ವಯನಾಡ್‌[ಡಿ.06]: ತಮ್ಮ ವಿರುದ್ಧ ಬಿಜೆಪಿ ನಾಯಕರು ದೇಶಾದ್ಯಂತ ಸಾಕಷ್ಟುಪ್ರಕರಣ ದಾಖಲಿಸುತ್ತಿದ್ದಾರೆ. ಇದು ನನ್ನನ್ನು ತಲ್ಲಣಗೊಳಿಸುವುದಿಲ್ಲ, ಬದಲಾಗಿ ಹೆಚ್ಚು ಕೇಸು ಬಿದ್ದಷ್ಟೂಅವು ನನ್ನ ಕೊರಳಿಗೆ ಬೀಳುವ ಪದಕಗಳಿಗೆ ಸಮಾನ. ಇದರಿಂದ ಹೆಚ್ಚು ಸಂತೋಷವಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೇರಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ 15 ರಿಂದ 16 ಪ್ರಕರಣಗಳಿವೆ. ಸೈನಿಕನ ಕಂಡಾಗ ಅವರ ಎದೆಯ ಮೇಲೆ ಸಾಕಷ್ಟುಪದಕಗಳು ಇರುತ್ತವೆ. ಅದೇ ರೀತಿ ನನ್ನ ವಿರುದ್ಧ ದಾಖಲಾಗುವ ಕೇಸುಗಳು ನನಗೆ ಪದಕದಂತೆ. ಪ್ರತಿ ಕೇಸುಗಳು ನನ್ನ ಕೊರಳಿಗೆ ಬೀಳುವ ಪದಕಗಳೆಂದು ಭಾವಿಸುತ್ತೇನೆ ಎಂದಿದ್ದಾರೆ.

ಕೇರಳ ಪರ ಮತ್ತೆ ರಾಹುಲ್ ಬ್ಯಾಟಿಂಗ್: ಹೊಸ ರೈಲು ಮಾರ್ಗಕ್ಕೆ ಆಗ್ರಹ!

ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂಬ ಆಗ್ರಹ ಮಂಡಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇದೀಗ ಕೇರಳ- ಕರ್ನಾಟಕ ನಡುವೆ ಹೊಸ ರೈಲು ಮಾರ್ಗಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂಜನಗೂಡು- ವಯನಾಡ್‌- ನಿಲಂಬೂರು ರೈಲು ಯೋಜನೆಯನ್ನು ತ್ವರಿತಗೊಳಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.