ಕಾವೇರಿ ಜಲವಿವಾದವನ್ನು ನಾವೆಲ್ಲರೂ ಒಟ್ಟಾಗಿ ಕುಳಿತು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕು ಕಾನೂನು ಹೋರಾಟದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಸಲಹೆ ನೀಡಿದರು.

ಹೊಸದಿಲ್ಲಿ:ಕಾವೇರಿ ಜಲವಿವಾದವನ್ನು ನಾವೆಲ್ಲರೂ ಒಟ್ಟಾಗಿ ಕುಳಿತು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕು ಕಾನೂನು ಹೋರಾಟದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಸಲಹೆ ನೀಡಿದರು.

ಸೋಮವಾರ ನಡೆದ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಅವರು, ಕರ್ನಾಟಕ ಕಾವೇರಿ ನದಿಯಷ್ಟೇ ಅಲ್ಲ, ನೆರೆರಾಜ್ಯಗಳೊಂದಿಗೆ ಹಲವು ನದಿಗಳ ವಿವಾದವಿದೆ. ನೀರಿನ ವಿಚಾರವಾಗಿ ಕರ್ನಾಟಕ ಸಂಕಷ್ಟ ಅನುಭವಿಸುತ್ತಿದೆ. ಪ್ರತಿಯೊಂದನ್ನೂ ಕಾನೂನು ಹೋರಾಟದ ಮೂಲಕ ಪಡೆಯಲಾಗದು. ಎಲ್ಲರೂ ಕುಳಿತು ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು. 

ಜಲವಿವಾದ ಕುರಿತು ಮಾಜಿ ಪ್ರಧಾನಿ ಮಾತನಾಡಿರುವ ವಿಡಿಯೋ ಇಲ್ಲಿದೆ

Scroll to load tweet…