8 ಪಲ್ಟಿಯಾದ ಕಾರು, ಹರಹಾಸದಿಂದ ಹೊರಬಂದು ಚಹಾ ಕೇಳಿದ ಪ್ರಯಾಣಿಕರು;ವಿಡಿಯೋ!
ಭೀಕರ ಅಪಘಾತದಲ್ಲಿ ಕಾರು ಪಲ್ಟಿಯಾಗಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ 8 ಪಲ್ಟಿಯಾದ ಕಾರು ಗೇಟಿನಲ್ಲಿ ನೇತಾಡಿಕೊಂಡು ನಿಂತಿದೆ. ಅಚ್ಚರಿ ಎಂದರೆ ಕಾರಿನ ಒಳಗಿದ್ದ ಪ್ರಯಾಣಿಕರು ಹರಸಾಹಸದಿಂದ ಹೊರಬಂದು ಚಹಾ ಕೇಳಿದ ಘಟನೆ ನಡೆದಿದೆ. ಈ ರೋಚಕ ವಿಡಿಯೋ ಇಲ್ಲಿದೆ.
ನಾಗೌರ್(ಡಿ.22) ಐವರು ಪ್ರಯಾಣಿಕರು ಸಂಚರಿಸುತ್ತಿದ್ದ ಎಸ್‌ಯುವಿ ಕಾರು ಭೀಕರ ಅಪಘಾತಕ್ಕೀಡಾಗಿದೆ. ಅತೀ ವೇಗವಾಗಿ ಸಾಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ವೇಗ ಹಾಗೂ ಅಪಘಾತದ ತೀವ್ರತೆಗೆ ಕಾರು ಬರೋಬ್ಬರಿ 8 ಪಲ್ಟಿಯಾಗಿದೆ. ಕೊನೆಗೆ ವಾಹನ ಶೂ ರೂಂ ಗೇಟಿನನಲ್ಲಿ ನೇತಾಡಿಕೊಂಡು ಕಾರು ನಿಂತಿದೆ. ಕೆಲ ಹೊತ್ತಲ್ಲೇ ಕಾರಿನಿಂದ ಹರಸಾಹಸಮಾಡಿ ಇಳಿದ ಪ್ರಯಾಣಿಕರು ಶೋ ರೂಂ ತುರ್ತು ನೆರವಿನ ಬದಲು ಚಹಾ ಕೇಳಿದ ಘಟನೆ ರಾಜಸ್ಥಾನದ ನಾಗೌರ್‌ನಲ್ಲಿ ನಡೆದಿದೆ. ಕಾರು ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಾಗೌರ್‌ನಿಂದ ಬಿಕಾನೆರ್‌ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಐವರು ಪ್ರಯಾಣಿಕರು ಕಾರಿನಲ್ಲಿದ್ದರು. ಎಸ್‌ಯುವಿ ಕಾರಿನ ಮೂಲಕ ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿದೆ. ರಸ್ತೆಯ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ವೇಗವಾಗಿ ಸಾಗುತ್ತಿದ್ದ ಕಾರಣ ಕಾರು ಏಕಾಏಕಿ ಅಪಘಾತಕ್ಕೀಡಾಗಿದೆ. ಇಷ್ಟೇ ಅಲ್ಲ ಪಲ್ಟಿಯಾಗಿದೆ. ವೇಗದ ಕಾರಣ ಕಾರು 8 ಪಲ್ಟಿಯಾಗಿದೆ. ರಸ್ತೆಯ ಪಕ್ಕದಲ್ಲಿದ್ದ ಕಂಪೌಂಡ್ ಬಳಿ ಪಲ್ಟಿಯಾಗಿ, ವಾಹನ ಶೋ ರೂಂ ಗೇಟಿನಲ್ಲಿ ನೇತಾಡುವ ಸ್ಥಿತಿಯಲ್ಲಿ ನಿಂತಿದೆ.
ಅಪಘಾತದಲ್ಲಿ ಮಹಿಳಾ ಪೈಲೆಟ್ ಸಾವು, ದುರಂತದಲ್ಲೂ 7 ಮಂದಿಗೆ ಬೆಳಕಾದ ಚೇಶ್ತಾ ಬಿಷ್ಣೋಯ್!
ಕಾರಿನ ವೇಗ, ಅಪಘಾತ ಹಾಗೂ ಕಾರು ಪಲ್ಟಿಯಾದ ರೀತಿ ನೋಡಿದರೆ ಕಾರಿನೊಳಗಿದ್ದ ಪ್ರಯಾಣಕರು ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೆಲ ಹೊತ್ತಲ್ಲೇ ಕಾರಿನಿಂದ ಒಬ್ಬೊಬ್ಬ ಪ್ರಯಾಣಿಕರು ಹರಸಾಹಸ ಮಾಡಿ ಇಳಿದಿದ್ದಾರೆ. ಕಾರಿನೊಳಗಿನ ಐವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಾತ್ರಿ ವೇಳೆ ಈ ಅಪಘಾತ ನಡೆದಿರುವ ಕಾರಣ ಶೋ ಸಿಬ್ಬಂದಿಗಳು ಸೇರಿದಂತೆ ಬಹುತೇಕರು ಮಲಗಿದ್ದರು.
ಕಾರು ಅಪಘಾತದ ಬಳಿಕ ಕಾರಿನಿಂದ ನಿಧಾನವಾಗಿ ಇಳಿದ ಪ್ರಯಾಣಿಕರು ಶೋ ರೂ ಬಳಿ ಬಂದು ಸಿಬ್ಬಂದಿಗಳನ್ನು ಎಬ್ಬಿಸಿದ್ದಾರೆ. ನಿದ್ದೆಯಿಂದ ಎದ್ದ ಸಿಬ್ಬಂದಿಗಳಿಗೆ ಕಾರು ಅಪಘಾತಗೊಂಡಿರುವ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ನಿದ್ದೆಯಿಂದ ಎದ್ದ ಶೋ ರೂಂ ಸಿಬ್ಬಂದಿಗಳ ಬಳಿಕ ಪ್ರಯಾಣಿಕರು ಚಹಾ ಇದೆಯಾ ಎಂದು ಕೇಳಿ್ದ್ದಾರೆ. ವೈದ್ಯಕೀಯ ನೆರವು, ಸಹಾಯದ ಬದಲು ಮೊದಲು ಚಹಾ ಕೇಳಿದ್ದಾರೆ. ನಿದ್ದೆಯಿಂದ ಎಬ್ಬಿಸಿ ಚಹಾ ಕೇಳುತ್ತಿದ್ದಾರಲ್ಲ ಎಂದು ಅನುಮಾನಗೊಂಡಾಗ, ಕಾರು ಅಪಘಾತದ ಮಾಹಿತಿ ತಿಳಿದಿದೆ.
ವಿಶೇಷ ಅಂದರೆ ಕಾರು 8 ಪಲ್ಟಿಯಾಗಿ ಹೊರಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಕಾರಿನೊಳಗಿನ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಕಾರು ಪಲ್ಟಿಯಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಠವಶಾತ್ ಈ ಬೆಂಕಿ ಜ್ವಾಲೆಯಾಗಿಲ್ಲ. ಅಲ್ಲೆ ನಂದಿ ಹೋಗಿದೆ. ಎಲ್ಲಾ ದಿಕ್ಕಿನಿಂದಲೂ ಕಾರು ಪ್ರಯಾಣಿಕರ ಅದೃಷ್ಠ ಚೆನ್ನಾಗಿತ್ತು. ಯಾವುದೇ ಗಾಯವಾಗದೆ, ಕಾರು ಬೆಂಕಿ ಹೊತ್ತಿಕೊಳ್ಳದೆ ನಿಂತಿದೆ. ಇಷ್ಟೇ ಅಲ್ಲ ಕಾರಿನಿಂದ ಒಬ್ಬೊಬ್ಬರಾಗಿ ಇಳಿಯುವ ವೇಳೆ ಕಾರು ಗೇಟಿನಿಂದ ಜಾರಿದರೂ ಪ್ರಾಣಕ್ಕೆ ಅಪಾಯವಿತ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಕಾರು ವೇಗವಾಗಿ ಸಾಗುತ್ತಿದ್ದ ಕಾರಣ ನಿಯಂತ್ರಣ ಕಳೆದುಕೊಂಡಿದೆ. ಈ ಕುರಿತು ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.
ಸೆರೆಯಾಯ್ತು ಪ್ರವಾಸಿಗರ ದೋಣಿಗೆ ಭಾರತೀಯ ನೌಕಾಪಡೆ ಬೋಟು ಡಿಕ್ಕಿ ಘಟನೆ, 13 ಮಂದಿ ಸಾವು!
ರಾಜಸ್ಥಾನದ ಈ ಅಪಘಾತದ ದೃಶ್ಯಗಳು ಎಲ್ಲೆಡೆ ಹರಿದಾಡಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಅನ್ನೋ ಮಾಹಿತಿ ಸಮಾಧಾನ ತರಿಸಿದೆ. ಇಷ್ಟೇ ಅಲ್ಲ ಇದೀಗ ದೊಡ್ಡ ಅಪಘಾತವಾದರೂ ಎಲ್ಲಾ ಪ್ರಯಾಣಿಕರನ್ನು ಉಳಿಸಿದ ಕಾರು ಯಾವುದು ಎಂದು ಹಲವರು ಹುಡುಕುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಸ್ಥಳೀಯರ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳೀಯರ ಪ್ರಕಾರ ಕಾರಿನ ವೇಗವೆ ಅಪಘಾತಕ್ಕೆ ಕಾರಣ ಎಂದಿದ್ದಾರೆ.