ಕಲ್ಲಿಕೋಟೆ(ಆ.09): ಕಲ್ಲಿಕೋಟೆ ದುರಂತದಲ್ಲಿ ಸಾವನ್ನಪ್ಪಿದ ಪೈಲಟ್‌ ದೀಪಕ್‌ ಅವರ ಇಡೀ ಕುಟುಂಬವೇ ಸೇನಾನಿಗಳದ್ದು ಎಂಬ ವಿಷಯ ಬೆಳಕಿಗೆ ಬಂದಿದೆ. ಆದರೆ ನೋವಿನ ಸಂಗತಿಯೆಂದರೆ ಪೈಲಟ್‌ ದೀಪಕ್‌ ಸಾವನ್ನಪ್ಪುವುದರೊಂದಿಗೆ ಅವರ ಪೋಷಕರು ಅನಾಥರಾಗಿದ್ದಾರೆ.

ಕಾರಣ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ಕಿರಿಯ ಸೋದರ ವಿಕಾಸ್‌ ಸಾಠೆ ಕಳೆದ ವರ್ಷ ಪಂಜಾಬ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಕೇವಲ 2 ವರ್ಷದಲ್ಲಿ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕರ್ನಲ್‌ ವಸಂತ್‌ ಸಾಠೆ (87) ಮತ್ತು ಅವರ ಪತ್ನಿ ಶೋಕದ ಕಡಲಲ್ಲಿ ಮುಳುಗಿದ್ದಾರೆ.

ನಿಗದಿಗಿಂತ ದೂರದಲ್ಲಿ ಇಳಿದಿದ್ದೇ ಅಪಘಾತಕ್ಕೆ ಕಾರಣ?

1990ರ ದುರ್ಘಟನೆಯಲ್ಲಿ ಪಾರಾಗಿದ್ದರು

ಶುಕ್ರವಾರ ಕಲ್ಲಿಕೋಟೆ ವಿಮಾನ ಅಪಘಾತದಲ್ಲಿ ಬಲಿಯಾದ ಹಿರಿಯ ಪೈಲಟ್‌ ದೀಪಕ್‌ ಸಾಠೆ (58), 1990ರಲ್ಲಿ ನಡೆದ ಇದೇ ರೀತಿಯ ವಿಮಾನ ಅಪಘಾತದಲ್ಲಿ ಬದುಕುಳಿಬಂದಿದ್ದರು ಎಂಬ ವಿಷಯವನ್ನು ಅವರ ಸೋದರ ಸಂಬಂಧ ನೀಲೇಶ್‌ ಸಾಠೆ ಬಹಿರಂಗಪಡಿಸಿದ್ದಾರೆ. ಆಗ ಭಾರತೀಯ ವಾಯುಪಡೆಯಲ್ಲಿದ್ದ ದೀಪಕ್‌, ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. 6 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮತ್ತೆ ಪೈಲಟ್‌ ಆಗಿ ವೃತ್ತಿಯಲ್ಲಿ ಮುಂದುವರಿದಿದ್ದರು. ಅವರ ಆತ್ಮಬಲ ಹಾಗೂ ಅವರಲ್ಲಿದ್ದ ಇಚ್ಛಾಶಕ್ತಿ ಅವರನ್ನು ಮತ್ತೆ ಪೈಲಟ್‌ ಆಗಿ ಮುಂದುವರಿಯುವಂತೆ ಮಾಡಿತು ಎಂದು ತಿಳಿಸಿದ್ದಾರೆ.

ತಾನು ಮಡಿದು ನೂರಾರು ಜನರ ಜೀವ ಉಳಿಸಿದ ಪೈಲಟ್‌ ದೀಪಕ್‌!

ಅಮ್ಮನ ಹುಟ್ಟುಹಬ್ಬಕೆ ಸರ್‌ಪ್ರೈಸ್‌ ನೀಡಲು ಬಯಸಿದ್ದ ಕ್ಯಾ. ಸಾಠೆ

ಕಲ್ಲಿಕೋಟೆಯಲ್ಲಿ ದುರಂತ ಸಾವು ಕಂಡಿರುವ ಕ್ಯಾಪ್ಟನ್‌ ದೀಪಕ್‌ ಸಾಠೆ, ಶನಿವಾರವೇ ಮಹಾರಾಷ್ಟ್ರದ ನಾಗ್ಪುರಕ್ಕೆ ಆಗಮಿಸಲು ನಿರ್ಧರಿಸಿದ್ದರು. ಆ ಮೂಲಕ, ಅವರ ಅಮ್ಮನ 84ನೇ ವರ್ಷದ ಅಮ್ಮನ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್‌ ನೀಡಲು ಬಯಸಿದ್ದರು. ಆದರೆ, ಶುಕ್ರವಾರ ಸಂಜೆಯೇ ಕ್ಯಾಪ್ಟನ್‌ ಸಾಠೆ ವಿಮಾನ ದುರುಂತದಲ್ಲಿ ತಮ್ಮನ್ನು ಅಗಲಿದ್ದಾರೆ ಎಂದು ಸಾಠೆ ಅವರ ಸಂಬಂಧಿಕರೊಬ್ಬರು ದುಃಖತಪ್ತರಾಗಿದ್ದಾರೆ.