ಆನ್‌ಲೈನ್ ಬೆಟ್ಟಿಂಗ್ ದಂಧೆ ಭಾರತಕ್ಕೆ ಕಾಲಿಟ್ಟು ಹಲವು ವರ್ಷಗಳೇ ಉರುಳಿದೆ. ಇದರ ವಿರುದ್ಧ ಸತತ ಹೋರಾಟಗಳು ನಡೆಯತ್ತಿದೆ. ಇದೀಗ ಕೇಂದ್ರ ಸರ್ಕಾರ ಬೆಟ್ಟಿಂಗ್ ಕಂಪನಿಗಳ ವಿರುದ್ಧ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 

ನವದೆಹಲಿ(ಅ.03): ಆನ್ ಲೈನ್ ಬೆಟ್ಟಿಂಗ್ ದಂಧೆಯಿಂದ ಜನರ ಜೀವನ ಹಾಳುತ್ತಿದೆ ಅನ್ನೋ ಆರೋಪ ಇಂದು ನಿನ್ನೆಯದ್ದಲ್ಲ. ಇದರ ವಿರುದ್ಧ ಸತತ ಹೋರಾಟಗಳು ನಡೆಯುತ್ತಿದೆ. ಇದೀಗ ಕೇಂದ್ರ ಸರ್ಕಾರ ಆನ್ ಲೈನ್ ಬೆಟ್ಟಿಂಗ್ ಜಾಹೀರಾತು ವಿರುದ್ಧ ಮಹತ್ವದ ಹೆಜ್ಜೆ ಇಟ್ಟಿದೆ. ಆನ್‌ಲೈನ್ ಬೆಟ್ಟಿಂಗ್ ಜಾಹೀರಾತುಗಳ ಪ್ರಸಾರ ನಿರ್ಬಂಧ ವಿಧಿಸಿದೆ. ಪತ್ರಿಕೆ, ವಾಹಿನಿ, ಡಿಜಿಟಲ್ ಮಾಧ್ಯಮ, ಒಟಿಟಿ, ಪ್ರೈವೇಟ್ ಸ್ಯಾಟಲೈಟ್ ವಾಹನಿಗಳು ಯಾವುದೇ ರೀತಿಯ ಆನ್‌ಲೈನ್ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ನಿರ್ಬಂಧ ವಿದಿಸಿದೆ. ಜನರ ಬದುಕನ್ನು ಹಾಳು ಮಾಡುತ್ತಿರುವ ಆನ್‌ಲೈಟ್ ಬೆಟ್ಟಿಂಗ್ ಜಾಹೀರಾತುಗಳನ್ನು ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಬೆಟ್ಟಿಂಗ್ ಹಾಗೂ ಜೂಜು ಅಕ್ರಮ ಎಂದು ಪರಿಗಣಿಸಲ್ಪಟ್ಟಿದೆ. ಸುದ್ದಿ ವೆಬ್‌ಸೈಟ್‌ಗಳನ್ನು ಆನ್‌ಲೈನ್ ಬೆಟ್ಟಿಂಗ್ ಕಂಪನಿ ಬಳಸಿಕೊಳ್ಳುತ್ತಿದೆ. ಈ ಮೂಲಕ ಜಾಹೀರಾತು ನೀಡುತ್ತಿದೆ. ಬೆಟ್ಟಿಂಗ್ ಮತ್ತು ಜೂಜಾಟ ಭಾರತದ ಬಹತೇಕ ಭಾಗದಲ್ಲಿ ಕಾನೂನುಬಾಹಿರ ಚಟುವಟಿಕೆ. ಇದು ದಾರಿ ತಪ್ಪಿಸುವ ದಂಧೆಯಾಗಿದೆ. ಹಲವು ರಾಷ್ಟ್ರಗಳಲ್ಲಿ ಜೂಜು ಅಕ್ರಮವಾಗಿದೆ. ಕೇಬಲ್ ಟಿವಿ ನೆಟ್‌ವರ್ಕ್ ನಿಯಂತ್ರಣ ಕಾಯಿದೆ 1995ರ ಅಡಿಯಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. 

ಬೆಟ್ಟಿಂಗ್‌ ದಂಧೆಯ ಕರಾಳ ರೂಪ ದರ್ಶನ: ಹಣಕ್ಕಾಗಿ ಹೆಂಡತಿಯನ್ನೇ ಕೊಂದನಾ ಗಂಡ?

ಈ ಜಾಹೀರಾತುಗಳು ಗ್ರಾಹಕ ರಕ್ಷಣಾ ಕಾಯ್ದೆ-2019, ಕೇಬಲ್‌ ಟೀವಿ ನಿಯಂತ್ರಣ ಕಾಯ್ದೆ-1995, ಪ್ರೆಸ್‌ ಕೌನ್ಸಿಲ್‌ ಕಾಯ್ದೆ-1978 ಹಾಗೂ ಮಾಹಿತಿ ತಂತ್ರಜ್ಞಾನ ನಿಯಮ-2021ರ ನಿಯಮಗಳಿಗೆ ಅನುಗುಣವಾಗಿಲ್ಲ. ಇತ್ತೀಚೆಗೆ ಮಾಧ್ಯಮಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಜಾಹೀರಾತುಗಳ ಭರಾಟೆ ಜೋರಾಗಿದೆ. ಇಂಥ ಜಾಹೀರಾತುಗಳು ನಿರ್ಬಂಧಿತ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತವೆ. ಹೀಗಾಗಿ ವಿಶಾಲ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮುದ್ರಣ, ವಿದ್ಯುನ್ಮಾನ ಹಾಗೂ ಟೀವಿ ಮಾಧ್ಯಮಗಳು ಇವುಗಳ ಪ್ರಸಾರ/ಮುದ್ರಣ ಮಾಡಬಾರದು ಎಂದು ಸಚಿವಾಲಯ ತಿಳಿಸಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಅನ್ನು ರಾಜ್ಯ ಸರ್ಕಾರ ನಿರ್ಬಂಧಿಸಿತ್ತು. ಆದರೆ ಈ ನಿರ್ಬಂಧವನ್ನು ಹೈಕೋರ್ಚ್‌ ರದ್ದು ಮಾಡಿತ್ತು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸಲಹಾವಳಿ ಬಿಡುಗಡೆ ಮಾಡಿದ್ದು ಇಲ್ಲಿ ಗಮನಾರ್ಹ.

ರಾಜ್ಯದಲ್ಲಿ ಆನ್‌ಲೈನ್‌ ಗೇಮಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸಲು ಅವಕಾಶ ಕಲ್ಪಿಸಿ ಕರ್ನಾಟಕ ಪೊಲೀಸ್‌ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದ ಕೆಲ ನಿರ್ದಿಷ್ಟನಿಯಮಗಳನ್ನು ರದ್ದುಪಡಿಸಿ ಹೈಕೋರ್ಟ್‌ ಸೋಮವಾರ ಆದೇಶಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಆನ್‌ಲೈನ್‌ ಗೇಮಿಂಗ್‌ಗೆ ಇದ್ದ ನಿಷೇಧ ತೆರವಾದಂತಾಗಿದ್ದು, ಡ್ರೀಮ್‌ 11, ಎಂಪಿಎಲ್‌, ರಮ್ಮಿ ಸರ್ಕಲ್‌, ಪೋಕರ್‌, ಫ್ರೀ ಫೈಯರ್‌ ಸೇರಿದಂತೆ ಹಲವಾರು ಆನ್‌ಲೈನ್‌ ಆಟಗಳ ಪುನಾರಂಭಕ್ಕೆ ವೇದಿಕೆ ಸಿಕ್ಕಂತಾಗಿದೆ.

ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆ-2021ರ ಸಿಂಧುತ್ವ ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌, ಗ್ಯಾಲಕ್ಟಸ್‌ ಫನ್‌ವೇರ್‌ ಟೆಕ್ನಾಲಜೀಸ್‌ ಕಂಪನಿಗಳು ಮತ್ತು ಬೆಂಗಳೂರಿನ ಪೂಲ್‌ ಎನ್‌. ಕ್ಲಬ್‌ ಸದಸ್ಯ ಹರಿರಾಜ್‌ ಶೆಟ್ಟಿಮತ್ತಿತರರು ಸಲ್ಲಿಸಿದ್ದ ಹಲವು ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.