Asianet Suvarna News Asianet Suvarna News

CBSE Question Paper Mistake : ವಿದ್ಯಾರ್ಥಿಗಳನ್ನು ಚಿಂತೆಗೀಡು ಮಾಡಿದ ಸಿಬಿಎಸ್‌ಇ 12ನೇ ತರಗತಿ ಅಕೌಂಟ್‌ ಪ್ರಶ್ನೆ ಪತ್ರಿಕೆ

  • ಸಿಬಿಎಸ್‌ಇ  12 ನೇ ತರಗತಿಯ ಅಕೌಂಟ್‌ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ
  • ಪ್ರಶ್ನೆ ಪತ್ರಿಕೆಯಿಂದ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು
  • ವಿದ್ಯಾರ್ಥಿಗಳಿಗೆ ಯಾವುದೇ ಸೂಚನೆಗಳಿರದೇ ಗೊಂದಲ
CBSE Class 12 Accounts 2021 Exam Question paper made students worried akb
Author
Bangalore, First Published Dec 13, 2021, 2:33 PM IST

ನವದೆಹಲಿ(ಡಿ13): ಇಂದು ನಡೆದ ಸಿಬಿಎಸ್‌ಇ ಯಾ  12 ನೇ ತರಗತಿಯ ಅಕೌಂಟ್‌ ಪ್ರಶ್ನೆ ಪತ್ರಿಕೆಯ ಹಂತ ಒಂದರ ಪರೀಕ್ಷೆಯೂ ಆರಂಭದಲ್ಲಿ ಸಂಪೂರ್ಣ ಗೊಂದಲಕ್ಕೆ ಕಾರಣವಾಗಿತ್ತು. ಟರ್ಮ್ 1 ಪ್ರಶ್ನೆ ಪತ್ರಿಕೆಯ ಮಾದರಿಯು CBSE 12 ನೇ ತರಗತಿಯ ಮಾದರಿ ಪತ್ರಿಕೆಯಂತೆಯೇ ಇರಲಿಲ್ಲ, ಇದು ಬಹಳಷ್ಟು ವಿದ್ಯಾರ್ಥಿಗಳನ್ನು ಅತೃಪ್ತಿಗೊಳಿಸಿತು ಮತ್ತು ಗೊಂದಲಕ್ಕೊಳಗಾಗುವಂತೆ ಮಾಡಿತ್ತು.  ಅದರಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸೂಚನೆಗಳು ಇರಲಿಲ್ಲ.

ಸಿಬಿಎಸ್‌ಇ 12ನೇ ತರಗತಿಯ ಅಕೌಂಟ್‌ ವಿಷಯದ ಹಂತ ಒಂದರ ಪ್ರಶ್ನೆ ಪತ್ರಿಕೆ ಕೆಲವು ಟ್ರಿಕಿ ಪ್ರಶ್ನೆಗಳೊಂದಿಗೆ ಸಾಧಾರಣ ಸುಲಭವಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೆ ಪ್ರಶ್ನೆ ಪತ್ರಿಕೆಯನ್ನು ಪರಿಷ್ಕರಿಸಲಾದ ಕಾರಣ ವಿದ್ಯಾರ್ಥಿಗಳಿಗೆ ಅದರಲ್ಲಿ ಯಾವುದೇ ಸೂಚನೆಗಳಿರದೇ ಪ್ರಶ್ನೆ ಪತ್ರಿಕೆಯೇ ಅನಿರೀಕ್ಷಿತವಾಗಿತ್ತು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್( CBSE) ಕ್ಲಾಸ್ 12 ನೇ ತರಗತಿಯ ಅಕೌಂಟೆನ್ಸಿ ಅಥವಾ ಅಕೌಂಟ್ಸ್ ಟರ್ಮ್ 1 ಪರೀಕ್ಷೆ 2021- 22 ಇಂದು   ಅಂದರೆ ಡಿಸೆಂಬರ್ 13ರಂದು ನಡೆದಿದ್ದು ಇದು ಬಹು ಆಯ್ಕೆಯ ಪ್ರಶ್ನೆ ಆಧಾರಿತ ಪ್ರಶ್ನೆ ಪತ್ರಿಕೆ( MCQ)ಆಗಿತ್ತು.  ಪ್ರಶ್ನೆ ಪತ್ರಿಕೆ ಮಾದರಿಯು ಸಿಬಿಎಸ್‌ಇ ಮಾದರಿ ಪತ್ರಿಕೆಯಂತೆಯೇ ಇಲ್ಲದೇ ಇದ್ದ ಕಾರಣ ಇಂದಿನ ಪರೀಕ್ಷೆಯೂ ಸಂಪೂರ್ಣ ಗೊಂದಲದಿಂದಲೇ ಆರಂಭವಾಯಿತು. 

CBSE academic session 2021-22: ಸಿಬಿಎಸ್‌ಸಿ ವಿದ್ಯಾರ್ಥಿಗಳ ನೋಂದಣಿ ಡಿ.15 ರಿಂದ ಆರಂಭ

ಈ ಅಕೌಂಟ್‌ ಪ್ರಶ್ನೆ ಪತ್ರಿಕೆಯ ಆನ್ಸರ್‌ ಕೀ ಇನ್ನಷ್ಟೇ ರಿಲೀಸ್‌ ಆಗಬೇಕಿದೆ. ಪ್ರಸ್ತುತ ಶಿಕ್ಷಕರು ಪ್ರಶ್ನೆ ಪತ್ರಿಕೆ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ 2 ಗಂಟೆ ವೇಳೆಗೆ ಉತ್ತರ ಪತ್ರಿಕೆ ಬಿಡುಗಡೆಯಾಗಲಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದು, ನಾನು 40 ಅಂಕಗಳಿಗೆ 45 ಪ್ರಶ್ನೆಗಳನ್ನು ಉತ್ತರಿಸಬೇಕೇಂದು ನಿರೀಕ್ಷಿಸಿದ್ದೆ ಆದರೆ ಇಂದಿನ ಪತ್ರಿಕೆಯಲ್ಲಿ ನಾನು 40 ಅಂಕಗಳಿಗೆ 40 ಪ್ರಶ್ನೆಗಳನ್ನು ಮಾತ್ರ ಮಾಡಬೇಕಾಗಿತ್ತು, ನನ್ನ ದೋಷದ ವ್ಯಾಪ್ತಿಯನ್ನು ಇದು ಕಡಿಮೆ ಮಾಡಿತು. ನಾವು 10 ನಿಮಿಷಗಳನ್ನು ವ್ಯರ್ಥ ಮಾಡಿದೆವು ಎಂದು ದೆಹಲಿ ಪಬ್ಲಿಕ್‌ ಶಾಲೆಯ( DPS)12 ನೇ ತರಗತಿ ವಿದ್ಯಾರ್ಥಿನಿ ಸಿಯಾ ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಮತ್ತೊಬ್ಬ ವಿದ್ಯಾರ್ಥಿ  ಪ್ರಶ್ನೆ ಪತ್ರಿಕೆ ಸ್ವಲ್ಪ ಟ್ರಿಕಿ ಆಗಿತ್ತು. ಕೆಲವು ಥಿಯರಿ ಪ್ರಶ್ನೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ದೂರಿದರು.ಆದರೆ ಪ್ರಶ್ನೆ ಪತ್ರಿಕೆಯನ್ನು ಪರಿಶೀಲಿಸಿದ ಶಿಕ್ಷಕರು ಅದನ್ನು ಸುಲಭ ಮತ್ತು ನೇರವಾಗಿದೆ ಎಂದು ಹೇಳಿದ್ದಾರೆ. ಪ್ರಶ್ನೆ ಪತ್ರಿಕೆಯೂ ಸಂಪೂರ್ಣವಾಗಿ ಎನ್‌ಸಿಇಆರ್‌ಟಿ(NCERT)ಯನ್ನು ಆಧರಿಸಿದೆ ಮತ್ತು ಎನ್‌ಸಿಇಆರ್‌ಟಿಯನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ತೊಂದರೆ ಮಟ್ಟಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಇದರಲ್ಲಿ ವಿದ್ಯಾರ್ಥಿಗಳು ಸುಲಭವಾಗಿ 40 ರಲ್ಲಿ 30 ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ 38 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವುದು ನಿಜವಾಗಿಯೂ ಟ್ರಿಕಿಯಾಗಿದೆ ಎಂದು 15 ವರ್ಷಗಳಿಂದ ಅಕೌಂಟ್  ಬಗ್ಗೆ ಪಾಠ ಮಾಡುತ್ತಿರುವ ಶಿಕ್ಷಕಿ ಪಾರುಲ್  ಹೇಳಿದ್ದಾರೆ.

CBSE Mistake: ಗುಜರಾತ್ ಹತ್ಯಾಕಾಂಡ ಯಾರ ಆಡಳಿತದಲ್ಲಾಯಿತೆಂಬ ಪಶ್ನೆ

ವಿಳಂಬವಾದ ಸೂಚನೆಗಳಿಂದ ಮತ್ತು ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಬದಲಾದ ಕಾರಣ ಈ ಹಿಂದೆ ಸ್ವಲ್ಪ ಗೊಂದಲವಿತ್ತು. ವಿದ್ಯಾರ್ಥಿಗಳಿಗೆ ಬದಲಾವಣೆಗಳನ್ನು ಸರಿಯಾಗಿ ವಿವರಿಸಲಾಗಿದೆ ಎಂದು ಭಾವಿಸುತ್ತೇವೆ ಎಂದ ಅವರು. ಇದು ದುರದೃಷ್ಟಕರ ಎಂದು ಪ್ರಶ್ನೆ ಪತ್ರಿಕೆಯ ಮಾದರಿಯನ್ನು ಹಂಚಿಕೊಂಡರು. ಇತ್ತ ಬಿಎಸ್‌ಇಯ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲೂ ಗೊಂದಲಗಳಿರುವ ಬಗ್ಗೆ ವರದಿಯಾಗಿದೆ. ದೇಶಾದ್ಯಂತ ಪ್ರಶ್ನೆ ಪತ್ರಿಕೆ ಬಗ್ಗೆ ಆಕ್ಷೇಪಗಳು ಬಂದ ಬೆನ್ನಲ್ಲೇ ವಿಷಯತಜ್ಞರಿಂದ ಪ್ರಶ್ನೆ ಪತ್ರಿಕೆಯನ್ನು ಮರು ಪರಿಶೀಲನೆ ಮಾಡುವಂತೆ ಸಿಬಿಎಸ್‌ಇ ಆದೇಶಿಸಿದೆ.

Follow Us:
Download App:
  • android
  • ios