* ಗೃಹ ಸಚಿವರ ಪದಕ ವಿಜೇತ ಕುಮಾರ್‌* 1.94 ಕೋಟಿ ಅಕ್ರಮ ಆಸ್ತಿ: ಸಿಬಿಐ ಡಿವೈಎಸ್ಪಿ ವಿರುದ್ಧ ಸಿಬಿಐನಿಂದಲೇ ಕೇಸು* ಬೆಂಗಳೂರು ಸಿಬಿಐ ಕಚೇರಿಯ ಅಧಿಕಾರಿ

ನವದೆಹಲಿ(ಜೂ.29): 1.94 ಕೋಟಿ ರು. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸಿಬಿಐ ಡಿವೈಎಸ್ಪಿ ಬೃಜೇಶ್‌ ಕುಮಾರ್‌ ಅವರ ವಿರುದ್ಧ ಖುದ್ದು ಸಿಬಿಐ ಅಧೀಕಾರಿಗಳೇ ಪ್ರಕರಣ ದಾಖಲಿಸಿರುವ ಪ್ರಸಂಗ ನಡೆದಿದೆ.

ಬೃಜೇಶ್‌ ಅವರು ‘ಉತ್ತಮ ಕರ್ತವ್ಯ’ ಮಾಡಿದ್ದಕ್ಕೆ ಗೃಹ ಸಚಿವರ ಪದಕವನ್ನೂ ಪಡೆದಿದ್ದಾರೆ. ಆದರೆ ಇವರು ತಮ್ಮ ಆದಾಯಕ್ಕಿಂತ 3 ಪಟ್ಟು ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇನ್ಸ್‌ಪೆಕ್ಟರ್‌ ಆಗಿದ್ದ ಕುಮಾರ್‌, 2017ರಲ್ಲಿ ಡಿವೈಎಸ್ಪಿ ಆಗಿ ಬಡ್ತಿ ಹೊಂದಿದ್ದರು. ಬೆಂಗಳೂರಿನ ಪ್ರೆಸ್ಟೀಜ್‌ ರಾಯಲ್‌ ಗಾರ್ಡನ್‌ ಅಪಾರ್ಟ್‌ಮೆಂಟ್‌ನಲ್ಲಿ 1.9 ಕೋಟಿ ನೀಡಿ 2020ರಲ್ಲಿ 2 ಫ್ಲ್ಯಾಟ್‌ ಖರೀದಿಸಿದ್ದರು. ಖರೀದಿಗೆ ತಂದೆಯ ಹೆಸರು ಬಳಸಿದ್ದರು. ಪತ್ನಿ ಸ್ವೀಟಿ ಸಿಂಗ್‌ ಹೆಸರಲ್ಲಿ ಶುಭೋದಯ ಲೌರೇಲ್‌ ಎಂಬ ಪಾರ್ಟ್‌ಮೆಂಟಲ್ಲಿ ಫ್ಲ್ಯಾಟ್‌ ಖರೀದಿಸಿದ್ದರು ಎಂದು ದೂರಲಾಗಿದೆ.