ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯ ಕರ್ನಾಟಕದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಈ ಬಾರಿ 615 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ನವದೆಹಲಿ(ಜು.29) ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಕರ್ನಾಟಕಕ್ಕೆ 615 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಕಾರ್ಯಕ್ರಮದಡಿ ಕರ್ನಾಟಕದಲ್ಲಿನ 20.72 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದೀಗ ಈ ಫಲಾನುಭವಿಗಳಿಗೆ ಯೋಜನೆಯ ಲಾಭ ಹಂಚಲು ಹಣ ಬಿಡುಗಡೆ ಮಾಡಲಾಗಿದೆ. ಈ ಕುರಿತು ಲೋಕಸಭೆಯಲ್ಲಿ ಸಂಸದ ಪಿಸಿ ಮೋಹನ್, ಕರ್ನಾಟಕದ ಫಲಾನುಭವಿಗಳ ಹಣದ ಕುರಿತು ಪ್ರಶ್ನಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಸ್ಮೃತಿ ಇರಾನಿ ಲೋಕಸಭೆಯಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮಾತೃ ವಂದನಾ ಯೋಜನೆಯಡಿ ಕರ್ನಾಟಕದಲ್ಲಿ 20.72 ಲಕ್ಷ ಫಲಾನುಭವಿಗಳಿದ್ದರೆ ಭಾರತದಲ್ಲಿ ಒಟ್ಟು 3.36 ಕೋಟಿ ಫಲಾನುಭವಿಗಳಿದ್ದಾರೆ. ಮಾತೃ ವಂದನಾ ಯೋಜನೆ ಪ್ರಮುಖವಾಗಿ 19 ವರ್ಷ ಮೇಲ್ಪಟ್ಟ ಗರ್ಭಿಣಿಯರಿಗೆ ಯೋಜನೆ ಲಾಭ ಹಂಚಿಕೆ ಮಾಡಲಾಗುತ್ತದೆ. ಮೊದಲ ಬಾರಿ ಗರ್ಭಿಣಿಯಾದವರಿಗೆ ಮಾತ್ರ ಈ ಯೋಜನೆ ಲಭಾ ಸಿಗಲಿದೆ. ಈ ಯೋಜನೆಡಿ ಗರ್ಭಿಣಿಯರು 6,000 ರೂಪಾಯಿ ಪಡೆಯಲಿದ್ದಾರೆ. ಇದೀಗ ಕರ್ನಾಟಕದ 20.72 ಲಕ್ಷ ಫಲಾನುಭವಿಗಳಿಗೆ 612 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಹೆಣ್ಣು ಮಗು ಜನಿಸಿದ್ರೆ ತಾಯಂದಿರ ಬ್ಯಾಂಕ್ ಖಾತೆಗೆ 6,000 ಜಮಾ, ಅರ್ಜಿ ಸಲ್ಲಿಸುವುದು ಹೇಗೆ?
ಯೋಜನೆ ಫಲಾನುಭವಿಗಳಾಗಲು ಅಂಗನವಾಡಿ ಮೂಲಕ ಗರ್ಭಿಣಿಯರು ನೋಂದಣಿ ಮಾಡಿಕೊಳ್ಳಬೇಕು.ಒಟ್ಟು ಮೂರು ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆಯನ್ನು 2017ರಲ್ಲಿ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಾಗಿ ಬದಲಾಯಿಸಲಾಗಿದೆ. 2010ರಲ್ಲಿ ಕೇವಲ 50 ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ವಿಸ್ತರಿಸಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಗೆ ವೇಗ ತುಂಬಿದರು. 2015ರ ವೇಳೆ 200 ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಯಿತು. 2017ರಲ್ಲಿ ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆಯನ್ನ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಬದಲಾಯಿಸಲಾಯಿತು.
‘ಮಾತೃವಂದನಾ’ ಹಣ ನಿರೀಕ್ಷೆಯಲ್ಲಿ ಗರ್ಭಿಣಿಯರು, ತಾಯಂದಿರು
2017ರಲ್ಲಿ 650 ಜಿಲ್ಲೆಗಳಿಗೆ ಯೋಜನೆ ವಿಸ್ತರಣೆ ಮಾಡಲಾಯಿತು. ಇದೀಗ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ವಿಸ್ತರಣೆಗೊಂಡಿದೆ. ಈ ಬಾರಿ ಭಾರತದಲ್ಲಿ ಒಟ್ಟು 3.36 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ಇದರ ಜೊತೆಗೆ ಮಕ್ಕಳ ಪೌಷ್ಠಿಕ ಆಹಾರ, ಬಾಣಂತಿಯರ ಆರೈಕೆ, ಆಹಾರ, ಶಿಶುಪಾಲನೆ ಸೇರಿದಂತೆ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಆಯಾ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿದೆ.
