ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಿದೇಶೀ ಗಣ್ಯರು| ಟ್ವೀಟ್ ಮಾಡಿ ಗಣ್ಯರ ಬೆಂಬಲ| ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಟ್ರೆಂಡ್ ಹುಟ್ಟಿಸುತ್ತಿದ್ದಂತೆಯೇ ಸರ್ಕಾರದ ಮಹತ್ವದ ಪ್ರಕಟಣೆ

ರೈತ ಪ್ರತಿಭಟನೆಗೆ ವಿದೇಶೀ ಗಣ್ಯರಾದ ರಿಹಾನಾ, ಗ್ರೆಟ್ಟಾ ಥನ್‌ಬರ್ಗ್ ಸೇರಿ ಅನೇಕ ಗಣ್ಯರು ಬೆಂಬಲ ಸೂಚಿಸಿ ಟ್ವಿಟ್ ಮಾಡಿದ ಬೆನ್ನಲ್ಲೇ ಮೋದಿ ಸರ್ಕಾರ ಈ ಸಂಬಂಧ ಮಹತ್ವದ ಪ್ರಕಟಣೆ ಹೊರಡಿಸಿದೆ. ತನ್ನ ಈ ಪ್ರಕಟಣೆಯಲ್ಲಿ ಸರ್ಕಾರ 'ಸಂವೇದನಾಶೀಲ ಸಾಮಾಜಿಕ ಮಾಧ್ಯಮ ಹ್ಯಾಶ್‌ಟ್ಯಾಗ್‌ ಮತ್ತು ಕಾಮೆಂಟ್‌ಗಳ ದುರಾಸೆ' ವಿರುದ್ಧ ಎಚ್ಚರಿಕೆ ರವಾನಿಸಿದೆ. ಅಲ್ಲದೇ ಈ ಪ್ರತಿಭಟನೆ ಭಾರತದ 'ಅತೀ ಚಿಕ್ಕ ಭಾಗದ ರೈತರು' ಮಾಡುತ್ತಿದ್ದಾರೆ ಎಂದು ತಿಳಿಸಿದೆ.

ತನ್ನ ಈ ಪ್ರಕಟಣೆಯಲ್ಲಿ ಸರ್ಕಾರ #IndiaTogether ಹಾಗೂ #IndiaAgainstPropaganda ಹ್ಯಾಷ್‌ಟ್ಯಾಗ್‌ಗಳನ್ನು ಬಳಸುತ್ತಾ 'ಈ ಪ್ರತಿಭಟನೆ ಭಾರತದ ಪ್ರಜಾಪ್ರಭುತ್ವ ತತ್ವ, ಸರ್ಕಾರ ಹಾಗೂ ಇದರಲ್ಲಿ ಪಾಲ್ಗೊಂಡಿರುವ ರೈತ ಸಂಘಟನೆಯ ಸಮಸ್ಯೆ ಬಗೆಹರಿಸಲು ನಡೆಸುತ್ತಿರುವ ಯತ್ನವನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಬೇಕು' ಎಂದು ತಿಳಿಸಿದೆ. 

Scroll to load tweet…

ಇಂತಹ ವಿಚಾರಗಳ ಕುರಿತು ಹೇಳಿಕೆ ನೀಡುವ ಮೊದಲು ವಾಸ್ತವತೆ, ಸತ್ಯ ಅರಿತು ಹಾಗೂ ಸಮಸ್ಯೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಬೇಕಾಗಿ ಆಗ್ರಹಿಸುತ್ತೇವೆ. ಸೋಶಿಯಲ್ ಮಿಡಿಯಾ ಹ್ಯಾಷ್‌ಟ್ಯಾಗ್ ಹಾಗೂ ಕಮೆಂಟ್‌ಗಳು ಸಿಗುತ್ತವೆಂಬ ದುರಾಸೆಯಿಂದ ಇಂತಹ ನಡೆ ಸರಿಯಲ್ಲ. ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಇದನ್ನು ಗಮನದಲ್ಲಿರಿಸಕೊಳ್ಳಬೇಕು. ಈ ನಡೆ ಕೇವಲ ತಪ್ಪಲ್ಲ, ಬದಲಾಗಿ ಬೇಜವಾಬ್ದಾರಿತನವಾಗುತ್ತದೆ ಎಂದೂ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.