆಟ್‌, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಟೆನೆನ್ಸಿ ರೆಗ್ಯುಲೇಶನ್, 2023, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಟೆನೆನ್ಸಿ ರೆಗ್ಯುಲೇಶನ್, 2023, ಲಕ್ಷದ್ವೀಪ್ ಟೆನೆನ್ಸಿ ರೆಗ್ಯುಲೇಶನ್, 2023 ರ ಘೋಷಣೆಗೆ ಪ್ರಸ್ತಾವನೆಯನ್ನು ಅನುಮೋದಿಸಿದೆ.  ತಮ್ಮ ಜಮೀನು ಅಥವಾ ಮನೆಗಳನ್ನು ಬಾಡಿಗೆಗೆ ನೀಡಲು ಜವಾಬ್ದಾರಿಯುತ ಮತ್ತು ಪಾರದರ್ಶಕ ಪರಿಸರ ವ್ಯವಸ್ಥೆಯನ್ನು ರಚಿಸಲು ಹೊಸ ನಿಯಮಗಳ ಕಾನೂನು ಚೌಕಟ್ಟನ್ನು ರೂಪಿಸಲು ತೀರ್ಮಾನಿಸಲಾಗಿದೆ.

ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!

Latest Videos
Follow Us:
Download App:
  • android
  • ios