ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಸಾಧ್ಯವೇ ಇಲ್ಲ/ ಬಂಗಾಳವನ್ನು ಇನ್ನೊಂದು ಗುಜರಾತ್ ಮಾಡಲು ಬಿಡುವುದಿಲ್ಲ/ ಹೊರಗಿನಿಂದ ಬಂದವರಿಗೆ ಅಧಿಕಾರ ಕೊಡಬೇಡಿ/ ಮಮತಾ ಬ್ಯಾನರ್ಜಿ ವಾಗ್ದಾಳಿ
ಕೋಲ್ಕತ್ತಾ(ಡಿ. 24) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಪಶ್ಚಿಮ ಬಂಗಾಳವನ್ನು ಗುಜರಾತ್ ಮಾಡಲು ಬಿಡುವುದಿಲ್ಲ ಎಂದು ಅಬ್ಬರಿಸಿದ್ದಾರೆ.
ಪಶ್ಚಿಮ ಬಂಗಾಳ ಶ್ರೇಷ್ಠತೆ ಮತ್ತು ಅಭಿವೃದ್ಧಿ ಹಾದಿಯಲ್ಲಿದೆ. ಯಾವ ಕಾರಣಕ್ಕೂ ಬಿಜೆಪಿ ಯ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. ಬಂಗಾಳದ ಜನರು ಕೇಸರಿ ಪಕ್ಷದ ಪ್ರವೇಶವನ್ನು ತಡೆಯಬೇಕಾಗುತ್ತದೆ. ಹೊರಗಿನಿಂದ ಬಂದವರು ಇಲ್ಲಿ ಬಾವುಟ ಹಾರಿಸಲು ಬಿಡುವುದಿಲ್ಲ ಎಂದಿದ್ದಾರೆ.
ಪ್ರತಿಭಟನಾ ನಿರತ ರೈತರೊಂದಿಗೆ ಮಮತಾ ಮಾತು
ಬಿಜೆಪಿ ಅಧಿಕಾರಕ್ಕೆ ಬಂದರೆ ಹೊಸ ನೀತಿ ನಿಯಮ ಜಾರಿ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು ಹಾಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.
ಅಮಿತ್ ಶಾ ಎರಡು ದಿನ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಮಾಡಿದ್ದರು. ಬಿಜೆಪಿ ಹೊರಗಿನ ಪಕ್ಷ ಎಂಬ ಮಮತಾ ಹೇಳಿಕೆಗೆ ಠಕ್ಕರ್ ಕೊಟ್ಟಿದ್ದರು. ಇದೇ ಹೇಳಿಕೆ ಇಟ್ಟುಕೊಂಡು ಟೀಕೆ ಮಾಡಿರುವ ಮಮತಾ ಪಶ್ಚಿಮ ಬಂಗಾಳದ ಮುಂದಿನ ಸಿಎಂ ಇದೇ ಮಣ್ಣಿನ ಮಕ್ಕಳಾಗಿರುತ್ತಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಅರ್ಥ ವ್ಯವಷ್ಥೆ ಕುಸಿದಿದೆ ಎಂದು ಶಾ ಹೇಳಿದ್ದರೆ ಮಮತಾ ಇಡೀ ದೇಶದ ಉದಾಹರಣೆಯನ್ನು ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದ ರಾಜಕಾರಣದ ಚಿತ್ರಣ ಮಮತಾ ವರ್ಸಸ್ ಅಮಿತ್ ಶಾ ಆಗಿ ಬದಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 24, 2020, 2:59 PM IST