Asianet Suvarna News Asianet Suvarna News

ಇದೊಂದು ನೋಡೋದು ಬಾಕಿ ಇತ್ತು: ಆನ್‌ಲೈನ್‌ನಲ್ಲಿ ಸಿಕ್ತಿದೆ ಮಕ್ಕಳಿಗೆ ಹೊಡೆಯೋ ಬೆತ್ತ!

* ಅಮೆಜಾನ್ನಲ್ಲಿ ಸಿಕ್ಕಿದೆ ಮಕ್ಕಳಿಗೆ ಹೊಡೆಯೋ ಬೆತ್ತ

* ಟ್ರೋಲ್‌ ಆಯ್ತು ಅಮೆಜಾನ್‌ ಜಾಹೀರಾತು

Cane Sticks For Beating Kids Being Sold Online Leaves Desi People Divided pod
Author
Bangalore, First Published Sep 16, 2021, 1:59 PM IST
  • Facebook
  • Twitter
  • Whatsapp

ನವದೆಹಲಿ(ಸೆ.16): ಬಾಲ್ಯದಲ್ಲಿ ಬಹುತೇಕ ಮಕ್ಕಳು ಬಹಳ ಕಿತಾಪತಿ ಮಾಡುತ್ತಿರುತ್ತಾರೆ. ಇದರಿಂದ ಕೋಪಗೊಂಡ ತಂದೆ, ತಾಯಿ ಮಕ್ಕಳ ಕಿತಾಪತಿ ಕಡಿಮೆಯಾಗಿಸಲು ಬೈಯ್ಯೋದು, ಹೊಡೆಯೋದು ಕೂಡಾ ಸಹಜ. ಕೆಲ ಮಕ್ಕಳು ಬೈಗುಳಕ್ಕೆ ಸುಮ್ಮನಾದರೆ, ಇನ್ನು ಕೆಲ ಮಕ್ಕಳು ಹೊಡೆತಕ್ಕೂ ಬಗ್ಗುವುದಿಲ್ಲ. ಹೀಗಿರುವಾಗ ಮಕ್ಕಳ ಕಿತಾಪತಿ ಸಹಿಸಲಾಗದೆ ಹೆತ್ತವರು, ಅದರಲ್ಲೂ ವಿಶೇಷವಾಗಿ ತಾಯಿ ಲಟ್ಟಣಿಗೆ, ಬೆತ್ತ ಇವುಗಳನ್ನು ಬಳಸುತ್ತಾರೆ. ಆದರೀಗ ಆನ್‌ಲೈನ್‌ನಲ್ಲೂ ಮಕ್ಕಳಿಗೆ ಹೊಡೆಯುವ ಬೆತ್ತ ಮಾರಾಟ ಮಾಡಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟು ಹಾಕಿದೆ.

ಹೌದು ಅಮೆಜಾನ್‌ನಲ್ಲಿ ಕಂಡು ಬಂದ ವಸ್ತುಗಳ ಪಟ್ಟಿಯಲ್ಲಿ ಮಕ್ಕಳಿಗೆ ಹೊಡೆಯುವ ಬೆತ್ತದ ಆಯ್ಕೆಯೂ ಕೊಡಲಾಗಿತ್ತು. ರೆಡಿಟ್ ಬಳಕೆದಾರನೊಬ್ಬ ಈ ಬಗ್ಗೆ ಮಾಹಿತಿ ಶೇರ್ ಮಾಡುತ್ತಾ ನಾನು ಅಂತಿಮ ಕ್ರಿಯೆಯ ಸಾಮಾಗ್ರಿಗಳ ಬಳಿಕ ಅಮೆಜಾನ್‌ನಲ್ಲಿ ನನಗೆ ಅಚ್ಚರಿ ಕೊಟ್ಟ ಸಾಮಗ್ರಿ ಇದು. ಅದರಲ್ಲೂ ವಿಶೇಷವೆಂದರೆ ಅಮೆಜಾನ್‌ನಲ್ಲಿ ಈ ಬೆತ್ತಗಳಲ್ಲೂ ವಿವಿಧ ಬಗೆಯ ಹಾಗೂ ಬ್ರಾಂಡ್‌ಗಳಿವೆ. ಹೊಡೆಯುವ ಬೆತ್ತದಲ್ಲೂ ವ್ಯತ್ಯಾಸ ಇರುತ್ತದಾ ಎಂದು ಪ್ರಶ್ನಿಸಿದ್ದಾರೆ. 

ಸದ್ಯ ಅಮೆಜಾನ್‌ನಲ್ಲಿ ಬಂದ ಈ ಬೆತ್ತದ ಸ್ಕ್ರೀನ್‌ಶಾಟ್‌ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಈ ಕಣ್ಣಿಂದ ಇದೊಂದು ನೋಡುವುದು ಬಾಕಿ ಇತ್ತು ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ತೆಂಗಿನಕಾಯಿ ಚಿಪ್ಪು ಕೂಡಾ ಮಾರಾಟ

ಇನ್ನು ಅಮೆಜಾನ್‌ನಲ್ಲಿ ಇಂತಹ ಅಚ್ಚರಿಯ ವಸ್ತುಗಳು ಮಾರಾಟವಾಗುವುದು ಇದೇ ಮೊದಲೇನಲ್ಲ. ಈ ಹಿಂದೆ ತೆಂಗಿನ ಕಾಯಿ ಚಿಪ್ಪು, ಸೆಗಣಿ ಬೆರಣಿ ಸಿಗುತ್ತಿದ್ದ ವಿಚಾರಕ್ಕೂ ಭಾರೀ ಟ್ರೋಲ್ ಆಗಿತ್ತು.

Follow Us:
Download App:
  • android
  • ios